Blog number 1111. ಮಾದಲಿ ಎಂಬ ಶುದ್ಧ ದೇಸಿ , ಶಕ್ತಿ ವರ್ದಕವಾದ ಉತ್ತರ ಕನ್ನಡಿಗರ ದಿಡೀರ್ ಸಿಹಿ ತಿಂಡಿ ರಾಜ್ಯದ ಖ್ಯಾತ ಪತ್ರಕರ್ತ ಚಿತ್ರದುರ್ಗದ ದೋಣಿಹಳ್ಳಿ ಗುರುಮೂತಿ೯ ಅವರು ತಿಳಿಸಿದ ರೆಸಿಪಿ ಕೂಡ ನೋಡಿ
#ಮಾದಲಿ
ಮಲೆನಾಡಿನಲ್ಲಿ ಇದು ಪ್ರಚಲಿತವಲ್ಲದ ಸಿಹಿ ತಿಂಡಿ ಶಿವಮೊಗ್ಗ ಜಿಲ್ಲೆಯ ನ್ಯಾಮತಿ ನಂತರ ಇದು ಹೆಚ್ಚು ಪರಿಚಿತ ಆದರೆ ಇದರ ಹೆಸರು ಕೇಳಿದ್ದು ಬಿಟ್ಟರೆ ನನಗೆ ಇದು ನನಗೆ ಸಿಕ್ಕಿರಲಿಲ್ಲ.
ಇತ್ತೀಚಿಗೆ ಇದರ ವಿಚಾರ ಮಾತಾಡುವಾಗ ಹೊಸನಗರ ತಾಲ್ಲೂಕಿನ ಲಾರಿ ಮಾಲಿಕರ ಸಂಘದ ಉಪಾಧ್ಯಕ್ಷರಾದ ಪಾಪುಗೌಡರು "ಹೌದು ಇದು ಉತ್ತರ ಕನ್ನಡ ಜಿಲ್ಲೆಯ ಸಿಹಿ ಈಗೀಗ ಮಲೆನಾಡಿನಲ್ಲಿ ಕೂಡ ಮಾಡುತ್ತಾರೆ " ಅಂದಿದ್ದವರು ಮೊನ್ನೆ ಒಂದು ಡಬ್ಬ ಮಾದಲಿ ಕಳಿಸಿದ್ದಾರೆ.
ಇದನ್ನು ಕಾಸಿದ ತುಪ್ಪದಲ್ಲಿ ಮಿಶ್ರ ಮಾಡಿ ತಿಂದರೆ ಒ0ದು ರುಚಿ, ಹಾಲಿನ ಜೊತೆ ತಿಂದರೆ ಇನ್ನೊಂದು ರುಚಿ ಹಾಗೆ ಹಾಲು ತುಪ್ಪ ಸೇರಿಸಿದರೆ ವಿಶೇಷ ರುಚಿಯ ಸಿಹಿ ತಿಂಡಿ ಆಗುತ್ತದೆ.
ಇದರ ರೆಸಿಪಿ ಸರಳ 250 ಗ್ರಾಂ ಗೋದಿ ತರಿ ತರಿಯಾಗಿ ಹಿಟ್ಟು ಮಾಡಿಕೊಂಡು ತುಪ್ಪದಲ್ಲಿ ಹುರಿಯುತ್ತಾ ಇದಕ್ಕೆ 1 ಟೇಬಲ್ ಸ್ಪೂನ್ ಕಡಲೆ ಹಿಟ್ಟು, 1 ಟೇಬಲ್ ಸ್ಪೂನ್ ಗಸಗಸೆ, ಅದ೯ ಕಪ್ ಬೆಲ್ಲದ ಪುಡಿ, 2 ಟೇಬಲ್ ಸ್ಪೂನ್ ಕೊಬ್ಬರಿ ಪುಡಿ, 2 ಟೇಬಲ್ ಸ್ಪೂನ್ ಬೆಳಗಡಲೆ, 2 ಏಲಕ್ಕಿ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಸೇರಿಸಿ ಹುರಿದರೆ ಉತ್ತರ ಕನ್ನಡದ ಸಿಹಿ ತಿಂಡಿ ಮಾದಲಿ ತಯಾರು.
ಇದನ್ನು ಸುರಕ್ಷಿತವಾಗಿ ಡಬ್ಬಿಯಲ್ಲಿಟ್ಟರೆ ಎರೆಡು ತಿಂಗಳಾದರೂ ಹಾಳಾಗುವುದಿಲ್ಲ ಎನ್ನುತ್ತಾರೆ ಮನೆಗೆ ದಿಡೀರ್ ಅತಿಥಿಗಳು ಬಂದರೆ ಹಾಲು ತುಪ್ಪದಲ್ಲಿ ಬಡಿಸಿದರೆ ವಿಶೇಷ ಅತಿಥ್ಯ ಆಗುವುದು.
ಹಿರಿಯ ಪತ್ರಕತ೯ ಮಿತ್ರರಾದ ದೋಣಿಹಳ್ಳಿ ಗುರುಮೂತಿ೯ಯವರು ಮಾದಲಿಯನ್ನು ಸಂಪ್ರದಾಯಿಕವಾಗಿ ತಯಾರಿಸುವ ಇನ್ನೊಂದು ವಿಧಾನ ತಿಳಿಸಿದ್ದಾರೆ ಜೊತೆಗೆ ಮುಖ್ಯಮಂತ್ರಿಗಳಾಗಿದ್ದ ಜೆ ಹೆಚ್ ಪಟೇಲರು ಪ್ರತಿನಿತ್ಯ ಮಾದಲಿಯನ್ನು ಹಾಲು ತುಪ್ಪದ ಜೊತೆ ಸವಿಯುತ್ತಿದ್ದರೆಂಬ ಮಾಹಿತಿ ಕೂಡ ನೀಡಿದ್ದಾರೆ.
#ದೊಣೆಹಳ್ಳಿ_ಗುರುಮೂತಿ೯ಯವರ_ಮಾಹಿತಿ
Arun sir, ನೀವು ವಿವರಿಸಿರುವ "ಮಾದಲಿ"instant ಶೈಲಿಯದು.
ನಮ್ಮ ಮದ್ಯ ಕರ್ನಾಟಕ ಸೇರಿದಂತೆ. ಉತ್ತರ ಕರ್ನಾಟಕ
ಕಡೆಯಲ್ಲೆಲ್ಲಾ ಮಾದಲಿ ಮಾಡುವ ವಿಧಾನ ವಿಭಿನ್ನ, ಅದು ಹೆಚ್ಚು ರುಚಿಕರವೂ ಹೌದು !!
ವಿಧಾನ : ಜವೆ ಗೋಧಿಯನ್ನು ಗಿರಣಿಯಲ್ಲಿ.. ಹಿಟ್ಟು ಮಾಡಿಸಿ,
ಚಪಾತಿ ಮಾಡಿ.. ಆ ಚಪಾತಿ ಯನ್ನು.. ಜರಡಿಯ ಬೆನ್ನ ಮೇಲೆ
ಉಜ್ಜುತ್ತಾ ಹೋದರೆ ಚಪಾತಿ ಹುಡಿ.. ಹುಡಿಯಾಗಿ.. ಉದುರುತ್ತದೆ. ಉದುರಿದ ಚಪಾತಿ ಉಡಿ.. ಉಡಿಯಯನ್ನುಒರಳಲ್ಲಿ ಹಾಕಿ.. ಒನಕೆ ಯಿಂದ ಕುಟ್ಟುತ್ತಾ..
ಜೊತೆಗೆ clean ಬೆಲ್ಲದ ತುಂಡುಗಳನ್ನು ಸೇರಿಸುತ್ತಾ..
ಜೊತೆಗೆ.. ಗಸಗಸೆ.. ಬಿಳಿಎಳ್ಳು
ಸೇರಿಸುತ್ತಾ.. ಏಲಕ್ಕಿ.. ಜಾಕಾಯಿ
ಶುಂಠಿ ಪುಡಿಯನ್ನು ಉದುರಿಸುತ್ತಾ.. ಧ್ಯಾನಸ್ಥರಾಗಿ
ಈ ಕ್ರಿಯೆ ನಡೆದಾಗ.. "ಜವಾರಿ ಶೈಲಿ" ಯ ಮಾದಲಿ ಸವಿಯಲು
ಸಿದ್ದ. ಈ "ಮಾದಲಿ"ಗೆ ಹಾಲು -ಹಾಲು ಹಾಕಿ ಸವಿದರೆ ಮೈ ಮನಸ್ಸು ಪರಿಶುದ್ಧ !!
ಮರೆತ ಮಾತು :ನಿಮ್ಮ ಈ ಹಿಂದಿನ ಮಲೆನಾಡು ಜಿಲ್ಲೆಯ ಮಾಜಿ ಮುಖ್ಯಮಂತ್ರಿ ದಿವಂಗತ
J.H.ಪಟೇಲ್ ಅವರ ಅಚ್ಚುಮೆಚ್ಚಿನ ಖಾದ್ಯ ಈ "ಮಾದಲಿ" ನಿತ್ಯ ಒಂದು ಚಿಕ್ಕ
ಬಟ್ಟಲಿನಲ್ಲಿ ಹಾಲು -ತುಪ್ಪದ
ಮಿಶ್ರಣದೊಂದಿಗೆ "ಮಾದಲಿ"
ಬೇಕೇ ಬೇಕಿತ್ತು
Comments
Post a Comment