Blog number 1128. ಆನಂದಪುರಂ ಸಾಹಿತ್ಯ ಹಬ್ಬ ಬಾಗ - 10, ಹಬ್ಬು ಸಹೋದರರಲ್ಲಿ ನಾಲ್ಕನೆಯವರಾದ ಅರುಣ್ ಕುಮಾರ್ ಹಬ್ಬು ಕನಾ೯ಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದವರು ಅವರು ವಿಶ್ವದಾಖಲೆಯ ತಮ್ಮ ಹಬ್ಬು ಕುಟುಂಬಕ್ಕೆ ಸಾಗರ ತಾಲ್ಲೂಕ್ ಸಾಹಿತ್ಯ ಪರಿಷತ್ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
#ಆನಂದಪುರಂ_ಸಾಹಿತ್ಯ_ಹಬ್ಬ_10.
#ವಿಶ್ವ_ದಾಖಲೆಯ_ಹಬ್ಬು_ಸಾಹಿತ್ಯ_ಕುಟುಂಬ
#ಕನಾ೯ಟಕ_ಮಾಧ್ಯಮ_ಅಕಾಡೆಮಿ_ಪ್ರಶಸ್ತಿ_ವಿಜೇತರು
#ಅರುಣ್_ಕುಮಾರ್_ಹಬ್ಬು_ಮಾತುಗಳು
#ನಿವೃತ್ತ_ಉಪನ್ಯಾಸಕರು.
#ಪ್ರಜಾವಾಣಿ_ಬ್ಯೂರೋ_ಚೀಪ್_ಆಗಿದ್ದರು.
ಹಬ್ಬು ಕುಟುಂಬದ ಇವರ ತಂದೆ ಮತ್ತು ಎಲ್ಲಾ ಆರು ಸಹೋದರರು ಸಾಹಿತ್ಯ ಕೃತಿಗಳ ಬರೆದು ಪ್ರಕಟಿಸಿ ವಿಶ್ವ ದಾಖಲೆಗೆ ದಾಖಲಾಗಿದ್ದಾರೆ.
ಇವರನ್ನೆಲ್ಲ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕ್ ಸಾಹಿತ್ಯ ಪರಿಷತ್ ಮತ್ತು ಆನಂದಪುರಂ ಹೋಬಳಿ ಸಾಹಿತ್ಯ ಪರಿಷತ್ ಜ೦ಟಿಯಾಗಿ ಆನಂದಪುರಂ ಸಾಹಿತ್ಯ ಹಬ್ಬದಲ್ಲಿ ಈ ಕುಟುಂಬದ ಪ್ರಕಟಿತ ಪುಸ್ತಕಗಳ ಪ್ರದರ್ಶನ ಸಂವಾದ ದಿನಾಂಕ 11-ಡಿಸೆಂಬರ್ -2022 ರಂದು ಆನಂದಪುರಂನ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ನಲ್ಲಿ ನಡೆಸಿತ್ತು.
ಈ ಲೇಖನ ಮಾಲೆಯ 10ನೆ ಕಂತಿನಲ್ಲಿ ಹಬ್ಬು ಸಹೋದರರಲ್ಲಿ ನಾಲ್ಕನೆಯವರಾದ #ಅರುಣ್_ಕುಮಾರ್_ಹಬ್ಬು ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಡಿಯೋ ಇಲ್ಲಿದೆ.
https://photos.app.goo.gl/SUbW7KGQSJXcWxwk9
ಅರುಣ್ ಕುಮಾರ್ ಹಬ್ಬು ಈಗ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನೆಲೆಸಿದ್ದಾರೆ.
19 ವರ್ಷ ಉಪನ್ಯಾಸಕರಾಗಿ, 35 ವರ್ಷ ಪತ್ರಿಕೋದ್ಯಮಿ ಆಗಿ 2011ರ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಜೊತೆ ಅನೇಕ ಪ್ರಶಸ್ತಿ - ಸನ್ಮಾನಗಳನ್ನು ಪಡೆದವರು.
ಇವರು ಡಬಲ್ ಗ್ರಾಜ್ಯೂಟ್ ಎಂ.ಎ. ಇಂಗ್ಲೀಷ್ ಮತ್ತು ಎಂ.ಎ. ರಾಜಕೀಯ ಶಾಸ್ತ್ರ ಮಾಡಿದ್ದಾರೆ.
Comments
Post a Comment