Blog number 1152. ವನ್ಯಜೀವಿ ಛಾಯಾಗ್ರಹಣದಲ್ಲಿ ತಮ್ಮ ದೇ ಛಾಪು ಮುಡಿಸುತ್ತಿರುವ ಕನ್ನಡ ಅಧ್ಯಾಪಕರು, ಖ್ಯಾತ ಸಾಹಿತಿ ಡಾ. ರಹಮತ್ ತರೀಕೆರೆ ಸ್ವಂತ ತಮ್ಮ, ಪೂರ್ಣಚಂದ್ರ ತೇಜಸ್ವಿ ಕುರಿತು ಡಾಕ್ಟರೇಟ್ ಮಾಡಿರುವ ಡಾ. ಕಲಿಮುಲ್ಲಾ ಕ್ಯಾಮೆರಾ ಕಣ್ಣಿಗೆ ಬಿದ್ದ ನೀರಿಗೆ ಬಣ್ಣ ಹಾಕುವ ಅಲ್ಲ ವಿಷ ಹಾಕುವ ಮೀನು ಶಿಕಾರಿ.
ರಿಜ್ವಾನ್ ಕಳಸ ಈ ರೀತಿ ಅಭಿಪ್ರಾಯ ಪೋಸ್ಟ್ ಮಾಡಿದ್ದಾರೆ ಹಾಗಾದರೆ ಇದು ಕೆರೆ ನೀರು ವಿಷ ಮಾತ್ರ ಮಾಡುವುದಲ್ಲ ಮೀನು ತಿನ್ನುವವರ ಹೊಟ್ಟೆಗೂ ವಿಷ ಹಾಕಿದ ಹಾಗೆ !?
#ಶುಂಠಿಗೆ_ಹೊಡೆಯುವ_ಔಷಧಿ
ಹೆಸರು ಗೊತ್ತಿಲ್ಲ.
ನದಿಯಲ್ಲಿ ವಿಷ ಹಾಕಿದಾಗ ಕಲ್ಲು-ಬಂಡೆಗಳಲ್ಲಿ ಅಡಗಿ ಕೂತ ಮೀನುಗಳು ವಿಷದ ಪ್ರಭಾವದಿಂದ ದಿಕ್ಕಾಪಾಲಾಗಿ ಜೀವ ಉಳಿಸಿಕೊಳ್ಳಲು ಮೀನುಗಾರರ ಬಲೆಗೆ ಸಿಕ್ಕಿಕೊಳ್ಳುತ್ತದೆ.
ಇಂತಹ ಪೈಶಾಚಿಕ ಮೀನುಗಾರಿಕೆ ಮೀನುಗಳ ಸಂತತಿಯನ್ನು ನಾಶಮಾಡೋದೊಂದಿಗೆ ಮೀನು ತಿನ್ನುವರ ಆರೋಗ್ಯಕ್ಕು ಮಾರಕ.
ಹೆಚ್ಚಿನ ಒಳನಾಡು ಮೀನುಗಾರರು ಹಣದ ದುರಾಸೆಗೆ ಈ ರೀತಿಯ ಕುತಂತ್ರ ಮಾಡುತ್ತಾರೆ.
ವನ್ಯಜೀವಿ ಛಾಯಾಗ್ರಾಹಕ ಡಾ.ಕಲೀಮುಲ್ಲಾ ಪೇಸ್ ಬುಕ್ ಪೋಸ್ಟ್ ಲ್ಲಿ
ಶಿಕಾರಿಪುರದ ಕಡೆ ಹೊರಟಾಗ ಬೆಳಗಿನ ಚುಮುಚುಮು ಬೆಳಕು. ಕೆರೆಯ ಮೇಲೆ ಬಣ್ಣದೋಕುಳಿ. ಹಕ್ಕಿ ಚಿತ್ರ ತೆಗೆಯಲು ಹೋದ ನಮಗಿದು ಮೊದಲ ಅನುಭವ. ಅವರು ಮೀನುಗಾರರು. ಈ ಬಣ್ಣದ ನೀರು ಔಷಧಿಯೋ, ಆಹಾರವೋ ತಿಳಿಯಲಿಲ್ಲ. ಕೇಳಿದರೂ ಅವರೂ ಹೇಳಲಿಲ್ಲ. ನಮ್ಮ ಕಲರವದ ಹಕ್ಕಿಗಳ ಓಡಿಸುತ್ತಿದ್ದಾರೆಂದು ನಮಗವರ ಮೇಲೆ ಸಿಟ್ಟು. ಹಕ್ಕಿ ಬೇಕೆಂದರೆ ದೊಡ್ಡ ಕೆರೆಯ ಹತ್ತಿರ ಬನ್ನಿ ಎಂದರು. ಬಿಳಿಯ ಹಕ್ಕಿಗಳ ಬಿಟ್ಟು ಬಣ್ಣದ ನೀರ ಚಿತ್ರಿಸಿದೆ.
Comments
Post a Comment