Blog number1126.ಆನಂದಪುರಂ ಸಾಹಿತ್ಯ ಹಬ್ಬ ಭಾಗ 9 , ವಿಶ್ವದಾಖಲೆಯ ಹಬ್ಬು ಕುಟುಂಬದ ರಾಮಚಂದ್ರ ಹಬ್ಬು ಅವರು ತಮ್ಮ ಸಾಹಿತ್ಯ ಕೃತಿ ಮತ್ತು ಜೀವನದ ಬಗ್ಗೆ ಆನಂದಪುರಂ ಸಾಹಿತ್ಯ ಹಬ್ಬದಲ್ಲಿ ಮಾತಾಡಿದ್ದಾರೆ
#ಆನಂದಪುರಂ_ಸಾಹಿತ್ಯ_ಹಬ್ಬ.
#ವಿಶ್ವದಾಖಲೆಯ_ಹಬ್ಬು_ಸಾಹಿತ್ಯ_ಕುಟುಂಬದೊಂದಿಗೆ_ಸಂವಾದ
#ಕಾರವಾರದ_ದಿವೇಕರ_ಕಾಲೇಜಿನ_ನಿವೃತ್ತ_ಪ್ರಾಚಾರ್ಯರಾದ
#ರಾಮಚಂದ್ರ_ಹಬ್ಬು_ಸಂವಾದದಲ್ಲಿ.
https://photos.app.goo.gl/o7NKC9G9diEkLnx3A
ಇಂಡಿಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಕನ್ನಡದ ಸಾಹಿತ್ಯ ಕುಟುಂಬದ ದಾಖಲೆ ನಮೂದಾಗಿದೆ ಸದ್ಯದಲ್ಲೇ ಗಿನ್ನೆಸ್ ರೆಕಾರ್ಡ್ ಕೂಡ ಆಗಲಿದೆ.
ಒಂದು ಕುಟುಂಬದಲ್ಲಿ ತಂದೆ ಮತ್ತು ಆರು ಗಂಡು ಮಕ್ಕಳು ಸಾಹಿತಿಗಳು ಅವರೆಲ್ಲರ ಸಾಹಿತ್ಯ ಕೃತಿಗಳು ಪ್ರಕಟವಾಗಿದೆ.
ದಿನಾಂಕ 11-ಡಿಸೆಂಬರ್ -2022 ರ ಭಾನುವಾರ ಆನಂದಪುರಂನಲ್ಲಿ ನಮ್ಮ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ನಲ್ಲಿ ಹಬ್ಬು ಕುಟುಂಬದ ಪ್ರಕಟಿತ ಪುಸ್ತಕಗಳ ಪ್ರದರ್ಶನವನ್ನ ಶಿವಮೊಗ್ಗದ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಂಜುನಾಥ್ ಉದ್ಘಾಟಿಸಿದ್ದರು.
ನನ್ನ ಎರೆಡು ಪುಸ್ತಕಗಳ ಅವಲೋಕನ ಮತ್ತು ಹಬ್ಬು ಸಾಹಿತ್ಯದ ಸಂವಾದ ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಪತ್ರಕರ್ತ, ಶಿಕ್ಷಣ ತಜ್ಞ ಹಾಗೂ ಸಾಹಿತಿಗಳಾದ ಅರವಿಂದ ಚೊಕ್ಕಾಡಿ ಅವರು ನೆರವೇರಿಸಿದರು.
ಎರಡನೆ ಪುತ್ರ ಮೋಹನ್ ಹಬ್ಬು ಅವರ ಸಂವಾದದ ವಿಡಿಯೋ ಭಾಗ 8 ರಲ್ಲಿ ಪ್ರಕಟವಾಗಿದೆ.
ಭಾಗ-9 ರಲ್ಲಿ ಮೂರನೆ ಪುತ್ರ ರಾಮಚಂದ್ರ ಹಬ್ಬು ಅವರು ಆನಂದಪುರಂ ಸಾಹಿತ್ಯ ಹಬ್ಬದಲ್ಲಿ ಸಂವಾದದ ವಿಡಿಯೋ ಇಲ್ಲಿದೆ.
ಇವರು ಇಂಗ್ಲೀಷ್ ಮೂಲದ ಬಿ.ಆರ್. ನಂದಾ ಅವರ MAHATMA GANDHI JERVANA CHARITHE 2001 ರಲ್ಲಿ ರಾಮಚಂದ್ರ ಹಬ್ಬು ಅವರು ಕನ್ನಡಕ್ಕೆ ಅನುವಾದಿಸಿ ಮಹಾತ್ಮ ಗಾಂಧಿ ಜೀವನ ಚರಿತೆ ಎಂದು 572 ಪುಟಗಳ ಪುಸ್ತಕ ದೆಹಲಿಯ ಆಕ್ಸ್ ಪಡ್೯ ಯುನಿವರ್ಸಿಟಿ ಪ್ರೆಸ್ ಇಂಡಿಯಾ ನವದೆಹಲಿ ಇವರ ಸಹಯೋಗದಿಂದ ಅನುವಾದಗೊಂಡು ಪುಕಟಿಸಲಾಗಿದೆ.
ರಾಮಚಂದ್ರ ಹಬ್ಬು ಅವರು ಕಾರವಾರದ ದಿವೇಕರ್ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದಾರೆ, 20 ವರ್ಷ ಕಾರವಾರದಿಂದ ಹಿಂದೂ ಪತ್ರಿಕೆಗೆ ಮತ್ತು 8 ವರ್ಷ ಇಂಡಿಯನ್ ಎಕ್ಸ್ ಪ್ರೆಸ್ ಗೆ ವರದಿಗಾರರಾಗಿದ್ದರು.
https://photos.app.goo.gl/o7NKC9G9diEkLnx3A
Comments
Post a Comment