Blog number 1142. ಶಿವಮೊಗ್ಗ ಮುನೀರ್ ನೆನಪಿನ ಸರಣಿ 5,ಡಿವಿಎಸ್ ಕಾಲೇಜಿನ ಕನ್ನಡ ಅಧ್ಯಾಪಕ ಹುದ್ದೆ ಕೊಡಿಸಲು ಸ್ವತಃ ಉದ್ಯಮಿ ಮತ್ತು ಕನ್ನಡ ಸಾಹಿತ್ಯ ಪೋಷಕರಾದ ಹಿರೇಹಾಳ್ ಇಬ್ರಾಹಿಂ ಸಾಹೇಬರು ಮತ್ತು ಶಿವಮೊಗ್ಗ ಗುಲಾಂ ಅಭೀದ್ ಕಾಲೇಜಿನ ಅಧ್ಯಕ್ಷರಾಗಿದ್ದ ಬದರೀನಾರಾಯಣರ ಬೇಟೆಗೆ ಆನಂದಪುರಂಗೆ ಬಂದಿದ್ದ ನೆನಪು.
#ಡಿವಿಎಸ್_ಸಂಸ್ಥೆ_ಅಧ್ಯಕ್ಷರಾಗಿದ್ದ_A_R_ಬದರಿನಾರಾಯಣರು.
#ಅವರ_ಬೇಟಿಗೆ_ಆನಂದಪುರಂಗೆ_ಬಂದವರು_ಹಿರೇಹಾಳ್_ಇಬ್ರಾಹಿಂ_ಸಾಹೇಬರು_ಕಾಂಗ್ರೇಸ್_ಮುಖಂಡರಾದ_ಗುಲಾಂ_ಅಬೀದ್
#ಕವಿ_ನಿಸಾರ್_ಆಹಮದರ_ಶಿಷ್ಯ_ಇಬ್ರಾಹಿಂ_ಸಾಹೇಬರ_ಆಪ್ತ_ಮುನೀರ್
#ಅವರಿಗೆ_ಡಿವಿಎಸ್_ಸಂಸ್ಥೆ_ಕನ್ನಡ_ಅಧ್ಯಾಪಕ_ಹುದ್ದೆ_ಕೊಡಿಸಲು
ಆನಂದಪುರಂ ಆರ್.ಬದರಿನಾರಾಯಣ ಅಯ್ಯ೦ಗಾರ್ ದೇಶದ ಮೊದಲ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಗೋಪಾಲಗೌಡರಿಂದ ಸೋತು ಎರಡನೆ ಚುನಾವಣೆಯಲ್ಲಿ ಗೋಪಾಲಗೌಡರನ್ನು ಸೋಲಿಸಿ ಕಾಂಗ್ರೇಸ್ ನಿಂದ ಶಾಸಕರಾಗಿ, ವಿದ್ಯಾ ಮಂತ್ರಿ, ಸಂಸದ, ವಿಧಾನ ಪರಿಷತ್ ಸದಸ್ಯರಾಗಿದ್ದು ಇತಿಹಾಸ.
ಇವರು ವಿದ್ಯಾ ಮತ್ತು ಸಂಸ್ಕೃತಿ ಮಂತ್ರಿಗಳಾಗಿದ್ದಾಗ ಇವರು ಮತ್ತು ಆಗಿನ ಮುಖ್ಯಮಂತ್ರಿ ದೇವರಾಜ ಅರಸರು ಜಂಟಿಯಾಗಿ ಕರ್ನಾಟಕ ರಾಜ್ಯ ನಾಮಕರಣ ಮಾಡಿದ್ದು ಇತಿಹಾಸದ ದಾಖಲೆ ಆಗಿದೆ.
ಬದರಿನಾರಾಯಣರ ಬೇಟಿ ಮಾಡಿ ಅವರು ಅಧ್ಯಕ್ಷರಾಗಿದ್ದ ಶಿವಮೊಗ್ಗದ ಡಿವಿಎಸ್ ಶಿಕ್ಷಣ ಸಂಸ್ಥೆಗೆ ಕರೆದಿರುವ ಕನ್ನಡ ಅಧ್ಯಾಪಕ ಹುದ್ದೆಗೆ ಅರ್ಜಿ ಹಾಕಿದ್ದ ಶಿವಮೊಗ್ಗ ಮುನೀರ್ ಅವರಿಗೆ ಶಿಪಾರಸ್ಸು ಮಾಡಲು ಖ್ಯಾತ ಉದ್ಯಮಿ, ಕನ್ನಡ ಬಾಷಾ ಸಾಹಿತ್ಯ ಪೋಷಕರಾಗಿದ್ದ ಹಿರೇಹಾಳ್ ಇಬ್ರಾಹಿಂ ಸಾಹೇಬರು ಮತ್ತು ಆಗಿನ ಜಿಲ್ಲಾ ಕಾಂಗ್ರೇಸ್ ಮುಖಂಡರಾದ ಗುಲಾಂಅಭೀದರು ಮುನೀರ್ ಅವರನ್ನು ಕರೆದು ಕೊಂಡು ಆನಂದಪುರಂಗೆ ಬದರಿನಾರಾಯಣರ ಮನೆಗೆ ಬರುತ್ತಾರೆ.
ಬದರಿನಾರಾಯಣ್ ಅಯ್ಯಂಗಾರ್ ಇಬ್ರಾಹಿಂ ಸಾಹೇಬರ ಸ್ವಾಗತಿಸಿದ ಪರಿ, ಯಾವುದೇ ಡಿವಿಎಸ್ ಕಾಲೇಜ್ ಹುದ್ದೆ ಸಂದರ್ಶನದಲ್ಲಿ ಭಾಗವಹಿಸದ ಬದರಿನಾರಾಯಣ ಅಯ್ಯ೦ಗಾರ್ ಈ ಸಂದರ್ಶನದಲ್ಲಿ ಖುದ್ದು ಹಾಜರಾಗಿದ್ದು, ರನ್ನನ ಗಧಾಯುದ್ದ ಪಾಠ ಮಾಡಿ ಸಂದರ್ಶನ ಮಾಡಿದವರಿಗೆ ಸೈ ಎನ್ನಿಸಿದ ಮುನೀರ್ ಇದರಿಂದ ಕನ್ನಡ ಅಧ್ಯಾಪಕರಾಗಿ ಡಿವಿಎಸ್ ಸಂಸ್ಥೆ ಅಧ್ಯಕ್ಷರಿಂದ ನೇಮಕಾತಿ ಪತ್ರ ಪಡೆದ ಶಿವಮೊಗ್ಗ ಮುನೀರ್ ಅವರ ಅನುಭವ ಅವರ ಮಾತಿನಲ್ಲೇ ಕೇಳಿ.
Comments
Post a Comment