Blog number 1141.ತ್ರೀಡಿ ಟೆಕ್ನಾಲಜಿ ಎಂಬ ಹೊಸ ಅವಿಷ್ಕಾರದಿಂದ ನಮ್ಮ ಊರಿನ ಶ್ರೀ ವರಸಿದ್ಧಿ ವಿನಾಯಕ ದೇವರ ಮಿನಿಯೇಚರ್ ವಿಗ್ರಹಗಳ ತಯಾರಿಯ ಪ್ರಯತ್ನ. ಈ ಸ್ಕ್ಯಾನರ್ ಬೆಲೆ 50 ಲಕ್ಷ!!
#ನಮ್ಮೂರ_ವರಸಿದ್ದಿ_ವಿನಾಯಕ_ದೇವಸ್ಥಾನದಲ್ಲಿ
#ದೇವರ_ವಿಗ್ರಹದ_ಯಥಾವತ್ತಾದ_ನಾಲ್ಕು_ಇಂಚಿನ_ಗಾತ್ರದ_ವಿಗ್ರಹ_ತಯಾರಿಗಾಗಿ.
#ಈ_ತಂತ್ರಜ್ಞಾನದಿಂದ_ವೈದ್ಯಕೀಯ_ಕ್ಷೇತ್ರ_ಆಟೋಮೊಬೈಲ್_ಕ್ಷೇತ್ರದಲ್ಲಿ_ಹೊಸ_ಶಕೆ_ಪ್ರಾರಂಭ.
#ಭಾರತದಲ್ಲಿ_ಬೆರಳೆಣಿಕೆಯಷ್ಟು_ಸಂಸ್ಥೆಗಳಿದೆ_ಅದರಲ್ಲಿ_ಈ_ಆಕೃತಿ_3D_ನಂಬರ್_ಒನ್_ಸಂಸ್ಥೆ.
ನಮಗೆ ಡಿಪ್ಲೋಮದ ಮೊದಲ ವರ್ಷ ಡ್ರಾಯಿಂಗ್ ಕ್ಲಾಸ್ ಇತ್ತು, ಅದರಲ್ಲಿ 3D ಡ್ರಾಯಿಂಗ್ ಮಾಡುವುದು ಕಷ್ಟಕರ ಅಂತ ಸಾಗರದ ಸಂಜಯ್ ಮೆಮೊರಿಯಲ್ ಪಾಲಿಟೆಕ್ನಿಕ್ ನ ಡ್ರಾಯಿಂಗ್ ಮಾಸ್ಟರ್ ಜೋಷಿ ಹೇಳುತ್ತಿದ್ದರು.
ಆದರೆ ಅದು ನನಗೆ ಮಾತ್ರ ಸುಲಭವಾಗಿತ್ತು ಆಗಿನ ವಾಷಿ೯ಕ ಪರೀಕ್ಷೆಯಲ್ಲಿ 3D ಡ್ರಾಯಿಂಗ್ ಗೆ 45 ಅಂಕ ಇಟ್ಟಿದ್ದರಿಂದ ನಾನು ಅದನ್ನೆ ಬಿಡಿಸಲು ಪ್ರಾರಂಬಿಸಿದ್ದೆ.
ಪರೀಕ್ಷಾ ಕೊಠಡಿಯ ಮೇಲ್ವಿಚಾರಕರಿಗೆ ಇಡೀ ಕೊಠಡಿಯಲ್ಲಿ ನಾನೊಬ್ಬನೆ ಮಾತ್ರ ಇದನ್ನು ಬಿಡಿಸುತ್ತಿರುವುದು ನೋಡಿ ಅನುಮಾನದಿಂದ ಪ್ರಶ್ನಿಸಿದರು ಆಗ ನಾನು ಪ್ರಶ್ನೆ ಪತ್ರಿಕೆಯ ತೋರಿಸಿದೆ.
ಆದರೆ ಅವರಿಗೆ ಅನುಮಾನ ಉಂಟಾಯಿತು ಈ ವಿದ್ಯಾರ್ಥಿ ತಪ್ಪಾಗಿ ಬರೆದು ಪೇಲ್ ಆದಾನೆಂಬ ಸದುದ್ದೇಶದಿಂದ ಆಡಳಿತ ಮಂಡಳಿಗೆ ತಿಳಿಸಿದ್ದಾರೆ ತಕ್ಷಣ ನಮ್ಮ ಜೋಷಿ ಮಾಸ್ಟರ್ ನ್ನೇ ಕಳಿಸಿದ್ದಾರೆ ಅವರು.
ತುಂಬಾ ಗಡಿಬಿಡಿ ಮತ್ತು ಸಿಟ್ಟಿನಿಂದ ಒಡೋಡಿ ಬಂದ ಡ್ರಾಯಿಂಗ್ ಮಾಸ್ಟರ್ ನನ್ನ ಡ್ರಾಯಿಂಗ್ ಬೋರ್ಡ್ ನೋಡಿದವರೇ ಸಮಾದಾನದಿಂದ ತೃಪ್ತಿಯಿಂದ ನನ್ನ ಭುಜ ತಟ್ಟಿದ್ದರು ಆ ಪ್ರಥಮ ವರ್ಷದ ಎಲ್ಲಾ ವಿಭಾಗದ 120 ವಿದ್ಯಾರ್ಥಿಗಳಲ್ಲಿ ನಾನೊಬ್ಬನೆ 3D ಡ್ರಾಯಿಂಗ್ ಮಾಡಿದವನು.
ಮೊನ್ನೆ ಪ್ರತಿಬಾವಂತ ಬಂಗಾರದ ಪದಕ ಪಡೆದ ವಿದ್ಯಾರ್ಥಿ ರಾಘವೇಂದ್ರ ಮತ್ತು ಅವರ ಆಕೃತಿ 3D ಪ್ರೈ.ಲಿ. ಖರೀದಿಸಿರುವ ಹೊಸ ಸ್ಕ್ಯಾನಿಂಗ್ ಯಂತ್ರ ನಮ್ಮ ಊರಿನ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ನಂತರ ಮೂಡುಬಿದರೆಯ ಆಳ್ವಾಸ್ ನ ಎಕ್ಸಿಬ್ಯೂಷನ್ ನಲ್ಲಿ ಅವರ ಸ್ಟಾಲ್ ಗೆ ಹೋಗುವುದಾಗಿ ತಿಳಿಸಿದ್ದರು.
ಆ ಸ್ಕ್ಯಾನಿಂಗ್ ಯಂತ್ರ ಕೆನಡಾ ದೇಶದಿಂದ ಆಮದು ಮಾಡಿಕೊಂಡಿದ್ದು ಅದರ ಬೆಲೆ ಕಸ್ಟಮ್ ಟ್ರಾನ್ಸ್ ಪೋರ್ಟ್ ಸೇರಿ 50 ಲಕ್ಷ ಅಂದಿದ್ದರು ಅವರ ಹತ್ತಿರ ಈಗಾಗಲೇ ಕೋಟಿ ರೂಪಾಯಿಗೂ ಅಧಿಕವಾದ ಪ್ರಿಂಟರ್, ಸ್ಕಾನರ್ ಗಳಿದ್ದರೂ ಈ ಅದುನಿಕ ಸ್ಕ್ಯಾನರ್ ತರಿಸಿದ್ದಾರೆ.
ಹೇಗೂ ಪೂಜೆಗೆ ಸ್ಕ್ಯಾನರ್ ತರುವುದರಿಂದ ನಮ್ಮ ದೇವರ ವಿಗ್ರಹ ಸ್ಕ್ಯಾನ್ ಮಾಡಿಸಿ ನಮ್ಮೂರ ಶ್ರೀ ವರಸಿದ್ದಿ ವಿನಾಯಕ ದೇವರ ಮೂರ್ತಿಯ ಮಿನಿಯೇಚರ್ ಮಾಡಿಸಿ ಜಾತ್ರಾ ಕಾಯ೯ಕ್ರಮದಲ್ಲಿ ಭಕ್ತರಿಗೆ ನೀಡುವ ನನ್ನ ಯೋಜನೆಗೆ ಇವರ ಕಂಪನಿಯ ಉಳಿದ ನಿರ್ದೇಶಕರಾದ ನವೀನ್ ಕುಮಾರ್, ರೇವಣಸಿದ್ದಯ್ಯ, ಸುರೇಂದ್ರರೂ ಒಪ್ಪಿ ತಮ್ಮ ತಾಂತ್ರಿಕ ಸಿಬ್ಬಂದಿ ವರ್ಗದವರನ್ನು ಕರೆತಂದಿದ್ದರು.
ದಿನಾಂಕ 21-ಡಿಸೆಂಬರ್ -2023ರ ಗುರುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2ರವರೆಗೆ ಕಾಯ೯ನಿರ್ವಹಿಸಿದರು.
ಈ ಉದ್ಯಮ ಆಟೋಮೊಬೈಲ್ ಸ್ಪೇರ್ ಪಾರ್ಟ್ಸ್ ಉತ್ಪಾದನೆಯಲ್ಲಿ, ಮೆಡಿಕಲ್ ಕ್ಷೇತ್ರದ ಅಂಗಾಂಶ ಕಸಿಗಳಲ್ಲಿ ಹೆಚ್ಚಿನ ಬಳಕೆ ಇದೆ, ವಸ್ತುವಿನ ಪ್ರತಿಕೃತಿ ಮೂಲ ಕೃತಿಯ ಯಥಾವತ್ತು ಮಾಡುವ ತಂತ್ರಜ್ಞಾನ ಇದು.
ಮುಂದಿನ ವಾರ ಪ್ರತಿಕೃತಿಗಳು ನನ್ನ ಕೈ ಸೇರಲಿದೆ.
Comments
Post a Comment