Blog number 1145 ಶಿವಮೊಗ್ಗ ಮುನೀರ್ ನೆನಪಿನ ಸರಣಿ - 6. ಶಿವಮೊಗ್ಗದ ಪ್ರತಿಷ್ಟಿತ ಡಿವಿಎಸ್ ಕಾಲೇಜಿನ ಹುದ್ದೆಗೆ ಅರ್ಜಿ ಸಲ್ಲಿಸಿ, ಸಂದರ್ಶನ ಎದುರಿಸಿ ಆಯ್ಕೆ ಆದ ಪಿಯೂಸಿ ಮತ್ತು ಪದವಿಯಲ್ಲಿ ರ್ಯಾಂಕ್ ಮತ್ತು ಬಂಗಾರದ ಪದಕ ಪಡೆದಿದ್ದ ರಹಮತ್ ತರಿಕೆರೆ, ಪೂರ್ಣಚಂದ್ರ ತೇಜಸ್ವಿ ಮೇಲೆ ಡಾಕ್ಟರೇಟ್ ಮಾಡಿದ ಖ್ಯಾತ ವನ್ಯ ಪ್ರಾಣಿ ಛಾಯಗ್ರಹಣದ ಹವ್ಯಾಸದ ಇವರ ಸಹೋದರ ಕಲೀಮುಲ್ಲಾ.
#ಶಿವಮೊಗ್ಗ_ಮುನೀರ್_ನೆನಪಿನ_ಸರಣಿ_6.
#ಡಿವಿಎಸ್_ಕಾಲೇಜಿನಲ್ಲಿ_ರಹಮತ್_ತರೀಕೆರೆ_ಅಧ್ಯಾಪಕರಾಗಿ_ಆಯ್ಕೆ_ಆದದ್ದು.
#ಡಿವಿಎಸ್_ಕಾಲೇಜಿನಲ್ಲಿ_ಸೈಯದ್_ಷಹಾಬುದ್ದೀನ್_ಉರ್ದು_ಅಧ್ಯಾಪಕರಾಗಿ
#ಕನ್ನಡ_ವಿಭಾಗಕ್ಕೆ_ಶಿವಮೊಗ್ಗಮುನೀರ್_ರಹಮತ್_ತರಿಕೆರೆ
#ಪಿಯೂಸಿ_ಪದವಿಯಲ್ಲಿ_ರ್ಯಾಂಕ್_ಪಡೆದು_ಚಿನ್ನದ_ಪದಕ_ಗಳಿಸಿದ್ದ_ರಹಮತ್_ತರಿಕೆರೆ
ಇವತ್ತು ರಹಮತ್ ತರೀಕೆರೆ ಹೆಸರು ಕನ್ನಡ ಸಾಹಿತ್ಯ ಲೋಕದಲ್ಲಿ ಮೇಲ್ಪದರದಲ್ಲಿದೆ, ಕನ್ನಡಕ್ಕೆ ಇವರು ಜ್ಞಾನಪೀಠ ಪ್ರಶಸ್ತಿ ಪಡೆಯುವ ಅರ್ಹತೆಯ ಕವಿಗಳ ಸಾಲಲ್ಲಿದ್ದಾರೆ ಇವರು ಶಿವಮೊಗ್ಗದ ಪ್ರತಿಷ್ಟಿತ ಡಿವಿಎಸ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಸಂದರ್ಶನದಲ್ಲಿ ಇವರ ಇವರ ಗಳಿಸಿದ್ದ ಬಂಗಾರದ ಪದಕ ಸಂದರ್ಶಕರ ಸಮಿತಿ ಸದಸ್ಯರ ಅಚ್ಚರಿಗೆ ಕಾರಣವಾಗಿದ್ದು ಮತ್ತು ಪಿಯೂಸಿ , ಪದವಿಯಲ್ಲಿ ರ್ಯಾಂಕ್ ಪಡೆದಿದ್ದರಿಂದ ಇವರನ್ನು ಆಯ್ಕೆ ಸಮಿತಿ ಇವರಿಗೆ ನೇಮಕಾತಿ ಆದೇಶ ನೀಡಿತ್ತು ಅಂತ ಶಿವಮೊಗ್ಗ ಮುನೀರ್ ನೆನಪಿಸಿಕೊಂಡಿದ್ದಾರೆ.
ಕೆಲ ವರ್ಷದ ನಂತರ ಹಂಪೆ ಕನ್ನಡ ವಿಶ್ವವಿದ್ಯಾಲಯದ ಹುದ್ದೆಗೆ ಆಯ್ಕೆ ಆಗಿ ಇಲ್ಲಿ ರಾಜಿನಾಮೆ ನೀಡಿ ಹೋಗುತ್ತಾರೆ ಈ ಸಂದರ್ಭದಲ್ಲೇ ರಹಮತ್ ತರಿಕೆರೆ ಸಹೋದರ ಕಲಿಮುಲ್ಲಾ ಡಿವಿಎಸ್ ಸಂಸ್ಥೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿ ಈಗ ಉಪನ್ಯಾಸಕರಾಗಿದ್ದಾರೆ.
ನಾನು ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಆನಂದಪುರಂ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷನಾಗಿದ್ದೆ ಆಗ ಕಲೀಮುಲ್ಲಾ ಅದ್ಯಾಪಕಾರಿದ್ದರು, ಬಡ ವಿದ್ಯಾರ್ಥಿಗಳಿಗೆ ಅನೇಕ ರೀತಿ ಸಹಾಯ ಮಾಡಿದ್ದಾರೆ ಈಗ ವನ್ಯಜೀವಿ ಪೋಟೋಗ್ರಪಿ ಹವ್ಯಾಸದಿಂದ ಪ್ರಸಿದ್ಧರಾಗಿದ್ದಾರೆ, ಪೂರ್ಣಚಂದ್ರ ತೇಜಸ್ವಿ ಬಗ್ಗೆ ಡಾಕ್ಟರೇಟ್ ಮಾಡಿದ್ದಾರೆ.
ವಿಶೇಷ ಮತ್ತು ವಿಚಿತ್ರ ಅಂದರೆ ಶಿವಮೊಗ್ಗ ಮುನೀರ್ ಸಂದರ್ಶನ ಮಾಡಿದ ಮರುದಿನ ಕಲೀಮುಲ್ಲಾ ಅವರ ಗೆಳೆಯರ ಜೊತೆ ಗೋಕರ್ಣ ಪ್ರವಾಸದಿಂದ ವಾಪಾಸು ಬರುವಾಗ ನನ್ನ ಕಛೇರಿಗೆ ಬಂದಿದ್ದರು.
Comments
Post a Comment