Blog number 1133. ಭಾಗ 13, ಆನಂದಪುರಂ ಸಾಹಿತ್ಯ ಹಬ್ಬ, ಇದರ ಕಲ್ಪನೆ ಮತ್ತು ರೂವಾರಿ ಸಾಗರ ತಾಲ್ಲೂಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿ.ಟಿ. ಸ್ಟಾಮಿಯವರದ್ದು.
#ಆನಂದಪುರಂ_ಸಾಹಿತ್ಯ_ಹಬ್ಬ
#ಪ್ರಾಸ್ತಾವಿಕ_ಭಾಷಣ_ಮಾಡಿದ_ಸಾಗರ_ತಾಲ್ಲೂಕ್_ಸಾಹಿತ್ಯ_ಪರಿಷತ್
#ಅಧ್ಯಕ್ಷರಾದ_ವಿ_ಟಿ_ಸ್ವಾಮಿ.
#ಆನಂದಪುರಂ_ಸಾಹಿತ್ಯ_ಹಬ್ಬದ_ಕಲ್ಪನೆ_ಇವರದ್ದೆ.
ವಿ.ಟಿ. ಸ್ವಾಮಿ ಸರ್ಕಾರಿ ಶಾಲಾ ಶಿಕ್ಷಕರು, ಸಾಹಿತಿಗಳು, ಶಿಕ್ಷಕರ ಸಂಘದ ಸಂಘಟನಾಕಾರರು, ಜೈನ ಸಮಾಜದ ಪ್ರಮುಖರು ಮತ್ತು ಹಾಲಿ ಸಾಗರ ತಾಲ್ಲೂಕಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು.
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಆನಂದಪುರಂ ಹೋಬಳಿಯ ಮುರುಘಾಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಕರೆಂದು ಹೆಸರು ಮಾಡಿದ್ದರು.
ಆ ಸಂದರ್ಭದಲ್ಲಿ ನಾನು ಸ್ಥಳಿಯ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಆ ಶಾಲಾ ಅವರಣದಲ್ಲಿ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಕೆ.ವಿ.ಸುಬ್ಬಣ್ಣರ ಹೆಸರಿನ ರಂಗ ಮಂದಿರ ನಿರ್ಮಿಸಿ ಉದ್ಘಾಟಿಸುವಾಗ ಇದ್ದವರು.
ಇವರು ಇಲ್ಲಿನ ತೀರ್ಥದಲ್ಲಿರುವ ಕಲ್ಯಾಣಿ ಚಾಲುಕ್ಯ ರಾಜ ಇಮ್ಮಡಿ ಜಯಸಿಂಹನ ಸಾಮಂತ ಮಾಚ ರಾಜನ ಶಾಸನ ಉಲ್ಲೇಖಿಸಿ ಅನೇಕ ದಾಖಲೆಗಳ ಆಚಾಪುರ ಎಂಬ ಪುಸ್ತಕ ಕೂಡ ಪ್ರಕಟಿಸಿದ್ದಾರೆ.
ಆಚಾಪುರದ ಮೂಲ ಹೆಸರು ಮಾಚರಾಜಪುರ 943 ವಷ೯ಗಳಲ್ಲಿ ಮಾಚರಾಜಪುರ ಆಚಾಪುರ ಎಂದಾಗಿದೆ.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಈ ಶಾಸನ ಓದಬಹುದು.
https://arunprasadhombuja.blogspot.com/2022/01/71-25-1079.html.
ಇವರ ಸಂಶೋದನೆಯಲ್ಲಿ ಇಲ್ಲಿನ ಸ್ಥಳಿಯರ ಮೂಲ ಶಾಲಾ ದಾಖಲೆಗಳಲ್ಲಿ ಜಾತಿ ಕಾಲಮ್ ನಲ್ಲಿ ಜೈನರೆಂದೇ ನಮೂದಾಗಿದೆ ಆದರೆ ಅದು ಕಾಲಾಂತರದಲ್ಲಿ ಬದಲಾಗಿದ್ದು ಹೇಗೆ ಎಂಬುದು ಸಂಶೋದನೆ ಆಗಬೇಕು.
ಯಾವತ್ತೂ ನೆನಪಿನಲ್ಲಿಡುವಂತಹ ಆನಂದಪುರಂ ಸಾಹಿತ್ಯ ಹಬ್ಬ ಮತ್ತು ಈ ಕಾಯ೯ಕ್ರಮದಲ್ಲಿ ನಾನು ಸಾಹಿತಿ ಅಲ್ಲ ಹವ್ಯಾಸಿ ಬರಹಗಾರನೆಂದರೂ ಬಿಡದೆ ನನ್ನ ಎರೆಡು ಕೃತಿಗಳಾದ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತ #ಬೆಸ್ತರ_ರಾಣಿಚಂಪಕಾ ಕಾದಂಬರಿ ಮತ್ತು ಭಟ್ಟರ ಬೊಂಡಾ ಬಾಂಡಲಿಯಲ್ಲಿ #ಬಿಲಾಲಿ_ಬಿಲ್ಲಿ_ಅಭ್ಯಂಜನ ಎಂಬ ಕಥಾ ಸಂಕಲನದ ಅವಲೋಕನ ಕೂಡ ಆಗಲು ಇವರು ಕಾರಣ ಇವರಿಗೆ ನನ್ನ ಕೃತಜ್ಞತೆಗಳು ಈ ಮೂಲಕ ಅರ್ಪಿಸುತ್ತೇನೆ.
Comments
Post a Comment