Blog number 1134. ಶಿವಮೊಗ್ಗ ಮುನೀರ್ ನೆನಪಿನ ಸರಣಿ1. ದಲಿತ ಸಂಘರ್ಷ ಸಮಿತಿ ಸ್ಥಾಪಕ ಬಿ.ಕೃಷ್ಣಪ್ಪರ ಪ್ರೇಮ ವಿವಾಹ ಪ್ರಸಂಗ
#ಶಿವಮೊಗ್ಗ_ಮುನೀರ್_ನೆನಪಿನ_ಸರಣಿ_1.
(ದಲಿತ ಸಂಘರ್ಷ ಸಮಿತಿ ಬಿ.ಕೃಷ್ಣಪ್ಪರ ಪ್ರೇಮ ವಿವಾಹ ಪ್ರಸಂಗ)
ಶಿವಮೊಗ್ಗ ಡಿವಿಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕರು.
ಇವರ ನೆನಪಿನ ಕಣಜದಲ್ಲಿ ಏನುಂಟು ಏನಿಲ್ಲ? ಕನ್ನಡದ ಎಲ್ಲಾ ಸಾಹಿತ್ಯ ದಿಗ್ಗಜರ ಸ್ವರ್ಶವಿದೆ, ಹೊರಾಟಗಳ ಹೊಳಪಿದೆ ಅದನ್ನೆಲ್ಲ ಕೆದಕಿದಾಗ ತಮ್ಮ ನೆನಪಿನ ಸುರಳಿಯನ್ನು ಬಿಚ್ಚಿ ಆ ಕ್ಷಣ ಆ ದಿನದ ಆ ಘಟನೆ ಸ್ವಲ್ಪವೂ ಮರೆಯದೆ ಹೇಳುವ ಅಗಾದ ನೆನಪಿನ ಶಕ್ತಿ ಇವರದ್ದು.
ಖ್ಯಾತ ಸಾಹಿತಿ ಉದ್ಯಮಿ ಇಬ್ರಾಹಿಂ ಸಾಹೇಬರ ಸದಾ ನೆರಳು ಈ ಶಿವಮೊಗ್ಗದ ಮುನೀರ್ ಇವರಿಗೆ 72 ವರ್ಷ ನಿನ್ನೆ (ದಿನಾಂಕ 21-ಡಿಸೆಂಬರ್ -2022) ನನ್ನ ಅತಿಥಿ ಮದ್ಯಾಹ್ನ ನನ್ನ ಮನೆಯಲ್ಲಿ ಊಟ ಮಾಡುತ್ತಾ ಸಂಜೆ ತನಕ ಅವರ ಅಪೂರ್ವ ನೆನಪಿನ ಭಂಡಾರ ತೆರೆದಿದ್ದೆ.
ಇದನ್ನು ಶಿವಮೊಗ್ಗ ಮುನೀರ್ ನೆನಪಿನ ಸರಣಿಯ ಕಂತುಗಳಾಗಿ ಪ್ರಕಟವಾಗಲಿದೆ, ರಾಜ್ಯದ ಸಾಹಿತ್ಯ ಆಸಕ್ತರು, ಸುಮಾಜವಾದಿ, ರೈತ ಮತ್ತು ದಲಿತ ಸಂಘಟನೆಗಳವರಿಗೆ ಇದು ಪ್ರಮುಖ ವಿಚಾರಗಳ ದಾಖಲೆ ಆಗಲಿದೆ.
ದಲಿತ ಸಂಘರ್ಷ ಸಮಿತಿ ಬಿ.ಕೃಷ್ಣಪ್ಪ ಮತ್ತು ಇಂದಿರಾರ ಪ್ರೇಮ ವಿವಾಹಕ್ಕೆ ಸಹಿಕರಿಸಿದವರು.
ಬಿ.ಕೃಷ್ಣಪ್ಪ ಸಾಗರದ ಲಾಲ್ ಬಹದ್ದೂರು ಕಾಲೇಜಿನಲ್ಲಿ ಪಾರ್ಟ್ ಟೈಂ ಉಪನ್ಯಾಸಕರಾಗಿದ್ದರು.
ದಲಿತ ಸಂಘರ್ಷ ಸಮಿತಿ ಸಂಸ್ಥಾಕ ಬಿ.ಕೃಷ್ಣಪ್ಪ ಮತ್ತು ಇಂದಿರಾರ ಮದುವೆ ಮುಡಿಗೆರೆಯಲ್ಲಿ.
ವಿವಾಹಕ್ಕೆ ಸಾಕ್ಷಿ ಪ್ರೊ.ನಂಜುಂಡಸ್ವಾಮಿ, ಲಂಕೇಶ್, ತೇಜಸ್ವಿ ಮತ್ತು ಸಮಾಜವಾದಿ ಯುವ ಜನ ಸಭಾ
Comments
Post a Comment