Blog number 1130. ಭಾಗ - 11. ಆನಂದಪುರಂ ಸಾಹಿತ್ಯ ಹಬ್ಬ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈ ಕುಟಂಬ ವಿಶ್ವ ದಾಖಲೆಯಲ್ಲಿ ದಾಖಲಾಗಿದೆ, ಜಯಪ್ರಕಾಶ್ ಹಬ್ಬು ಸನ್ಮಾನ ಸ್ವೀಕರಿಸಿ ಮಾತನಾಡಿದ್ದಾರೆ.
#ಹಬ್ಬು_ಸಹೋದರರಲ್ಲಿ_ಜಯಪ್ರಕಾಶ್_ಹಬ್ಬು_ಮಾತುಗಳು .
#ಇವರ_ಆತ್ಮ_ಚರಿತ್ರೆ_ನೆನಪಿನ_ಜರಡಿಯಲ್ಲಿ
#ಮುದ್ರಕ_ಗುತ್ತಿಗೆದಾರ_ಬಿಲ್ಡರ್_ಕೃಷಿಕರಾಗಿ
#ಕಾರವಾರದಲ್ಲಿ_ಮನೋಹರ_ಪ್ರಿಂಟರ್ಸ_ಮಾಲಿಕರಾಗಿ
#ಆನಂದಪುರಂ_ಸಾಹಿತ್ಯ_ಹಬ್ಬದಲ್ಲಿ_ಸಾಗರ_ತಾಲ್ಲುಕು_ಸಾಹಿತ್ಯ_ಪರಿಷತ್ತಿನಿಂದ_ಸನ್ಮಾನ.
ಒಂದು ಕುಟುಂಬದ ತಂದೆ ಮತ್ತು ಅವರ ಆರು ಮಕ್ಕಳೂ ಸಾಹಿತ್ಯ ಕೃತಿಗಳ ರಚಿಸಿ ಪ್ರಕಟಿಸಿದ ವಿಶ್ವ ದಾಖಲೆಯ ಈ ಕುಟುಂಬವನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂನ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ನಲ್ಲಿ ಸಾಗರ ತಾಲ್ಲೂಕ್ ಕನ್ನಡ ಸಾಹಿತ್ಯ ಪರಿಷತ್ ಮತ್ತು ಆನಂದಪುರಂ ಹೋಬಳಿ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಆನಂದಪುರಂ ಸಾಹಿತ್ಯ ಹಬ್ಬ ಕಾಯ೯ಕ್ರಮದಲ್ಲಿ ದಿನಾಂಕ 11-ಡಿಸೆಂಬರ್ -2022ರಂದು ಸನ್ಮಾನಿಸಲಾಯಿತು.
ಈ ವಿಶಿಷ್ಟ ಕುಟುಂಬದ ಎಲ್ಲಾ ಸದಸ್ಯರ ಪ್ರಕಟಿತ ಪುಸ್ತಕ ಪ್ರದರ್ಶನವನ್ನು ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಂಜುನಾಥ್ ಉದ್ಘಾಟಿಸಿದರು.
ವೇದಿಕೆಯಲ್ಲಿ ಸಾಗರ ತಾಲ್ಲೂಕ್ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿ.ಟಿ. ಸ್ವಾಮಿ, ಖ್ಯಾತ ಅಂತಾರಾಷ್ಟ್ರೀಯ ಪತ್ರಕರ್ತ ಡಿ.ಪಿ. ಸತೀಶ್, ಎಲ್ಲಾ ಹಬ್ಬು ಸಹೋದರರು ಮತ್ತು ಅಧ್ಯಕ್ಷತೆಯನ್ನು ಆನಂದಪುರಂ ಹೋಬಳಿ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಡಿ.ರವಿ ವಹಿಸಿದ್ದರು.
ಸನ್ಮಾನ ಸ್ವೀಕರಿಸಿ ಜಯಪ್ರಕಾಶ್ ಹಬ್ಬು ಮಾಡಿದ ಬಾಷಣ ಈ ಲಿಂಕ್ ಕ್ಲಿಕ್ ಮಾಡಿ ನೋಡಬಹುದು.
https://youtu.be/j353IiFPz9g
2021 ರಲ್ಲಿ ಇವರು ಬರೆದು ಪ್ರಕಟಿಸಿದ #ನೆನಪಿನ_ಜರಡಿಯಲ್ಲಿ ಇವರ ಆತ್ಮಕಥೆ ಜೀವನದಲ್ಲಿನ ನೋವು ಸೋಲುಗಳಿಂದ ಹತಾಷರಾಗದೇ ಸತತ ಪ್ರಯತ್ನದಿಂದ ದೀರ್ಘ ಕಾಲದ ಅಲೆಮಾರಿ ಬದುಕಾದ ಮುದ್ರಕ - ಕಂಟ್ರಾಕ್ಟರ್ - ಬಿಲ್ಡರ್ - ಕೃಷಿಕರಾಗಿ ಯಶಸ್ವಿಯಾದ ಇವರ ನಿಜ ಜೀವನದ ಕಥೆ ಎಲ್ಲರಿಗೂ ಆತ್ಮವಿಶ್ವಾಸ ತುಂಬುವ ಪುಸ್ತಕವಾಗಿದೆ.
Comments
Post a Comment