Blog number 1150. ಶಿವಮೊಗ್ಗ ಜಿಲ್ಲೆಯ ಡಿಸಿಸಿ ಬ್ಯಾಂಕ್ ಕ್ಯಾಲೆಂಡರ್ 2023ರಲ್ಲಿ ಆನಂದಪುರಂನ ಐತಿಹಾಸಿಕ ಸ್ಮಾರಕ ಚಂಪಕ ಸರಸ್ಸುವಿದೆ.ಪ್ರತಿ ತಿಂಗಳ ಪೋಟೋದಲ್ಲಿ ಶಿವಮೊಗ್ಗ ಜಿಲ್ಲೆಯ ಇತಿಹಾಸವಿದೆ ಸು೦ದರವಾಗಿ ಮುದ್ರಿಸಿದ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಕ್ಯಾಲೆಂಡರ್ ಜಿಲ್ಲೆಯ ಇತಿಹಾಸ - ಪ್ರೇಕ್ಷಣೀಯ ಸ್ಥಳದ ಮಹತ್ತದ ದಾಖಲೆಯ ಕ್ಯಾಲೆಂಡರ್ ಆಗಿದೆ. ಕ್ಯಾಲೆಂಡರ್ ಗಳಿಗೆ ಪ್ರಶಸ್ತಿ ನೀಡುವುದಾದರೆ ಪ್ರಥಮ ಪ್ರಶಸ್ತಿ ಈ ಕ್ಯಾಲೆಂಡರ್ ಗೆ ನೀಡಲೇ ಬೇಕು
#ಸುಂದರವಾದ_ಶಿವಮೊಗ್ಗ_ಜಿಲ್ಲೆಯ_ಚಿತ್ರಗಳೊಂದಿಗೆ
#ಇದರಲ್ಲಿ_ಆನಂದಪುರಂನ_ಚಂಪಕ_ಸರಸ್ಸು_ಚಿತ್ರವೂ_ಇದೆ.
#ಅಭಿನಂದನೆಗಳು_ಡಿಸಿಸಿ_ಬ್ಯಾಂಕ್_ಅಧ್ಯಕ್ಷರಾದ_ಚನ್ನವೀರಪ್ಪನವರಿಗೆ
#ಈ_ಕ್ಯಾಲೆಂಡರ್_ನಿಜಕ್ಕೂ_ಅದ್ಬುತವಾಗಿದೆ.
ಬಹಳಷ್ಟು ರಾಜಕಾರಣಿಗಳು ಅಧಿಕಾರ ಸಿಕ್ಕಾಗ ತಮ್ಮ ಊರು ಮತ್ತು ಹಳ್ಳಿಯನ್ನು ದೂರದ ದೇಶವಾದ ಸಿಂಗಾಪುರದಂತೆ ಮಾಡುವುದಾಗಿ ಹೇಳಿ ಬಿಡುತ್ತಾರೆ.
ಆದರೆ ತಮ್ಮ ಊರಿನ ಚರಿತ್ರೆ ಸಿಂಗಾಪುರಕ್ಕಿಂತ ಶ್ರೀಮಂತವಾಗಿತ್ತು ಎಂಬ ಜ್ಞಾನ ಇಲ್ಲದವರ ಮುಂದೆ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ ಬಿನ್ನವಾಗಿ ಕಾಣುತ್ತಾರೆ ಅದಕ್ಕೆ ಉದಾಹರಣೆ ಮೊನ್ನೆ ಅವರು ಬಿಡುಗಡೆ ಮಾಡಿದ 2023ರ ಕ್ಯಾಲೆಂಡರ್ ಅವರ ಜಿಲ್ಲೆಯ ಇತಿಹಾಸದ ಕಾಳಜಿ ತೋರಿಸಿದೆ.
ಜೂನ್ ಮಾಸದ್ದು ಆನಂದಪುರಂನಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕರು ಮತ್ತು ಬೆಸ್ತರ ರಾಣಿ ಚಂಪಕಾಳ ದುರಂತ ಪ್ರೇಮ ಕಥೆಯ ಸ್ಮಾರಕ ತಾಜ್ ಮಹಲಿಗಿಂತ ಮೊದಲೆ ನಿರ್ಮಾಣವಾದ ಪ್ರೇಮ ಸ್ಮಾರಕದ ಚಿತ್ರ ಹಾಕಿದ್ದಾರೆ.
ಅಕ್ಟೋಬರ್ ಮಾಸದಲ್ಲಿ ಜಿಲ್ಲೆಯ ಶರಾವತಿ ನದಿಯ ಹಿನ್ನೀರ ಪಟವಿದೆ. ನವೆಂಬರ್ ಮಾಸದಲ್ಲಿ ಜಿಲ್ಲೆಯ ತುಂಗಾ ತೀರದ ಮಂಡಗದ್ದೆ ಪಕ್ಷಿಧಾಮದ ಚಿತ್ರವಿದೆ.
ಡಿಸೆಂಬರ್ 2023ರ ಮಾಸದ ಚಿತ್ರ ಆಗುಂಬೆಯ ಸೂರ್ಯಾಸ್ತದ ಚಿತ್ರದೊಂದಿಗೆ 2023 ಮುಕ್ತಾಯವಾಗುವ ಈ ಡಿಸಿಸಿ ಬ್ಯಾಂಕ್ ಕ್ಯಾಲೆಂಡರ್ ವಿಶೇಷ ಮತ್ತು ವಿಶಿಷ್ಟವಾದ ಸುಂದರ ಕಾವ್ಯದಂತಿದೆ.
ಇಂತಹ ನೂತನ ಪ್ರಯೋಗದ ಕ್ಯಾಲೆಂಡರ್ ಬಿಡುಗಡೆ ಮಾಡಿರುವ ಡಿಸಿಸಿ ಬ್ಯಾಂಕ್ ಮತ್ತು ಅದರ ಅಧ್ಯಕ್ಷರಾದ ಚೆನ್ನವೀರಪ್ಪರಿಗೆ ಅಭಿನಂದನೆ ಸಲ್ಲಿಸುತ್ತೇನೆ.
Comments
Post a Comment