Skip to main content

Blog number 1105. ನನ್ನ ಸಣ್ಣ ಕಥಾ ಸಂಕಲನ ಭಟ್ಟರ ಬೊಂಡಾ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ ವಿಮರ್ಷೆ ಮಾಡಿದ ಖ್ಯಾತ ಪತ್ರಕರ್ತ ಆರ್.ಟಿ. ವಿಠಲಮೂರ್ತಿ

ಭಟ್ಟರ ಬೋಂಡಾದ ಬಾಂಡ್ಲಿಯಲ್ಲಿ 
ಬಿಲಾಲಿ ಬಿಲ್ಲಿಯ ಅಭ್ಯಂಜನ
      
ಇಲ್ಲಿನ ಎಲ್ಲ ಕತೆಗಳ ಒಳ ಹೊಕ್ಕರೆ,ಅವುಗಳ ಮೈ ತಡವುತ್ತಿದ್ದರೆ,ಅವುಗಳ ಎದೆಬಡಿತವನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. 
ಇದು ಕಥಾನಾಯಕನ ಕತೆ.
ಇತ್ತೀಚಿನ ದಿನಗಳಲ್ಲಿ ತಮ್ಮ ಬರಹಗಳ ಮೂಲಕ ನಾಡಿನ ಗಮನ ಸೆಳೆಯುತ್ತಿರುವ ಅರುಣ್ ಪ್ರಸಾದ್ ಅವರ ಈ ಕಥಾಸಂಕಲನ ನನ್ನನ್ನು ಬಿಟ್ಟು ಬಿಡದಂತೆ ಕಾಡಿದ್ದು ಅದರಲ್ಲಿನ ಜೀವನ ಪ್ರೀತಿಗಾಗಿ.
ಇಲ್ಲಿರುವ ಕತೆಗಳಲ್ಲಿ ಸಾಮಾನ್ಯ ಜನರೇ ನಾಯಕರು.ಅವರ ಪ್ರೀತಿ,ಮೋಸ,ವಂಚನೆ,ತಂಟೆ,ತಕರಾರು,ಅಮಾಯಕತೆಯ ರೂಪಗಳನ್ನು ಅರುಣ್ ಪ್ರಸಾದ್ ಎಷ್ಟು ಆಪ್ತವಾಗಿ ಹೇಳುತ್ತಾರೆಂದರೆ,ಆ ಕತೆಗಳಲ್ಲಿ ನಾವೂ ಒಂದು ಪಾತ್ರವಾಗಿ ಬೆರೆತು ಹೋಗಿ ಹೋಗಿ ಬಿಡುತ್ತೇವೆ.
ಚುನಾವಣೆ ಮತ್ತು ರಮ್ಜಾದಳ ಟಿವಿ ಕತೆಯಲ್ಲಿ ಗಂಡನಿಲ್ಲದ ಹೆಣ್ಣಿನ ಬದುಕು ಎಷ್ಟು ಕಷ್ಟಕರ ಎಂದು ಹೇಳುತ್ತಲೇ ವಿಧವೆ ರಮ್ಜಾದಳ ಖಾಸಗಿ ಬದುಕಿನ ಕತೆ ಪಡೆಯುವ ತಿರುವುಗಳು ನಿಬ್ಬೆರಗು ಮೂಡಿಸುತ್ತವೆ.
ರಮ್ಜಾದ್ ಮತ್ತು ಡ್ರೈವರ್ ನಡುವಿನ ಖಾಸಗಿ ಘಟನೆಯೊಂದು ಆಚಾರಿಯ ಬಾಯಲ್ಲಿ ಡಬಲ್  ಮೀನಿಂಗ್ ಪದಗಳಾಗಿ ಹೊರಹೊಮ್ಮುವುದು,ಕೆರಳಿದ ರಮ್ಜಾದ್ ಅತನಿಗೆ ಬಾರಿಸುವುದು ಊರ ಮಧ್ಯೆ ಏನೇನೋ ರೂಪ ಪಡೆದು ಕಾಂಗ್ರೆಸ್-ಬಿಜೆಪಿಯ ಮಧ್ಯೆ ನಡೆದ ಗಲಾಟೆ ಎಂಬಂತೆ ಬಣ್ಣನೆಯಾಗುತ್ತಾ,ಊರ ಜನರ ಬಾಯಿಗೆ ತಾಂಬೂಲವಾಗುತ್ತದೆ.
ಆ ಊರಲ್ಲೊಂದು ಶಾಂತಿ ಸಭೆ ಕತೆಯಲ್ಲಿ ಬಲಿಷ್ಟರು ಸೇರಿ ಬಹುಸಂಖ್ಯಾತ ಬಡವರನ್ನು ಹೇಗೆ ಶೋಷಿಸುತ್ತಾರೆ ಎಂಬುದಕ್ಕೆ ಭಾಷಾ ಘಟನೆ ಉದಾಹರಣೆಯಾಗುತ್ತದೆ.
ಹೊಳೆ ಆಚೆಗಿನವರ ಜಾತ್ರಾ ಪ್ರಸಂಗ ಕತೆಯಲ್ಲಿ, ಬದುಕಬೇಕಾದ ಬಡವರು ನಾಲ್ಕು ದಿನದ ಮೋಜಿಗಾಗಿ ಇರುವುದನ್ನು ಮಾರಿಕೊಳ್ಳುವ ಘಟನೆ ಹೃದಯ ತಲ್ಲಣಗೊಳ್ಳುವಂತೆ ಮಾಡುತ್ತದೆ.
ಆಹಾ ಅವನಂತಹ ಯುವಕ ಕತೆಯ ನಾಯಕ ಬಹುತೇಕ ಎಲ್ಲ ಊರುಗಳಲ್ಲಿ ಕಾಣಲು ಸಿಗುತ್ತಾನೆ.ಆತನಿಗೆ ತಕ್ಷಣದ ಹಿರಿಮೆ ಬೇಕು.ಅದಕ್ಕಾಗಿ ಆತ ಹಾಕುವ ಸೋಗು ಹೊಸಬರನ್ನು ಪಿಗ್ಗಿ ಬೀಳಿಸುವುದೂ ಹೌದು.ಆದರೆ ಕಾಲ ಕ್ರಮೇಣ ಈ ಆದರ್ಶದ ಮುಖವಾಡ ಕಳಚಿ ಎದುರಿಗಿದ್ದವರಿಗೆ ಭ್ರಮ‌ನಿರಸನ ಉಂಟು ಮಾಡುವುದೂ ಹೌದು.
ಸಿಗಂದೂರು ಶ್ರೀ ದೇವಿ ಕತೆ ಎಷ್ಟು ಢಾಳಾಗಿ ಹೃದಯಕ್ಕೆ ರಾಚುತ್ತದೆ ಎಂದರೆ ಜನರ ಭಕ್ತಿಯನ್ನು ಭಯವಾಗಿ ಪರಿವರ್ತಿಸಿ ಲಾಭ ಪಡೆಯುವವರು ಯಾರು?ಅಂತ ಹೇಳಿಬಿಡುತ್ತದೆ.
ವಾಸ್ತವವಾಗಿ ಇದು ಭಕ್ತಿಯ ಲೋಲಕಕ್ಕೆ ಅಂಟಿಕೊಂಡವರ ಬಿಡುಗಡೆಗೆ ದಾರಿ ತೋರುವ ಕತೆ ಎಂಬುದು ನಿಸ್ಸಂಶಯ.
ಆಳವಾಗಿ ನೋಡಿದರೆ ಅರುಣ್ ಪ್ರಸಾದ್ ಅವರು ಕನ್ನಡದ ಕಥನ ಪರಂಪರೆಯ ಸಾಲಿನಲ್ಲಿ ಮೈಲುಗಲ್ಲುಗಳಾಗಿ ಉಳಿದ ಪಿ.ಲಂಕೇಶ್ ಹಾಗೂ‌ ಪೂರ್ಣಚಂದ್ರ ತೇಜಸ್ವಿ ಅವರ ಕಸಿಗೊಂಡ ರೂಪ ಅನ್ನಿಸುತ್ತಾರೆ.
ಅವರ ಕತೆಯ ಪಾತ್ರಗಳನ್ನೇ ನೋಡಿ.ಬಡ್ಡಿ ದುಡ್ಡಿಗಾಗಿ ಹಪಹಪಿಸುವ ಶೀನಿ,ರಾಮಿಯಿಂದ ಹಿಡಿದು ಎಲ್ಲರೂ ಸರಳ,ಸಾಮಾನ್ಯರು.
ತೇಜಸ್ವಿ ಹಾಗೂ ಲಂಕೇಶರ ಕಥೆಗಳಲ್ಲೂ‌ ಇಂತವರೇ ನಾಯಕರು.ಹೀಗಾಗಿ ಇಲ್ಲಿನ ಕಥನಗಳು ಓದುಗನನ್ನು ತನ್ನ ವ್ಯಾಪ್ತಿಗೆ ಎಳೆದುಕೊಂಡು ಹೃದಯಕ್ಕೆ ಹತ್ತಿರವಾಗಿ ಬಿಡುತ್ತವೆ.
ಅಂದ ಹಾಗೆ ನನಗನ್ನಿಸುವ ಪ್ರಕಾರ ಇಂತಹ ಸಶಕ್ತ ಪಾತ್ರಗಳನ್ನು ಸೃಷ್ಟಿಸಲು ಅರುಣ್ ಪ್ರಸಾದ್ ಯಾರ ಮೊರೆ ಹೋಗುವ ಅಗತ್ಯವೇ ಇಲ್ಲ.ಯಾಕೆಂದರೆ ಅವರ ಹೋರಾಟದ ಬದುಕೇ ಇಂತಹ ಪಾತ್ರಗಳನ್ನು ಅವರ ಮನೋಭೂಮಿಕೆಯ ಮೇಲೆ ತಂದು ನಿಲ್ಲಿಸಿದೆ.
ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ನನ್ನ ಸ್ನೇಹಿತರಾಗಿರುವ ಅರುಣ್ ಪ್ರಸಾದ್ ಅವರದು ಹೋರಾಟದ ಬದುಕು.
ನಾನು ಬೆಂಗಳೂರಿಗೆ ಬಂದು ಪತ್ರಿಕೋದ್ಯಮದ ತಿರುಗಣಿಯಲ್ಲಿ ರಣರಣ ಅಂತ ಸುತ್ತುತ್ತಿದ್ದ ಕಾಲದಲ್ಲಿ ಅರುಣ್ ಪ್ರಸಾದ್ ತಮ್ಮೂರು ಆನಂದಪುರವನ್ನೇ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಜನರ ನಡುವೆ ಬಡಿದಾಡುತ್ತಿದ್ದರು.ಅಗವರು ಜಿಲ್ಲಾಪಂಚಾಯ್ತಿ ಸದಸ್ಯರಾಗಿ ಹೋರಾಡಿದ್ದನ್ನು ಬರೆದರೆ ಅದೇ ಒಂದು ಸಾಹಸ ಗಾಥೆ.
ಒಂದು ಸಲ ಕೃಷಿ ಹೊಂಡ, ನೀರಾವರಿ ಪಿಕ್ ಅಪ್ ನಿರ್ಮಾಣದ ಹೆಸರಿನಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡಿದ್ದರು.
ಪುಸ್ತಕದಲ್ಲೇನೋ ಕೃಷಿಹೊಂಡಗಳನ್ನು ತೆರೆದ, ಪಿಕ್ ಅಪ್ ನಿರ್ಮಿಸಿದ ಲೆಕ್ಕವಿತ್ತು ಆದರೆ ವಾಸ್ತವದಲ್ಲಿ ಕಾಮಗಾರಿ ಮಾಡಿರಲೇ ಇಲ್ಲ.
ಕೃಷಿ ಅಧಿಕಾರಿಗಳ ಈ ವಂಚನೆಯ ವಿರುದ್ಧ ಹೋರಾಟ ಆರಂಭಿಸಿದ ಅರುಣ್ ಪ್ರಸಾದ್ ನನ್ನನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಸತ್ಯ ದರ್ಶನ ಮಾಡಿಸಿದರು.ನಾನೂ ಹೋಗಿ ಬಂದು ವೈಕುಂಠ ರಾಜು ರವರ ವಾರಪತ್ರಿಕೆಯಲ್ಲಿ ಅದನ್ನು ವರದಿ ಮಾಡಿದೆ.
ಅಷ್ಟೇ ಅಲ್ಲ,ಆಗ ಕೃಷಿ ಸಚಿವರಾಗಿದ್ದ ಸಿ.ಭೈರೇಗೌಡರ ಗಮನಕ್ಕೂ ತಂದೆ.ಅವರು ತಡ ಮಾಡದೆ ಸ್ಥಳಕ್ಕೆ ಭೇಟಿ ನೀಡಿದರು.ಎಲ್ಲಿದೆ ಕೃಷಿ ಇಲಾಖೆ ಮಾಡಿದ ಕಾಮಗಾರಿ ಅಂತ ಅವರು ಗುಡುಗಿದಾಗ ಅಧಿಕಾರಿಗಳು ಸುಸ್ತು.
ಅವತ್ತು ಭೈರೇಗೌಡರು ಸುಮಾರು ಒಂದು ಡಜನ್ ಅಧಿಕಾರಿಗಳನ್ನು ಸಾಗರದ ಜೈಲಿಗೆ ಕಳಿಸಿ ಅಮಾನತು ಮಾಡಿ, ಭೂಸಾರ ಸಂರಕ್ಷಣ ಇಲಾಖೆಯನ್ನೇ ಕೃಷಿ ಇಲಾಖೆಯಲ್ಲಿ ವಿಲೀನ ಮಾಡಿ ತನಿಖೆಗೆ ಆದೇಶಿಸಿದಾಗ ಇಡೀ ರಾಜ್ಯ ಅದನ್ನು ಬೆರಗುಗಣ್ಣಿನಿಂದ ನೋಡಿತು.ಆ ಮೂಲಕ ಭ್ರಷ್ಟಾಚಾರದ ವಿರುದ್ಧದ ಅರುಣ್ ಪ್ರಸಾದ್ ಹೋರಾಟ ಯಶಸ್ವಿಯಾಗಿತ್ತು.
ಈ ಹೋರಾಟದ ಬದುಕೇನಿದೆ?ಇದೇ ಕತೆಗಾರ ಅರುಣ್ ಪ್ರಸಾದ್ ಅವರಿಗೆ ನಿಕ್ಷೇಪವಾಗಿ ದಕ್ಕಿದೆ.
ಹೀಗಾಗಿಯೇ ಒಂದು ಕತೆ ಹೇಳಲು ಹೊರಟಾಗ ಮನಸ್ಸಿನಲ್ಲುಳಿಯುವ ಪಾತ್ರಗಳನ್ನು ಸೃಷ್ಟಿಸಲು ಅವರಿಗೆ ಸಾಧ್ಯವಾಗಿದೆ.
ಹೋರಾಟಗಾರ-ಕತೆಗಾರ ಬೇರೆ-ಬೇರೆಯಲ್ಲದ ಕಾರಣಕ್ಕಾಗಿ ಇಲ್ಲಿರುವ ಎಲ್ಲ ಕತೆಗಳು ನಮ್ಮ‌ನಡುವೆಯೇ ನಡೆದಂತೆ ಭಾಸವಾಗುತ್ತಾ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಬಿಡುತ್ತವೆ,ಬಹುಕಾಲ ಕಾಡುತ್ತವೆ.
ಕತೆಗಾರರಾಗಿ ಹೋರಾಟಗಾರ ಅರುಣ್ ಪ್ರಸಾದ್ ಗೆದ್ದಿರುವುದು ಈ ಕಾರಣಕ್ಕಾಗಿ.ಇದಕ್ಕಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಅಂದ ಹಾಗೆ ಈ ಪುಸ್ತಕ ಖರೀದಿಸಬಯಸುವವರು ಅರುಣ್ ಪ್ರಸಾದ್ ಅವರನ್ನು ವ್ಯಾಟ್ಸ್ ಅಪ್ ಮೂಲಕ (9449253788) ಸಂಪರ್ಕಿಸಬಹುದು.

ಆರ್.ಟಿ.ವಿಠ್ಠಲಮೂರ್ತಿ

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ಸೀನಿಯರ್ ಗಳು ಹೇಳುತ್ತಿದ್ದರು, ಬಹುಶಃ ಆಗಿನ ಸಿನಿಮಾದಲ್ಲಿ ವಿಲನ