Skip to main content

Posts

Showing posts with the label K.ShyamRao Legend of Kannada media his autobiography written by Vishweshwar Bhat SANJAYA UVACHA contains more important information about Sagar taluk

Blog number 1088. ಪತ್ರಿಕೋದ್ಯಮದ ಬೀಷ್ಮರೆಂದೇ ಖ್ಯಾತರಾಗಿದ್ದ ಸಂಯುಕ್ತ ಕನಾ೯ಟಕದ ಕೆ. ಶ್ಯಾಮರಾವ್ ರ ಆತ್ಮಚರಿತ್ರೆಯಲ್ಲಿ ಸಾಗರ ತಾಲ್ಲೂಕಿನ ಅನೇಕ ಆ ಕಾಲದ ಘಟನಾವಳಿಗಳು ಅವರ ಆತ್ಮಚರಿತ್ರ ಸಂಜಯ ಉವಾಚದಲ್ಲಿ ದಾಖಲಾಗಿದೆ ಅವರ ಸಂಜಯ ಎಂಬ ವಾರಪತ್ರಿಕೆಗೆ ಸಾಗರ ತಾಲ್ಲೂಕಿನಲ್ಲಿ ಹೆಚ್ಚು ಚಂದಾದಾರರಿದ್ದರು.

ಪತ್ರಿಕೋದ್ಯಮದ ದಿಗ್ಗಜ ಸಂಯುಕ್ತ ಕನಾ೯ಟಕದ ಶಾಮರಾವ್ ರ ಆತ್ಮಚರಿತ್ರೆ ಸಂಜಯ ಉವಾಚದಲ್ಲಿ ಸಾಗರ ತಾಲ್ಲೂಕ್   ಕೆಳದಿ ಮಠದ ಹೋರಾಟದಲ್ಲಿ. ಶಾಮರಾಯರು.  ಸಂಯುಕ್ತ ಕನಾ೯ಟಕದ ಸಂಪಾದಕರಾದ ಶಾಮರಾಯರೆಂದರೆ ಪತ್ರಿಕೋದ್ಯಮದ ಬೀಷ್ಮರಿದ್ದ೦ತೆ ಅವರು ಪ್ರಾರಂಭದಲ್ಲಿ  ಸಂಜಯ ಎಂಬ ವಾರ ಪತ್ರಿಕೆ ನಡೆಸುತ್ತಿದ್ದರು ಆ ವಾರ ಪತ್ರಿಕೆಗೆ ಸಾಗರ ತಾಲ್ಲೂಕಿನಲ್ಲಿ ಹೆಚ್ಚು ಚಂದಾದರರಿದ್ದರು, ಈ ಪತ್ರಿಕೆ ಸಾಗರ ತಾಲ್ಲೂಕಿನ ಅಡಕೆ ಬೆಳೆಗಾರರು, ಕೆಳದಿ ಮಠ, ಕಾಗೋಡು ಹೋರಾಟದ ಬಗ್ಗೆ ಹೆಚ್ಚು ವರದಿ ಮಾಡಿದ ಖ್ಯಾತಿ ಇದೆ.   ಕಾಗೋಡು ಸತ್ಯಾಗ್ರಹದ ರೂವಾರಿ ಹೆಚ್. ಗಣಪತಿಯಪ್ಪರ ಸಂದರ್ಶನ ಸಂಜಯ ವಾರಪತ್ರಿಕೆಗೆ ಮಾಡಿದ ಬಗ್ಗೆ ಈ ಪುಸ್ತಕದಲ್ಲಿ ಬರೆದಿದ್ದಾರೆ.    ಶಾಮರಾಯರ ಆತ್ಮಚರಿತ್ರೆ ಅವರ ಶಿಷ್ಯ ಖ್ಯಾತ ಪತ್ರಕತ೯ ವಿಶ್ವೇಶ್ವರ ಭಟ್ಟರು ಬರೆದು ಪ್ರಕಟಿಸಿದ್ದಾರೆ ಅದರ ಹೆಸರು "ಸಂಜಯ ಉವಾಚ ''ಆದರಲ್ಲಿ ಸಾಗರ ತಾಲ್ಲೂಕಿನ ಕೆಲ ನೆನಪು ಘಟನೆ ದಾಖಲಿಸಿದ್ದಾರೆ ಅದನ್ನ ಕೆಲ ಬಾಗಗಳಾಗಿ ಇಲ್ಲಿ ಬರೆದಿದ್ದೇನೆ.  ಕೆಳದಿ ರಾಜ ಮಠದ ವ್ಯಾಜ್ಯಗಳು ಸ್ವಾತಂತ್ರ ಪೂವ೯ದಿOದಲೂ ಇದೆ, ಮೊನ್ನೆ ದಸರಾದಲ್ಲಿ ಆ ಮಠದ ಪಚ್ಚೆ ಲಿಂಗ ಲಾಕರ್ ನಿಂದ ತಂದು ಪ್ರದಶ೯ನಕ್ಕೆ ಇಡಲಾಗಿತ್ತು.   ಇದು ಕೆಲ ವ್ಯಾಜ್ಯದಿಂದ ಭಕ್ತರ ದಶ೯ನಕ್ಕೆ ಲಭ್ಯವಿದ್ದಿಲ್ಲ ಹಾಲಿ ಮಠದ ಸ್ವಾಮಿಗಳು ಸಾಗರದ ಶಾಸಕರಾದ ಹಾಲಪ್ಪರಿಗೆ ಮನ...