Blog number 2279. ಚಿಕ್ಕಮಗಳೂರುಜಿಲ್ಲೆಯ ಮುಡಿಗೆರೆ ತಾಲ್ಲೂಕಿನ ಅಂಗಡಿ ಗ್ರಾಮ 10 ನೇ ಶತಮಾನದಲ್ಲಿ ಹೊಯ್ಸಳರ ಮೊದಲ ರಾಜದಾನಿ
#ಸಳ_ತನ್ನ_ಜೈನ_ಗುರು_ಸುದತ್ತಾಚಾಯ೯ರ_ಮೇಲೆ_ಎರಗಿ_ಬಂದ_ಹುಲಿ_ಕೊಲ್ಲುತ್ತಾನೆ #ಇವರೇ_ಹೊಯ್ಸಳ_ರಾಜ_ವಂಶದ_ಸ್ಥಾಪಕರು #ಈ_ಸ್ಥಳವೇ_ಈಗಿನ_ಚಿಕ್ಕಮಗಳೂರು_ಜಿಲ್ಲೆಯ_ಮುಡಿಗೆರೆ_ತಾಲ್ಲೂಕಿನ #ಅಂಗಡಿ_ಗ್ರಾಮದ_ವಾಸಂತಿಕ_ದೇವಾಲಯ #ಇಲ್ಲಿ_900_ವರ್ಷಗಳ_ಹಿಂದಿನ_ಎರಡು_ಬೃಹತ್_ಸಂಪಿಗೆ_ಮರವಿದೆ. #vasantikatemple #mudigere #chikkamagalore #Angadi #jaintemple #jainhistory #belur #halebidu #hoysala #hoysalaarchitecture #karnatakatourism ಹತ್ತರಿಂದ 14ನೇ ಶತಮಾನದ ನಡುವೆ ಕರ್ನಾಟಕದ ಹೆಚ್ಚಿನ ಭಾಗ ಆಳಿದ ಹೊಯ್ಸಳ ಸಾಮ್ರಾಜ್ಯವು ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಕನ್ನಡಿಗರ ಶಕ್ತಿ. ಹೊಯ್ಸಳರು ಪಶ್ಚಿಮ ಘಟ್ಟಗಳ ಎತ್ತರದ ಪ್ರದೇಶವಾದ ಮಲೆನಾಡಿನವರು, 13ನೇ ಶತಮಾನದ ವೇಳೆಗೆ ಹೊಯ್ಸಳರು ಕರ್ನಾಟಕದ ಬಹುಪಾಲು ಪ್ರದೇಶದಲ್ಲಿ, ವಾಯುವ್ಯ ತಮಿಳುನಾಡು ಮತ್ತು ಪಶ್ಚಿಮದ ಆಂಧ್ರಪ್ರದೇಶದ ಭಾಗಗಳನ್ನು ಹಾಗೂ ಡೆಕ್ಕನ್ ಪ್ರಸ್ಥಭೂಮಿಯನ್ನು ಆಳಿದರು. ಶಿಲ್ಪ ಕಲಾ ವೈಭವದ ಅದ್ಭುತ ಪ್ರದರ್ಶನದ ಪ್ರಸಿದ್ಧ ದೇವಾಲಯಗಳಾದ ಬೇಲೂರಿನ ಚನ್ನಕೇಶವ ದೇವಾಲಯ, ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ಮತ್ತು ಸೋಮನಾಥಪುರದ ಚನ್ನಕೇಶವ ದೇವಾಲಯಗಳು ವಿನೆಸ್ಕೋ ವಿಶ್ವ ಪಾರಂಪರೆಯ ತಾಣಗಳನ್ನಾಗಿಸಿದೆ. ಈಗಿನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡ...