Blog number 1010. ಸಾಗರದ ವರದಶ್ರೀ ಛಾಯ ಹೋಟೆಲ್ ಬೀಮಣ್ಣರ ಪುತ್ರ, ರಾಜ್ಯ ಜೀವ ವೈವಿದ್ಯ ಮಂಡಳಿಯ ನಿರ್ದೇಶಕ ಮತ್ತು ಶೆಡ್ತಿಕೆರೆ ಗ್ರಾಮೀಣ ವಿಜ್ಞಾನ ಕೇಂದ್ರದ ರೂವಾರಿ ಕವಲುಗೋಡು ವೆಂಕಟೇಶ್ ನನ್ನ ಕಾದಂಬರಿ ಓದಿ ಮತ್ತು ಚಂಪಕ ಸರಸ್ಸು ಸ್ಮಾರಕಕ್ಕೆ ಬೇಟಿ ನೀಡಿ ಬರೆದ ವಿಮರ್ಶೆ
#ಕವಲಗೋಡು_ವೆಂಕಟೇಶ್ ಯಶಸ್ವಿ ಉದ್ದಿಮೆದಾರರು,ಕೃಷಿಕರು, ಅತ್ಯುತ್ತಮ ಓದುಗರು, ಬರಹಗಾರರು, ಪರಿಸರಪ್ರೇಮಿ ಹೀಗೆ ಹಲವಾರು ಜನ ಪರ ಕೆಲಸದಲ್ಲಿ ಎಲೆ ಮರೆಯ ಕಾಯಿಯಂತೆ ಕಾಯ೯ನಿವ೯ಹಿಸುತ್ತಾ ಬಂದಿದ್ದಾರೆ. ಗ್ರಾಮೀಣ ಪರಿಸರದ ಇವರದೇ ಗೆಳೆಯರು ಸೇರಿ ಹುಟ್ಟುಹಾಕಿರುವ ಶೆಡ್ತಿಕೆರೆ ಗ್ರಾಮೀಣ ವಿಜ್ಞಾನ ಕೇಂದ್ರ ಅನೇಕ ದಾಖಲೆಯ ಜನೋಪಯೋಗಿ ಕಾಯ೯ಕ್ರಮ ನಡೆಸಿದೆ. ಅನೇಕ ಪುಸ್ತಕ, ಪ್ರಖ್ಯಾತರರನ್ನ ಕರೆತಂದು ಅವರಿಂದ ಸರಣಿ ಉಪನ್ಯಾಸ ನಡೆಸುತ್ತಾರೆ ಈಗ ಪದವಿ ಪೂವ೯ ಕಾಲೇಜು ಪ್ರಾರಂಬಿಸಿದ್ದಾರೆ. ಇವರ ತಂದೆ ಚಾಯಾ ಹೋಟೆಲ್ ಬೀಮಣ್ಣ ಇಡೀ ಸಾಗರ ತಾಲ್ಲೂಕಿನಲ್ಲೇ ಪ್ರಸಿದ್ಧರು ಅವರ ಸಾದನೆ ಕೂಡ ಅವರ ಪುತ್ರ ಕವಲಗೋಡು ವೆಂಕಟೇಶ್ ಕೂಡ ಅದೇ ದಾರಿಯಲ್ಲಿ ನಡೆದಿದ್ದಾರೆ ಸಾಗರದ ಸುಪ್ರಸಿದ್ಧ ವರದಾ ಶ್ರೀ ಲಾಡ್ಜ್ ಕೂಡ ಇವರದ್ದೆ. ಇವತ್ತು ನನ್ನ ಕಾದಂಬರಿ ಓದಿ ಅತ್ಯುತ್ತಮ ವಿಮಶೆ೯ ಮತ್ತು ಸಲಹೆ ದಾಖಲಿಸಿದ್ದಾರೆ ಅವರಿಗೆ ಕೃತಜ್ಞತೆಗಳು ಮತ್ತು ಮುಂದಿನ ದಿನದಲ್ಲಿ ನಮ್ಮ ಊರಿನ ಚಂಪಕ ಸರಸ್ಸು ಅಭಿವೃದ್ದಿಗೆ ಕೈ ಜೋಡಿಸಲು ಇವರನ್ನ ವಿನಂತಿಸುತ್ತೇನೆ #ಬೆಸ್ತರ_ರಾಣಿ_ಚಂಪಕಾ ಕೆಳದಿ ರಾಜರ ಇತಹಾಸ ಬೆಳಕು ಚೆಲ್ಲವ ಈ ಕಾದಂಬರಿ ಮಲೆನಾಡನ್ನು ಆಳಿಹೋದ ರಾಜಮನೆತನದ ಒಂದು ಐತಿಹಾಸಿಕ ಘಟನೆಯ ಸುತ್ತ ಗಮನ ಸೆಳೆದಿದೆ. ಈವರೆಗೆ ಇತಿಹಾಸಗಾರರು ಗಮನಿಸದ ವಿಷಯವೊಂದನ್ನು ಕುರಿತು ಮಲೆನಾಡಿನ ಮತ್ತು ಅನಂತಪುರಂ ಸುತ್ತಮುತ್ತ ಇದ್ದ ತಪ್ಪುಗ್...