#ರವೀಶ್_ನಿಟ್ಟೂರು_ಬೆಸ್ತರರಾಣಿ_ಚಂಪಕಾ_ಕಾದಂಬರಿ_ಓದಿ_ಅಭಿಪ್ರಾಯ_ಬರೆದಿದ್ದಾರೆ ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ತಪ್ಪಲು ಪುಸ್ತಕ ಓದುಗರ, ಕಲಾರಾದಕರ ಮತ್ತು ಚಿ೦ತಕರ ಚಾವಡಿಯೇ ಇದೆ. ಇಲ್ಲಿನವರಿಗೆ ಕನ್ನಡದ ಚಿತ್ರರಂಗ, ನಾಟಕರಂಗ, ಸಾಹಿತಿಗಳ ಒಡನಾಟವೂ ಹೆಚ್ಚು. ಇಲ್ಲಿನ ರವೀಶ್ ನಿಟ್ಟೂರು ಅಂತವರಲ್ಲಿ ಒಬ್ಬರು ಇವರ ಪುತ್ರ ಕೂಡ ಮಣಿಪಾಲ್ ನ ಆಸ್ಪತ್ರೆಯ ಖ್ಯಾತ ವೈದ್ಯರು, ಪೇಜಾವರ ಸ್ವಾಮಿಗಳ ಚಿಕಿತ್ಸಾ ತಂಡದಲ್ಲಿ ಒಬ್ಬರಾಗಿದ್ದರು. ಇವರ ಮನೆ ಅದ್ಬುತ ಮರದ ಕೆತ್ತನೆಯ ಅರಮನೆ ಇದನ್ನು ಅನೇಕ ಚಲನಚಿತ್ರ, ದಾರಾವಾಹಿಗಳಲ್ಲಿ ಬಳಕೆ ಆಗಿದೆ, ಪ್ರಖ್ಯಾತ ದಾರಾವಾಹಿ ಮೂಡಲ ಮನೆ ಇವರ ಮನೆಯಲ್ಲಿ ಚಿತ್ರಿಕರಣ ಆಗಿದೆ. ಇವರು ನನ್ನ ಕಾದಂಬರಿ " ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ " #ಬೆಸ್ತರರಾಣಿ_ಚಂಪಕಾ ಓದಿ ಅತ್ಯುತ್ತಮ ವಿಮಶೆ೯ ಬರೆದಿದ್ದಾರೆ. ಅವರ ಊರ ಸಮೀಪದ ಬೆನ್ನಟ್ಟೆಯಲ್ಲಿ ಕೆಳದಿ ಅರಸರು ಆರಾದಿಸುತ್ತಿದ್ದ ಗುತ್ಯಮ್ಮ ದೇವಸ್ಥಾನ ಮತ್ತು ಕಮಕೋಡು ಎಂಬಲ್ಲಿ ಕೆಳದಿ ಅರಸರ ಶಸ್ತ್ರಾಬ್ಯಾಸದ ಕೇಂದ್ರ ಆಗಿತ್ತು ಎನ್ನುವ ಮಾಹಿತಿಯೂ ನೀಡಿದ್ದಾರೆ. *ಬೆಸ್ತರರಾಣಿ ಚಂಪಕಾ* ಆತ್ಮೀಯರಾದ ಕೆ. ಅರುಣಪ್ರಸಾದ್ ಅವರ ಇತಿಹಾಸದ ಮೇಲೆ ಬೆಳಕು ಚಲ್ಲುವ ಪುಟ್ಟ ಕಾದಂಬರಿ. ನನಗೆ ಮೊನ್ನೆ ದಿನ ಅ...