ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ತಪ್ಪಲು ಪುಸ್ತಕ ಓದುಗರ, ಕಲಾರಾದಕರ ಮತ್ತು ಚಿ೦ತಕರ ಚಾವಡಿಯೇ ಇದೆ.
ಇಲ್ಲಿನವರಿಗೆ ಕನ್ನಡದ ಚಿತ್ರರಂಗ, ನಾಟಕರಂಗ, ಸಾಹಿತಿಗಳ ಒಡನಾಟವೂ ಹೆಚ್ಚು.
ಇಲ್ಲಿನ ರವೀಶ್ ನಿಟ್ಟೂರು ಅಂತವರಲ್ಲಿ ಒಬ್ಬರು ಇವರ ಪುತ್ರ ಕೂಡ ಮಣಿಪಾಲ್ ನ ಆಸ್ಪತ್ರೆಯ ಖ್ಯಾತ ವೈದ್ಯರು, ಪೇಜಾವರ ಸ್ವಾಮಿಗಳ ಚಿಕಿತ್ಸಾ ತಂಡದಲ್ಲಿ ಒಬ್ಬರಾಗಿದ್ದರು.
ಇವರ ಮನೆ ಅದ್ಬುತ ಮರದ ಕೆತ್ತನೆಯ ಅರಮನೆ ಇದನ್ನು ಅನೇಕ ಚಲನಚಿತ್ರ, ದಾರಾವಾಹಿಗಳಲ್ಲಿ ಬಳಕೆ ಆಗಿದೆ, ಪ್ರಖ್ಯಾತ ದಾರಾವಾಹಿ ಮೂಡಲ ಮನೆ ಇವರ ಮನೆಯಲ್ಲಿ ಚಿತ್ರಿಕರಣ ಆಗಿದೆ.
ಇವರು ನನ್ನ ಕಾದಂಬರಿ " ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ " #ಬೆಸ್ತರರಾಣಿ_ಚಂಪಕಾ ಓದಿ ಅತ್ಯುತ್ತಮ ವಿಮಶೆ೯ ಬರೆದಿದ್ದಾರೆ.
ಅವರ ಊರ ಸಮೀಪದ ಬೆನ್ನಟ್ಟೆಯಲ್ಲಿ ಕೆಳದಿ ಅರಸರು ಆರಾದಿಸುತ್ತಿದ್ದ ಗುತ್ಯಮ್ಮ ದೇವಸ್ಥಾನ ಮತ್ತು ಕಮಕೋಡು ಎಂಬಲ್ಲಿ ಕೆಳದಿ ಅರಸರ ಶಸ್ತ್ರಾಬ್ಯಾಸದ ಕೇಂದ್ರ ಆಗಿತ್ತು ಎನ್ನುವ ಮಾಹಿತಿಯೂ ನೀಡಿದ್ದಾರೆ.
*ಬೆಸ್ತರರಾಣಿ ಚಂಪಕಾ*
ಆತ್ಮೀಯರಾದ ಕೆ. ಅರುಣಪ್ರಸಾದ್ ಅವರ ಇತಿಹಾಸದ ಮೇಲೆ ಬೆಳಕು ಚಲ್ಲುವ ಪುಟ್ಟ ಕಾದಂಬರಿ. ನನಗೆ ಮೊನ್ನೆ ದಿನ ಅವರು ಪ್ರೀತಿ ಯಿಂದ ಕಳಿಸಿದ ಪುಸ್ತಕ ಕೈ ಸೇರಿದಾಗ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ.
ನಾನು ಕಾದಂಬರಿ ವಿಮರ್ಶೆ ಮಾಡುವಷ್ಟು ಬೆಳೆದಿಲ್ಲ. ನಾನು ವಿಮರ್ಶೆ ಮಾಡಿದರೆ ಶೃತಿ ಬಂಗವಾಗಬಹುದು. ಯಕ್ಷಗಾನದ ರಂಗ ಸ್ಥಳದಲ್ಲಿ ಒಂದು ಶೃತಿ ಇರುವಂತೆ, ಅಲ್ಲಿನ ಮಾತುಗಳು ಎಲ್ಲವೂ ಆ ಶೃತಿಗೆ ಹೊಂದಿಕೊಂಡಿರುತ್ತದೆ. ಇಲ್ಲೂ ಅಷ್ಟೇ ವಿಮರ್ಶೆ, ಅದರಲ್ಲೂ ಇತಿಹಾಸದ ಪುಸ್ತಕಕ್ಕೆ ವಿಮರ್ಶೆ ನನ್ನಂತವನಿಗಲ್ಲ.
ಒಮ್ಮೆ ಜಯಂತ್ ಕಾಯಿಕಿಣಿ ಒಂದು ಮಾತು ಹೇಳಿದ್ದರು. ಒಳ್ಳೆಯ ವಿಮರ್ಶಕರು ಅಂದರೆ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ತರ ಆಗಿದ್ದಾರೆ ಅಂತ. ಹುಲಿಗಳು ಕೆಲವೇ ಇದೆ, ಸಿಂಹ ಗಳು ಕೆಲವೇ ಇದೆ ಅಂದಂತೆ. ಎಂತ ಮಾತು, ಅವರು ಮುಂದುವರಿದು, ಸಂಗೀತ ಅನ್ನುವುದು ಶ್ರಾವ್ಯ ಅದು ಅಶ್ರಾವ್ಯವನ್ನು ಉದ್ದೀಪಿಸುತ್ತೆ , ಸಿನಿಮಾ ಅದು ದೃಶ್ಯ, ಅದೃಶ್ಯ ವನ್ನು ಉದ್ದೀಪಿಸುತ್ತೆ, ಹಾಗೆ ಸಾಹಿತ್ಯ ಅದು ವ್ಯಕ್ತ ಅದು ಅವ್ಯಕ್ತ ವನ್ನು ಉದ್ದೀಪಿಸುತ್ತದೆ.
ನಿಜ ಅವರ ಮಾತು. ಸಾಹಿತ್ಯ ವಿಮರ್ಶೆ ಅದರಲ್ಲೂ ಇತಿಹಾಸದ ಸಾಹಿತ್ಯ ವಿಮರ್ಶೆಗೆ ಅದರದ್ದೇ ಆದ ತಯಾರಿ ಬೇಕು. ನಾವು ಯಾವದೇ ವಿಮರ್ಶೆ ಮಾಡುವಾಗಲೂ ಹೂರಣ ಇಟ್ಟುಕೊಳ್ಳ ಬೇಕು, ಪುಸ್ತಕದ ಓರಣವಲ್ಲ.
ಬೆಸ್ತರರಾಣಿ ಚಂಪಕ ಸುಂದರವಾಗಿ ಮೂಡಿ ಬಂದಿದೆ. ನಮ್ಮೂರಿನ ಹೆಸರೂ ಇದೆ. ಕೆಳದಿ ಅರಸರು ನಂಬುತ್ತಿದ್ದ ಗುತ್ತ್ಯಮ್ಮ ದೇವಿ ನಮ್ಮೂರಿನ ಬೆನ್ನಟ್ಟಿ ಯಲ್ಲಿದೆ. ಅದು ಒಡಮೂಡಿದ ಲಿಂಗ ವಾಗಿದ್ದು ಶರಾವತಿ ಹಿನ್ನೀರಿನಲ್ಲಿ ಮುಳುಗಡೆ ಯಾಗಿತ್ತು. ಈಗ ಎರಡು ವರ್ಷದ ಹಿಂದೆ ಭವ್ಯ ದೇವಸ್ಥಾನ ನಿರ್ಮಾಣ ವಾಗಿದೆ. ಸರ್ಕಾರದ ನಿರ್ಲಕ್ಷದಿಂದ ಸರಿಯಾದ ರಸ್ತೆ ಇಲ್ಲದೇ ಇತಿಹಾಸಕಾರರು ದೃಷ್ಟಿ ನೆಡಲು ಸಾಧ್ಯವಾಗಿಲ್ಲ. ಅದರ ಪಕ್ಕದಲ್ಲೇ ಕಮಕೋಡು ಎಂಬಲ್ಲಿ ಅರಸರ ಶಸ್ತ್ರಾಭ್ಯಾಸ ಯುದ್ಧತಯಾರಿ ಯ ಜಾಗ ಇಂದಿಗೂ ಜನಜನಿತವಾಗಿದೆ. ರಾಮಕ್ಷತ್ರಿಯರು ಇಂದಿಗೂ ಇಲ್ಲಿ ಬಂದು ದೇವಿಗೆ ನೆಡೆದು ಕೊಳ್ಳುವದು ಸಂಪ್ರದಾಯ.
ಅರುಣ್ ಪ್ರಸಾದ್ ಅವರು ಎಂಬತ್ತರ ದಶಕದಲ್ಲಿ ಜಿಲ್ಲಾ ಪಂಚಾಯತ್ ( ಈಗಿನ ಎಂ ಎಲ್ ಎ ಗೆ ಸಮನಾದದ್ದು ) ಸದಸ್ಯರಾಗಿ ಕೋಲ ಮಿಂಚಿನಂತೆ ಉದಯಿಸಿದವರು. ಯಾಕೋ ಅವರಿಗೆ ಅಲ್ಲಿಗೇ ರಾಜಕೀಯ ಸಾಕೆನಿಸಿರಬೇಕು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೂ ಬಂದು ನಮಗೆಲ್ಲ ದಾರಿದೀಪವಾಗಿದ್ದರೆ. ಇತಿಹಾಸದ ಈ ಪುಸ್ತಕವನ್ನು ಎಲ್ಲರೂ ಕೊಂಡು ಓದಲೇ ಬೇಕು. ನಿಮ್ಮ ಮನೆಯ ಲೈಬ್ರರಿ ಕಪಾಟಿನಲ್ಲಿ ಇದಕ್ಕೊಂದು ಸ್ಥಾನವನ್ನು ನೀಡಲೇಬೇಕು.
( ಪುಸ್ತಕ ಸಾಗರದ ಶ್ರೀ ಟ್ರೇಡರ್ಸ್ ನಲ್ಲಿ ಸಿಗುತ್ತೆ. ಕೊಂಡು ಓದಿ )
Comments
Post a Comment