ಕನ್ನಡಾಭಿಮಾನಿ, ಹೋರಾಟಗಾರ ದೂರ ದೇಶ ಲಂಡನ್ ನಲ್ಲಿ ಲಂಡನ್ ಕನ್ನಡ ಸಮ್ಮೇಳನ, ಲಂಡನ್ ಯಕ್ಷಗಾನ ಸ್ಪದೆ೯ ಆಯೋಜಿಸಿದ ಸಾಹಸಿ ಈಗ ಇವರ ತಂದೆ ಬರೆದಿರುವ ರಾಮಕಥಾ ಮ೦ಜರಿ ಮತ್ತು ಕೃಷ್ಣ ಕಥಾ ಮ೦ಜರಿ ಪ್ರಕಟಿಸಿದ್ದಾರೆ, ಇದನ್ನು ಖರೀದಿಸಿ ಇವರಿಗೆ ಪ್ರೋತ್ಸಾಹಿಸುವ ಕೆಲಸ ಕನ್ನಡಿಗರು ಮಾಡ ಬೇಕಾಗಿದೆ.
ಅನಿವಾಸಿ ಭಾರತೀಯರು, ಕೇರಳದ ಕಾಸರಗೋಡಿನ ಕನ್ನಡಿಗರು, ಕನ್ನಡ ಬಾಷಾಭಿಮಾನಿಗಳು, ದ್ಯೆವ ಭಕ್ತರು.
ಎಲ್ಲಕ್ಕಿಂತ ಹೆಚ್ಚಾಗಿ ಇವರ ಪೂಜ್ಯ ತಂದೆ ಖ್ಯಾತ ಸಾಹಿತಿಗಳಾದ ದಿವಂಗತ ಕುಂಠಿ ಕಾನ್ ಮಠ ಬಾಲಕೃಷ್ಣ ಭಟ್ಟರು ಬರೆದಿರುವ ರಾಮಾಯಣ ಮತ್ತು ಮಹಾಭಾರತ ಪುಸ್ತಕ ಮುದ್ರಿಸುವ ಇವರ ಮಹತ್ ಕಾಯ೯ ನಡೆಸಿದ್ದು ನನಗೆ ಅತ್ಯಂತ ಇಷ್ಟ ಆಗಿದೆ.
ತಂದೆಯಂತೆಯೇ ಬಹು ಮುಖ ಪ್ರತಿಭೆಯ ಕುಮಾರ್ ಈ ಹಿಂದೆ ಲಂಡನ್ ವಿಶ್ವ ಕನ್ನಡ ಸಮ್ಮೇಳನ, ಲಂಡನ್ ಯಕ್ಷಗಾನ ಸ್ಪದೆ೯ ಯಶಸ್ವಿಯಾಗಿ ನಡೆಸಿದವರು.
ಹುಟ್ಟಿದ ಊರಿನ ಕುಂಠಿ ಕಾನ್ ಮಠದ ದೇವಸ್ಥಾನ ಸಂಕೀಣ೯ ನವೀಕರಣ ಮಾಡುತ್ತಿದ್ದಾರೆ, ಮುಂದಿನ ದಿನದಲ್ಲಿ ಇವರ ತಂದೆಯ ಸ್ಮರಣಾಥ೯ ಅಡಿಟೋರಿಯಂ, ಅತಿಥಿ ಗೃಹ ಮತ್ತು ಅನ್ನ ಛತ್ರ ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಿಸುವ ಗುರಿ ಹೊಂದಿದ್ದಾರೆ.
ಕಳೆದ 2018ರ ಕೊನೆಯಲ್ಲಿ ಇವರ ತಂದೆ ಬರೆದಿದ್ದ 800 ಪುಟಗಳ #ರಾಮಕಥಾ_ಮಂಜರಿ ಪ್ರಕಟಿಸಿದ್ದರು ನನಗೆ ಕಳಿಸಿದ ಪ್ರತಿ ಜನವರಿ 2019 ರಲ್ಲಿ, ಪ್ರತಿ ದಿನ ಕೆಲ ಅಧ್ಯಾಯದಂತೆ 23 ದಿನದಲ್ಲಿ ಓದಿ ವಿಮಷೆ೯ ಬರೆದಿದ್ದನ್ನ ಅವರು ತಮ್ಮ FB ಪೇಜ್ ನಲ್ಲಿ post ಮಾಡಿದ್ದರು.
ಇವರದ್ದು ಹೋರಾಟದ ಜೀವನ ಇವರ ವಂಶ ಪಾರಂಪರ್ಯ ಕುಂಠಿ ಕಾನ್ ಮಠದ ದೇವಸ್ಥಾನದ ಸಂಕೀಣ೯ ಕೇರಳದ ಬದಿಯಡ್ಕ ಹವ್ಯಕ ಪರಿಷತ್ ( ನಮ್ಮ ಜಿಲ್ಲೆಯ ರಾಮಚಂದ್ರಪುರದ ಮಠಾದೀಶರ ಪ್ರಚೋದನೆಯಿಂದ) ಇವರ ತಂದೆ ಸಾಹಿತಿ ಮತ್ತು ಸಾತ್ವಿಕ ವಯೋವೃದ್ದರಾದ ಭಾಲಕೃಷ್ಣರ ಮೇಲೆ ಹಲ್ಲೆ ಮಾಡಿ ವಶಪಡಿಸಿಕೊಂಡಿದ್ದನ್ನ ದೀಘ೯ವಾದ ಕಾನೂನು ಸಮರದಿಂದ 2009ರಲ್ಲಿ ಕೇರಳದ ನೀಲೇಶ್ವರದ ಎಂಡೋಮೆಂಟ್ ಕಮಿಷನರ್ ಈ ಮಠ ಮತ್ತು ದೇವಸ್ಥಾನ ವಂಶ ಪಾರಂಪರ್ಯವಾಗಿ ಇವರ ಕುಟುಂಬಕ್ಕೆ ಸೇರಿದ್ದೆ೦ದು ಆದೇಶಿಸಿ ಇವರ ಸುಪತಿ೯ಗೆ ಪುನಃ ನೀಡಲ್ಪಟ್ಟಿತು.
ಪ್ರತಿಯೊಬ್ಬ ಹಿಂದೂ ದಮಿ೯ಯ ಪವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತ ತನ್ನ ಮನೆಯಲ್ಲಿಡಲು ಆಶಿಸುತ್ತಾನೆ ಹಾಗಾಗಿ ಶುದ್ಧ ಕನ್ನಡದಲ್ಲಿ ಕುಂಠಿ ಕಾನ್ ಮಠದ ಭಾಲಕೃಷ್ಣ ಭಟ್ಟರು ಬರೆದಿರುವ ಅವರ ಮಗ ಲಂಡನ್ ನಲ್ಲಿ ಇರುವ ಕುಮಾರ್ ಕುಂಠಿ ಕಾನ್ ಮಠ ಪ್ರಕಟಿಸಿರುವ #ರಾಮಕಥಾ_ಮಂಜರಿ ಮತ್ತು #ಕೃಷ್ಣಕಥಾ_ಮಂಜರಿ ಖರೀದಿಸಬಹುದಾಗಿದೆ.
Comments
Post a Comment