ದೇಶಿ ವಸ್ತುಗಳನ್ನ ಮಾರಾಟ ಮಾಡುವ ಒಂದು ಗುಂಪಿನಲ್ಲಿ ನನ್ನ ಪೋಸ್ಟ್ ಹಾಕಿದ್ದೆ "ಉಪ್ಪಾಗೆ ತುಪ್ಪ ಸಿಗುತ್ತಾ" ಅಂತ ಇದಕ್ಕೆ ಬಂದ ಕಾಮೆಂಟ್ ನೂರಾರು ಇದೆಂತ ತುಪ್ಪಾ ? ಎಮ್ಮೆ ತುಪ್ಪಾ, ದನದ ತುಪ್ಪಾ,ದೇಶಿ ತುಪ್ಪಾ ಮತ್ತು ಮಲೆನಾಡು ಗಿಡ್ದ ತುಪ್ಪಾ ಕೇಳಿದ್ದೇವೆ ಅಂತೆಲ್ಲ.
ಪಶ್ಚಿಮ ಘಟ್ಟದಲ್ಲಿನ ಉಪ್ಪಾಗೆ ಮರದಲ್ಲಿನ ಹಣ್ಣಿನಲ್ಲಿರುವ ಬೀಜ ತೊಳೆದು ಒಣಸಿ ನಂತರ ಕಲ್ಲಿನಲ್ಲಿ ಕಡೆದು ನೀರಿನ ಜೊತೆ ಕುದಿಸಿದಾಗ ಬರುವ ಕೊಬ್ಬು ಶೇಖರಿಸಿ ಪುನಃ ಕುದಿಸಿ ಅವರಲ್ಲಿ ನ ನೀರಿನಂಶ ತೆಗೆದ ಮೇಲೆ ಉಳಿಯುವುದೇ ಉಪ್ಪಾಗೆ ತುಪ್ಪ.
ಇದನ್ನು ಕಾಯಿ ಹೊಳಿಗೆ ಜೊತೆ ತಿಂದರೆ ಅದರ ಸ್ವಾದವೇ ಬೇರೆ.
ಇದು ಶುದ್ಧ ಸಸ್ಯ ಮೂಲದ ತುಪ್ಪಾ .
Comments
Post a Comment