Skip to main content

Posts

Showing posts with the label Since 45 days Shimoga District in Green Zone but today 9 corona virus confirmed and admitted to Megan hospital

ಲಾಕ್ ಡೌನ್ ಡೈರಿ 32-45 ದಿನದಿಂದ ಹಸಿರು ವಲಯದಲ್ಲಿದ್ದ ಶಿವಮೊಗ್ಗ ಜಿಲ್ಲೆ ಇವತ್ತು 9 ಜನರಿಗೆ ಕೊರಾನಾ ವೈರಸ್ ದೃಡಪಟ್ಟಿದ್ದರಿಂದ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣ.

ಕೊರಾನಾ ಡೈರಿ -2020               ಲೆಟರ್ ನಂಬರ್- 32            ದಿನಾ೦ಕ: 10 -ಮೇ -2020 #ಹಸಿರು_ವಲಯದ_ಶಿವಮೊಗ್ಗಜಿಲ್ಲೆಯಲ್ಲಿ_9ಜನರಿಗೆ_ಸೊ೦ಕು #ಭಾರತೀಯರು_ತಮ್ಮನ್ನು_ತಾವು_ಆಳಿಕೊಳ್ಳಲು_ಸಮಥ೯ರಲ್ಲ_ವಿನ್ಸ್ಟOಟ_ಚಚಿ೯ಲ್  ಇದನ್ನ ನಾವು ಒಪ್ಪಬೇಕಾಗಿಲ್ಲ ಆದರೆ ವಿನಾಶಕಾರಿ ವೈರಸ್ ಒಂದು ಇಡೀ ವಿಶ್ವವನ್ನೇ ಮಸಣ ಮಾಡುತ್ತಿದ್ದರೂ ಅದನ್ನ ಸುಲಭವಾಗಿ ಸ್ವಯಂ ಶುಚಿತ್ವದಿ೦ದ ನಿಯಂತ್ರಿಸಲು ಸಾಧ್ಯವಿದ್ದರೂ ನಾವು ದುರಂಹಕಾರದಿಂದ ಅಂತರ ಕಾಪಾಡದೆ, ಅನಾವಶ್ಯಕ ತಿರುಗಾಟ, ಎಲ್ಲಿ ಬೇಕೆ೦ದರಲ್ಲಿ ಉಗಿಯುವುದು ಇತ್ಯಾದಿ ಬೇಜವಾಬ್ದಾರಿ ನಡತೆ ಇಂದ ಸುಲಭವಾಗಿ ವೈರಸ್ ಹರಡಲು ಕಾರಣರಾಗುವುದು ನೋಡಿದರೆ ಮೇಲಿನ ಚಚಿ೯ಲ್ ರ ಮಾತು ಸತ್ಯ ಅನ್ನಿಸುತ್ತೆ.    ಸಾಮಾಜಿಕ ಅಂತರ ಕಾಪಾಡಲು ಸಕಾ೯ರ, ರಕ್ಷಣಾ ಇಲಾಖೆ ಆರೋಗ್ಯ ಇಲಾಖೆ ಮುಖಾಂತರ 45 ದಿನದಿಂದ ಸತತವಾಗಿ ಪ್ರಯತ್ನ ಪಡುತ್ತಿದ್ದರು ಅದನ್ನ ಅಪಹಾಸ್ಯ ಎಂಬಂತೆ ಪರಸ್ಪರ ಆತುಕೊಂಡು ತರಕಾರಿ, ಮಾಂಸ ಮತ್ತು ಮದ್ಯ ಖರೀದಿಸುವುದು ನಿರಂತರ ಮಾಡುತ್ತಲೇ ಇದ್ದೇವೆ.    144 ಸೆಕ್ಷನ್ ಇದೆ 4 ಜನಕ್ಕಿOತ ಹೆಚ್ಚು ಜನ ಸೇರಬಾರದೆಂಬ ನಿಯಮ ಯಾರೂ ಪಾಲನೆ ಮಾಡುತ್ತಿಲ್ಲ ಹಳ್ಳಿಗಳಲ್ಲಿ ಅಲ್ಲಲ್ಲಿ ಮದುವೆ ಇತ್ಯಾದಿ ನಡೆಯುತ್ತಲೇ ಇದೆ.   ನನ್ನ ಊರ ಸಮೀಪದ ಹಳ್...