#ನನ್ನ_ಇವತ್ತಿನ_ಬೆಳಿಗ್ಗೆಯ_ಉಂಡೆಕಡಬು_ಪೋಸ್ಟ್ #ಅದಕ್ಕೆ_ಬಂದ_ಪ್ರತಿಕ್ರಿಯೆ #ಕಡುಬು_ಏನು_ಕಡಿಮೆ. #ಎಲ್_ಸಿ_ಸುಮಿತ್ರಾ_ಅವರು_ಬರೆದ #ನನ್ನ_ಅಂಗೈ_ಆಗಲದ_ಆಕಾಶ #ಪುಸ್ತಕದಲ್ಲಿ_ಪ್ರಕಟವಾದ_ಪ್ರಬಂದ. ನಾವು "ಕಡುಬು "ಅಂತ ಹೇಳುತ್ತೇವೆ. ಇದು ಎರಡು ಸಲ ಬೇಯುವುದರಿಂದ ,ಎಣ್ಣೆ ಇತ್ಯಾದಿ ಇಲ್ಲದಿರುವುದರಿಂದ ಮಕ್ಕಳು ಮುದುಕರಿಗೂ ಒಳ್ಳೆಯದು. ಆಕಾರ ಸ್ವಲ್ಪ ಬೇರೆ. ಹೀಗೆ ಉಂಡೆ ಅಲ್ಲ. ನಾನು ಕಡುಬು ಕುರಿತು ಬರೆದ ಪ್ರಬಂಧ #ನನ್ನ_ಅಂಗೈ_ಅಗಲದ_ಆಕಾಶ ಪುಸ್ತಕ ದಲ್ಲಿದೆ. ಹತ್ತು ವರ್ಷಗಳ ಹಿಂದೆ fb ನಲ್ಲಿ ಹಾಕಿದ್ದೆ. ಇಲ್ಲಿ ಲಿಂಕ್ ಹಾಕುವೆ. ನಿವೃತ್ತ ಪ್ರಾಂಶುಪಾಲರು ಸಾಹಿತಿಗಳಾದ ಶ್ರೀಮತಿ ಎಲ್ ಸಿ ಸುಮಿತ್ರರಿಗೆ ಧನ್ಯವಾದ ತಿಳಿಸುತ್ತಾ ಅವರು ಕಳಿಸಿದ ಲೇಖನ ಇಲ್ಲಿ ಓದಿ. #ಕಡಬು_ಏನು_ಕಡಿಮೆ ...ಬೆಳಿಗ್ಗೆ ಏನು ತಿಂಡಿ ಮಾಡುವುದು ಅಂತ ಯೋಚಿಸಿದಾಗ ಆಗಲೆ ಸಾಯಂಕಾಲ. ದೋಸೆ ಅಥವಾ ಇಡ್ಲಿಗೆ ನೆನೆ ಹಾಕಲು ಸಮಯ ಮೀರಿತ್ತು. ಬೆಳಿಗ್ಗೆ ಕಡುಬು ಮಾಡಿದರೆ ಸರಿ ಅಂದುಕೊಂಡೆ. ಇದು ಕರಿಗಡುಬು ಅಲ್ಲ.ಹೂರಣದ ಕಡುಬೂ ಅಲ್ಲ,ಮಲೆನಾಡಿನಲ್ಲಿ ನಾವು ಬೆಳಗಿನ ತಿಂಡಿಗೆ ಮಾಡುವ ಅಕ್ಕಿ ತರಿಯ ಸರಳವಾದ ತಿಂಡಿ. .ಆದರೆ ಮೈಸೂರಿನಲ್ಲಿ ಬಾಲ್ಯ ಕಳೆದ ನನ್ನ ಗಂಡನಿಗೆ ಕಡುಬು ಇಷ್ಟವಿಲ್ಲ. ನಾನು ಪ್ರೈಮರಿ ಶಾಲೆಗೆ ಹೋಗುವ ಕಾಲದಲ್ಲಿ ನಮ್ಮ ಪರಿಸರದಲ್ಲಿ ರೈತರ ಮನೆಗಳಲ್ಲಿ ಕಡುಬು ವಾರದ ಐದು ದಿನ ಮಾಮೂಲಿ. ಶನಿವಾರ ಮಾತ್ರ ...