Skip to main content

Posts

Showing posts with the label KELADI king Hiriya Venkatappa Nayak name should be remember by citizens of sagar

ಈ ವಷ೯ ನಡೆಯಲಿರುವ ಕೆಳದಿ ಉತ್ಸವದಲ್ಲಿ ಸಾಗರ ಪಟ್ಟಣ - ಗಣಪತಿ ಕೆರೆ ನಿರ್ಮಿಸಿದ್ದ ಕೆಳದಿ ರಾಜ ಹಿರಿಯ ವೆಂಕಟಪ್ಪ ನಾಯಕರ ಸ್ಮರಿಸುವುದು ಮರೆಯದಿರಲಿ, ಇವರ ಸದಾ ಸ್ಮರಣೆಗಾಗಿ ಸಾಗರದ ಪ್ರಮುಖ ಹೆದ್ದಾರಿಗೆ ಇವರ ನಾಮಕರಣವಾಗಲಿ

#ಕೆಳದಿ_ಉತ್ಸವದಲ್ಲಿ_ಸಾಗರ_ಪಟ್ಟಣ_ಕೆರೆ_ನಿರ್ಮಿಸಿದ_ರಾಜ_ವೆಂಕಟಪ್ಪನಾಯಕರ_ಪುನರ್_ಸ್ಮರಣೆ_ಆಗಲಿ #ಸಾಗರ_ಪಟ್ಟಣದ_ಹೆಸರು_ನಾಲ್ಕು_ಶತಮಾನದ_ಹಿಂದೆ_ಸದಾಶಿವಸಾಗರ #ಈಗಿನ_ಗಣಪತಿಕೆರೆಯೆ_ಸದಾಶಿವಸಾಗರ_ಎಂಬ_ಸರೋವರ. #ಸಾಗರ_ಪಟ್ಟಣ_ನಿರ್ಮಿಸಿದ_ರಾಜ_ಹಿರಿಯವೆಂಕಟಪ್ಪನಾಯಕರ_ಒಂದೂ_ಸ್ಮಾರಕ_ಸಾಗರದಲ್ಲಿ_ಇಲ್ಲ #ಬಿದನೂರು_ನಗರ_ವಾಸಿ_ಸಂಶೋದಕ_ಲೇಖಕ_ಅಂಬ್ರಯ್ಯ_ಮಠ #ಬರೆದ_ಕೆಳದಿ_ಕುಲತಿಲಕ_ಹಿರಿಯ_ವೆಂಕಟಪ್ಪ_ನಾಯಕ_ಐತಿಹಾಸಿಕ_ಕಾದಂಬರಿ_ಅತ್ಯಂತ_ಮಹತ್ವದ್ದು.   ಈ ವರ್ಷ ಸಾಗರ ತಾಲ್ಲೂಕಿನಲ್ಲಿ #ಕೆಳದಿ_ಉತ್ಸವ ವಿಜೃಂಬಣೆಯಲ್ಲಿ ನಡೆಯಲಿದೆ ಇದಕ್ಕಾಗಿ ರಾಜ್ಯ ಸರ್ಕಾರದಿಂದ 50 ಲಕ್ಷ ಅನುದಾನ ದೊರೆಯುವುದಾಗಿ ಶಾಸಕರಾದ #ಹರತಾಳು_ಹಾಲಪ್ಪನವರು_ ಘೋಷಿಸಿದ್ದಾರೆ, ಈ ಸಂದರ್ಭದಲ್ಲಿ ಇಲ್ಲಿ ಉಲ್ಲೇಖಿಸಿರುವ ವಿಷಯಗಳನ್ನು ಸಂಬಂದ ಪಟ್ಟವರು ಗಣನೆಗೆ ತೆಗೆದುಕೊಂಡು ಕೆಳದಿ ಉತ್ಸವ ಅರ್ಥಪೂರ್ಣವಾಗಿ ಮಾಡಬಹುದಾಗಿದೆ.  ಈಗ ಸಾಗರ ಎಂಬ ನಮ್ಮ ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಕೇಂದ್ರ ಸುಮಾರು ನಾಲ್ಕುನೂರು ವರ್ಷದ ಹಿಂದೆ ಕೆಳದಿ ರಾಜ ಹಿರಿಯ ವೆಂಕಟಪ್ಪ ನಾಯಕರು ತಮ್ಮ ಅಜ್ಜ ಸದಾಶಿವ ನಾಯಕರ (ಆಳಿದ ಕಾಲ ಮಾನ 1530 - 1566) ಸ್ಮರಣಾರ್ಥ ಅವರ ಹೆಸರಲ್ಲಿ ಅಂದರೆ #ಸದಾಶಿವಸಾಗರ ಎಂದು ನಾಮಕರಣ ಮಾಡಿ ನಿರ್ಮಿಸಿದ ಆ ಕಾಲದ ಸುಂದರ ಪಟ್ಟಣ ಆಗಿತ್ತು.   ಇದೇ ಹೆಸರಿನ ಸುಂದರ ಸರೋವರ ಗಣಪತಿ ದೇವಸ್ಥಾನದ ಕೆಳಗೆ ನಿಮಿ೯ಸಿದ...