ಈ ವಷ೯ ನಡೆಯಲಿರುವ ಕೆಳದಿ ಉತ್ಸವದಲ್ಲಿ ಸಾಗರ ಪಟ್ಟಣ - ಗಣಪತಿ ಕೆರೆ ನಿರ್ಮಿಸಿದ್ದ ಕೆಳದಿ ರಾಜ ಹಿರಿಯ ವೆಂಕಟಪ್ಪ ನಾಯಕರ ಸ್ಮರಿಸುವುದು ಮರೆಯದಿರಲಿ, ಇವರ ಸದಾ ಸ್ಮರಣೆಗಾಗಿ ಸಾಗರದ ಪ್ರಮುಖ ಹೆದ್ದಾರಿಗೆ ಇವರ ನಾಮಕರಣವಾಗಲಿ
#ಸಾಗರ_ಪಟ್ಟಣದ_ಹೆಸರು_ನಾಲ್ಕು_ಶತಮಾನದ_ಹಿಂದೆ_ಸದಾಶಿವಸಾಗರ
#ಈಗಿನ_ಗಣಪತಿಕೆರೆಯೆ_ಸದಾಶಿವಸಾಗರ_ಎಂಬ_ಸರೋವರ.
#ಸಾಗರ_ಪಟ್ಟಣ_ನಿರ್ಮಿಸಿದ_ರಾಜ_ಹಿರಿಯವೆಂಕಟಪ್ಪನಾಯಕರ_ಒಂದೂ_ಸ್ಮಾರಕ_ಸಾಗರದಲ್ಲಿ_ಇಲ್ಲ
#ಬಿದನೂರು_ನಗರ_ವಾಸಿ_ಸಂಶೋದಕ_ಲೇಖಕ_ಅಂಬ್ರಯ್ಯ_ಮಠ
#ಬರೆದ_ಕೆಳದಿ_ಕುಲತಿಲಕ_ಹಿರಿಯ_ವೆಂಕಟಪ್ಪ_ನಾಯಕ_ಐತಿಹಾಸಿಕ_ಕಾದಂಬರಿ_ಅತ್ಯಂತ_ಮಹತ್ವದ್ದು.
ಈ ವರ್ಷ ಸಾಗರ ತಾಲ್ಲೂಕಿನಲ್ಲಿ #ಕೆಳದಿ_ಉತ್ಸವ ವಿಜೃಂಬಣೆಯಲ್ಲಿ ನಡೆಯಲಿದೆ ಇದಕ್ಕಾಗಿ ರಾಜ್ಯ ಸರ್ಕಾರದಿಂದ 50 ಲಕ್ಷ ಅನುದಾನ ದೊರೆಯುವುದಾಗಿ ಶಾಸಕರಾದ #ಹರತಾಳು_ಹಾಲಪ್ಪನವರು_ ಘೋಷಿಸಿದ್ದಾರೆ, ಈ ಸಂದರ್ಭದಲ್ಲಿ ಇಲ್ಲಿ ಉಲ್ಲೇಖಿಸಿರುವ ವಿಷಯಗಳನ್ನು ಸಂಬಂದ ಪಟ್ಟವರು ಗಣನೆಗೆ ತೆಗೆದುಕೊಂಡು ಕೆಳದಿ ಉತ್ಸವ ಅರ್ಥಪೂರ್ಣವಾಗಿ ಮಾಡಬಹುದಾಗಿದೆ.
ಈಗ ಸಾಗರ ಎಂಬ ನಮ್ಮ ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಕೇಂದ್ರ ಸುಮಾರು ನಾಲ್ಕುನೂರು ವರ್ಷದ ಹಿಂದೆ ಕೆಳದಿ ರಾಜ ಹಿರಿಯ ವೆಂಕಟಪ್ಪ ನಾಯಕರು ತಮ್ಮ ಅಜ್ಜ ಸದಾಶಿವ ನಾಯಕರ (ಆಳಿದ ಕಾಲ ಮಾನ 1530 - 1566) ಸ್ಮರಣಾರ್ಥ ಅವರ ಹೆಸರಲ್ಲಿ ಅಂದರೆ #ಸದಾಶಿವಸಾಗರ ಎಂದು ನಾಮಕರಣ ಮಾಡಿ ನಿರ್ಮಿಸಿದ ಆ ಕಾಲದ ಸುಂದರ ಪಟ್ಟಣ ಆಗಿತ್ತು.
ಇದೇ ಹೆಸರಿನ ಸುಂದರ ಸರೋವರ ಗಣಪತಿ ದೇವಸ್ಥಾನದ ಕೆಳಗೆ ನಿಮಿ೯ಸಿದ್ದರು ಕಾಲಾಂತರದಲ್ಲಿ ಈ ಸದಾಶಿವ ಸಾಗರ ಎಂಬ ಸರೋವರ ಗಣಪತಿ ಕೆರೆ ಎಂದಾಗಿದೆ.
ಕೆಳದಿ ರಾಜರಲ್ಲಿ ಹಿರಿಯ ವೆಂಕಟಪ್ಪ ನಾಯಕರು ದೀಘ೯ ಕಾಲದ 43 ವಷ೯ಆಡಳಿತ ಮಾಡಿದವರು(ಆಳಿದ ಕಾಲ ಮಾನ 1586-1629). ಹೆಚ್ಚು ರಾಜ್ಯ ವಿಸ್ತಾರ ಮಾಡಿದ್ದಾರೆ, ಇವತ್ತಿನ ಸಾಗರ ಪಟ್ಟಣ (ಸದಾಶಿವ ಸಾಗರ) ಕಟ್ಟಿದವರು, ಆನಂದಪುರ ಎಂದು ನಾಮಕರಣ, ಆನಂದಪುರಂ ಚಂಪಕ ಸರಸ್ಸು ನಿಮಿ೯ಸಿದ ರಾಜ ಹಿರಿಯ ವೆಂಕಟಪ್ಪ ನಾಯಕರು ಕೆಳದಿ ಇತಿಹಾಸದಲ್ಲಿ ಅಗ್ರಶ್ರೇಯಾಂಕದಲ್ಲಿ ಇದ್ದರೂ ರಾಜ ವೆಂಕಟಪ್ಪ ನಾಯಕರ ಹೆಸರು ಚಿರಸ್ಥಾಯಿ ಏಕೆ ಆಗಲಿಲ್ಲ? ಎಂಬ ಬಗ್ಗೆ ಸಂಶೋದನೆ ಆಗಬೇಕಾಗಿದೆ.
ಈಗಲೂ ಕೆಳದಿ ರಾಜ ಹಿರಿಯ ವೆಂಕಟಪ್ಪ ನಾಯಕರು ಕಟ್ಟಿದ ಸಾಗರ ಪಟ್ಟಣದಲ್ಲಿ ಅವರ ಹೆಸರಿನ ರಸ್ತೆ, ಉದ್ಯಾನವನ ಅಥವ ಅವರ ನೆನಪಿಸುವ ಪ್ರತಿಮೆಯೂ ಇಲ್ಲ.
ಶಿವಮೊಗ್ಗ ಜಿಲ್ಲೆಯಲ್ಲಿ ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕರ ಬಗ್ಗೆ ಹೆಚ್ಚು ಮಾಹಿತಿ ಸಾವ೯ಜನಿಕರಿಗೆ ಬೇಕಾಗಿದೆ ಇಂತಹ ಒಂದು ಉಪಯುಕ್ತ ಕೆಲಸ ಮಾನ್ಯ ಅಂಬ್ರಯ್ಯ ಮಠ #ಕೆಳದಿ_ಕುಲತಿಲಕ_ಹಿರಿಯ_ವೆಂಕಟಪ್ಪನಾಯಕ ಎಂಬ ಐತಿಹಾಸಿಕ ಕಾದಂಬರಿ ಮೂಲಕ ಮಾಡಿದ್ದಾರೆ
ಈ ಪುಸ್ತಕ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಜನ, ಕೆಳದಿ ಇತಿಹಾಸದ ಬಗ್ಗೆ ಆಸಕ್ತಿ ಇರುವವರು ಮತ್ತು ವಿಶೇಷವಾಗಿ ಸಾಗರ ಪಟ್ಟಣಿಗರು ಓದಲೇ ಬೇಕು.
ಸಾಗರ ಪಟ್ಟಣ ಕಟ್ಟಿದ ರಾಜ ವೆಂಕಟಪ್ಪ ನಾಯಕರ ಹೆಸರು ಎಲ್ಲಿಯೂ ಸ್ಮಾರಕವಾಗಿ ಸಾಗರದಲ್ಲೇ ಇಲ್ಲ!! ಇದನ್ನು ನಾಲ್ಕು ಶತಮಾನದ ನಂತರ ವಾದರೂ ಸರಿ ಪಡಿಸಲು ಸಾಗರದ ಜನಪ್ರತಿನಿದಿಗಳು ಮುಂದಾಗಬೇಕು ಅವರಿಗೆ ಸಾಗರದ ಜನತೆ ಕೈ ಜೋಡಿಸಬೇಕು.
ಮುಂದಿನ ದಿನದಲ್ಲಿ ಇತಿಹಾಸ ಸಂಶೋದಕರು, ಶಾಲಾ ಕಾಲೇಜುಗಳಲ್ಲಿ ವೆಂಕಟಪ್ಪ ನಾಯಕರ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಕೆಲಸ ಆಗಬೇಕಾಗಿದೆ.
ಇಟಲಿಯ ಪ್ರವಾಸಿ ಡಲ್ಲೊ ವಿಲ್ಲಾ ಇಕ್ಕೇರಿಯಲ್ಲಿ ವೆಂಕಟಪ್ಪ ನಾಯಕರ ಬೇಟಿ ಮಾಡಿದ ಬಗ್ಗೆ ಬರೆದ ದಾಖಲೆ ಈ ಪುಸ್ತಕದಲ್ಲಿದೆ, ರಾಣಿ ಅಬ್ಬಕ್ಕ, ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ, ಬಿದನೂರಿನ ರಾಣಿ ಅಮ್ಮಿದೇವಮ್ಮ ವೆಂಕಟಪ್ಪ ನಾಯಕರಿಂದ ಸಹಾಯ ಕೇಳಿ ರಾಜ್ಯ ಕಳೆದುಕೊಂಡ ಕಥೆ ಅವರೇ ಪಾತ್ರಗಳಾಗಿ ಈ ಕಾದಂಬರಿಯಲ್ಲಿ ಅಂಬ್ರಯ್ಯ ಮಠರು ಸ್ವಾರಸ್ಯವಾಗಿ ಹೇಳಿಸಿದ್ದಾರೆ.
ಅದೇ ರೀತಿ ಪಟ್ಟದ ರಾಣಿ ಭದ್ರಮ್ಮಾಜಿ, ಚಂಪಕಾ ಮತ್ತು ಶಿವಪ್ಪ ನಾಯಕರಿಂದಲೂ ಇತಿಹಾಸ ನಮಗೆ ಮನನ ಮಾಡುವಂತೆ ಬರೆದಿದ್ದಾರೆ.
ಅನೇಕ ಬರಹ ಕಾದಂಬರಿಗಳನ್ನು ಬರೆದ ಅಂಬ್ರಯ್ಯ ಮಠರು ತಮ್ಮ ಸಂಶೋದನೆಗಾಗಿಯೇ ಕೆಳದಿ ರಾಜರ ಹಾಲಿ ಪಳಯುಳಿಕೆ ಆಗಿರುವ ರಾಜದಾನಿ ಬಿದನೂರು ನಗರದಲ್ಲಿ ನೆಲೆಸಿದ್ದಾರೆ.
Comments
Post a Comment