#ಆನಂದಪುರಂ_ಖಾದರ್_ಬುಡನ್_ಸಾಬರಲ್ಲಿರುವ_ತಾಮ್ರಪತ್ರ
#ಈ_ತಾಮ್ರ_ಪತ್ರದಲ್ಲಿ_ಏನಿದೆ?
#ಈಗ_ಈ_ತಾಮ್ರ_ಪತ್ರ_ಎಲ್ಲಿದೆ?
#ಈ_ತಾಮ್ರ_ಪತ್ರ_ಆನಂದಪುರಂ_ಮಸೀದಿಗೆ_ಕೆಳದಿ_ರಾಜಾಶ್ರಯ_ಇರುವ_ದಾಖಲೆ.
#ರಾಜಾ_ವೆಂಕಟಪ್ಪನಾಯಕರ_ಮೊಮ್ಮೊಗ_ರಾಜ_ವೀರಭದ್ರನಾಯಕರು_ನೀಡಿದ_ಭೂದಾನ
2) ಎಪಿಗ್ರಾಪಿಯ ಕ್ರ.ಸಂ 108.
ಕಾಲ ಮಾನ ಕ್ರಿ.ಶ. 1631 AD
ಆನಂದಪುರಂ ಖಾದರ್ ಬುಡನ್ ಸಾಬರಲ್ಲಿರುವ ತಾಮ್ರಪತ್ರದ ವಿವರ.
ಕೆಳದಿ ರಾಜ ವೆಂಕಟಪ್ಪ ನಾಯಕರ ಪುತ್ರ ಭದ್ರಪ್ಪ ನಾಯಕ, ಭದ್ರಪ್ಪ ನಾಯಕರ ಪುತ್ರ ವೀರಭದ್ರ ನಾಯಕರು ಕ್ರಿ.ಶ. 1631 ರಲ್ಲಿ ಆನಂದಪುರಂನ ಮಸೀದಿಗೆ ದಾನವಾಗಿ 12 ವರಹ ಜಮೀನು ದಾನವಾಗಿ ನೀಡಿದ ಭೂದಾನ ಪತ್ರ ಈ ತಾಮ್ರ ಶಾಸನ.
ವಿಶೇಷ ಅಂದರೆ ಈ ಶಾಸನದಲ್ಲಿ ಈ ಮಸೀದಿ ಕೆಳದಿ ಅರಸರಿಂದ ನಿಮಿ೯ಸಲ್ಪಟ್ಟದ್ದಾಗಿಯೂ ನಮೂದಿಸಿದ್ದಾರೆ ಮತ್ತು ಮಸೀದಿಯ ದಾರ್ಮಿಕ ಆಚರಣೆಗಾಗಿ ಆನಂದಪುರದ ಸೀಮೆಯ ಮಲವ ಗೊಪ್ಪದಲ್ಲಿ 12 ವರಹಾ ಭೂಮಿ ದಾನ ಕೊಟ್ಟಿದ್ದಾರೆ ಇದರಿಂದ ಕೆಳದಿ ಅರಸರು ಅನ್ಯ ದಮ೯ದವರಿಗೂ ಆಶ್ರಯ ನೀಡಿದವರು ಮತ್ತು ಆನಂದಪುರಂ ಮಸೀದಿಗೆ ಕೆಳದಿ ರಾಜಾಶ್ರಯ ಇತ್ತು ಎಂಬುದು ಇದರಿಂದ ತಿಳಿದು ಬರುತ್ತದೆ.
ಈ ತಾಮ್ರ ಶಾಸನ 1902ರಲ್ಲಿ ಕರ್ನಾಟಕ ಎಪಿಗ್ರಾಫಿಯಾ ದಲ್ಲಿ ದಾಖಲಾಗಿದೆ, ಆಗ ಈ ತಾಮ್ರ ಶಾಸನ ಆನಂದಪುರಂ ನ ಖಾದರ್ ಬುಡನ್ ಸಾಬರಲ್ಲಿತ್ತು ಈಗ ಬಾದರ್ ಬುಡನ್ ಸಾಹೇಬರ ಕುಟುಂಬದವರು ಯಾರೂ ಇಲ್ಲ.
ಈ ತಾಮ್ರಪತ್ರ 1968 ರಿಂದ 1988 ರ ವರೆಗೆ ಮಸೀದಿ ಅಧ್ಯಕ್ಷರಾಗಿದ್ದ ಅಬ್ದುಲ್ ಯಹ್ಯಾ ಸಾಹೇಬರ ಸುಪರ್ದಿಯಲ್ಲಿತ್ತು ಅವರ ಕಾಲದಲ್ಲಿ ಸರ್ಕಾರದ ವಕ್ಬ್ ಬೋರ್ಡ್ ಗೆ ಹಸ್ತಾಂತರಿಸಲಾಯಿತು ಈಗ ಅದೆಲ್ಲಿದೆ ಗೊತ್ತಿಲ್ಲ ಅಂತ 1988 ರಿಂದ 1995 ರವರೆಗೆ ಈ ಮಸೀದಿ ಅಧ್ಯಕ್ಷರಾಗಿದ್ದ ಅಬ್ದುಲ್ ವಾಜೀದ್ ಸಾಹೇಬರು ತಿಳಿಸಿದ್ದಾರೆ.
"ಸ್ವಸ್ತಿ ಶ್ರೀ ಜಯಾಬ್ಯುದಯ - ಶಾಲಿವಾಹನ - ಶೆಕ - ವರುಷ - 1554 ನೇಯ ಪ್ರಜೋತಪಟ್ಟಿ - ಸಂವತ್ಸರದ ಕಾರ್ತಿಕ -ಬಹುಳ - ಶ್ರೀಮದ್ - ಎಡವ-ಮುರಾರಿ ಕೋಟೆ - ಕೋಲಾಹಲ ವಿಶುದ್ದ - ವೈದಿಕದ್ವೈತ -ಸಿದ್ದಾಂತ - ಪ್ರತಿಷ್ಟಾಪಕ - ಶಿವ - ಗುರು - ಭಕ್ತಿ-ಪರಾಯಣದ ಕೆಳದಿ- ವೆಂಕಟಪ್ಪನಾಯಕರ ಪುತ್ರರಾದ ಭದ್ರಪ್ಪ ನಾಯಕರ ಪುತ್ರರಾದ ವೀರಭದ್ರ ನಾಯಕರು ಆನಂದಪುರದ ಸೀಮೆ ಮಲವಗೊಪ್ಪದ ತಾವರೆಕೆರೆ ಹೊಂದಿ ಕಟ್ಟಿಸಿದ ಮಸೀದಿಯ ಧರ್ಮಕ್ಕೆ ಕೊಟ್ಟ ತಾಮ್ರ ಶಾಸನದ ಕ್ರಮವೆಂತ ಅಂದರೆ ಆನಂದಪುರದ ಸೀಮೆ ಯಡಹಳ್ಳಿ ಗ್ರಾಮದಲ್ಲಿ .... ಉಭಯ೦ಗೆ 12 ವರಹದ - ಭೂಮಿಯನ್ನು - ಕೊಟ್ಟೆವ್ - ಆಗಿ - ಆ - ಭೂಮಿಗೆ - ಸಲ್ಲುವ - ಸರ್ವ - ಸ್ವಾಮ್ಯವನ್ನು - ಪ್ರಕು-ಮರ್ಯಾದೆಯಲ್ಲಿ ಆಗ ಮಾಡಿಕೊಂಡು ಮಸೀದಿ - ದರ್ಮಕ್ಕೆ - ಕಲಾಮ್ - ಪ್ರತಿಯಲು - ನಡೆಸಿ - ಬಹದಕೆ ಕೊಟ್ಟ ಧರ್ಮ ಸಾದನ " ಎಂದಿದೆ.
ಆದರೆ ವಿಪರ್ಯಾಸವೆಂದರೆ ಸದರಿ ಮಸೀದಿ ಸದರಿ ಜಮೀನು ತನ್ನ ಸುಪರ್ದಿಯಲ್ಲಿ ಉಳಿಸಿಕೊಂಡಿಲ್ಲ.
2). ಎಪಿಗ್ರಾಪಿಯಾ ಕ್ರ ಸಂ .108. ಕಾಲ ಮಾನ ಕ್ರಿ.ಶ. 1631AD.
ಆನಂದಪುರಂ ಖಾದರ್ ಬುಡನ್ ಸಾಬರಲ್ಲಿರುವ ತಾಮ್ರಪತ್ರ
(ಮುಂದಿನ ಭಾಗದಲ್ಲಿ ಆಚಾಪುರ ತೀರ್ಥದ ದೇವಾಲಯದ ಒಳಗಿರುವ ಶಿಲಾ ಶಾಸನದ ಮಾಹಿತಿ)
Comments
Post a Comment