#ಸ್ಕ್ರೂ_ಡ್ರೈವರ್_ಕಾಕ್_ಟೈಲ್
#ಈ_ಹೆಸರು_ಬರಲು_ಕಾರಣ_ಸ್ವಾರಸ್ಯವಾಗಿದೆ.
ಎರೆಡು ಭಾಗ ಕಿತ್ತಳೆ ಹಣ್ಣಿನ ರಸದೊಂದಿಗೆ ಒಂದು ಭಾಗ ವೊಡ್ಕಾ ಮಿಶ್ರಣ ಮಾಡುವ ಕಾಕ್ ಟೈಲ್ ಹೆಸರು ಸ್ಕ್ರೂ ಡ್ರೈವರ್ !?.
ಈ ಸ್ಕ್ರೂ ಡ್ರೈವರ್ ಕಾಕ್ ಟೈಲ್ ಹೆಸರು ಬರಲು ಕಾರಣ ಸ್ವಾರಸ್ಯವಾಗಿದೆ.
ಎರಡನೆ ವಿಶ್ವ ಯುದ್ದ ಸಂದರ್ಭದಲ್ಲಿ ಅಮೆರಿಕನ್ ಯೋದರು ಚೀನಾ ಮತ್ತು ಟರ್ಕಿಯಲ್ಲಿದ್ದಾಗ ನ್ಯೂಟ್ರಲ್ ಸ್ಪಿರಿಟನ್ನು ಆರೆಂಜ್ ಜ್ಯೂಸ್ ಗೆ ಮಿಶ್ರಣ ಮಾಡಿ ಕುಡಿಯಲು ಪ್ರಾರಂಬಿಸಿದ್ದರಿಂದ ಈ ಕಾಕ್ ಟೈಲ್ ಬಳಕೆಗೆ ಬಂತು.
ಅಮೇರಿಕನ್ ಆಯಿಲ್ ಕಂಪನಿ ಕೆಲಸಗಾರರು ಗಲ್ಪ್ ನಲ್ಲಿ ಕೆಲಸದಲ್ಲಿದ್ದಾಗ ವೋಡ್ಕಾ ಮತ್ತು ಆರೆಂಜ್ ಜ್ಯೂಸ್ ಮಿಶ್ರ ಮಾಡಲು ಚಮಚಗಳ ಕೊರತೆ ಇದ್ದಾಗ ತಾವು ಕೆಲಸಕ್ಕೆ ಬಳಸುತ್ತಿದ್ದ ಸ್ಕ್ರೂ ಡ್ರೈವರ್ ನಿಂದಲೇ ಮಿಶ್ರಣ ಮಾಡಲು ಪ್ರಾರಂಬಿಸಿದ್ದರಿಂದ ಈ ಕಾಕ್ ಟೈಲ್ ಗೆ ಸ್ಕ್ರೂ ಡ್ರೈವರ್ ಎಂಬ ಹೆಸರು ಬಂತು ಈ ಹೆಸರಿಂದಲೇ ಇದು ವಿಶ್ವ ವಿಖ್ಯಾತ ಆಲ್ಕೊಹಾಲ್ ಕಾಕ್ ಟೈಲ್ ಆಗಿದೆ.
Comments
Post a Comment