ಆನಂದಪುರಂ ಇತಿಹಾಸ ಭಾಗ-69, ಆನಂದಪುರಂ ರಂಗನಾಥ ಸ್ವಾಮಿ ದೇವಾಲಯದ ಗುರುಡಗಂಭಕ್ಕೆ 515 ವರ್ಷ, ಇದು ಹೊಸಗುಂದ ಸೀಮೆಯಾಳುತ್ತಿದ್ದ ನಾಯಕರು ದೇವರ ಹರಿವಾಣ ಸೇವೆಗಾಗಿ ಎರೆಡು ಊರು ದಾನ ನೀಡಿದ ಶಿಲಾ ಶಾಸನ.
#ಶಿಲಾಶಾಸನದಲ್ಲಿ_ದಾಖಲಾಗಿರುವ_ವಿವರ
#ಆನಂದಪುರಂ_ರಂಗನಾಥದೇವಾಲಯದ_ಗರುಡಗಂಭದಲ್ಲಿ_ಉಲ್ಲೇಖ_ಆಗಿರುವುದು.
#ಈ_ಶಿಲಾಶಾಸನದ_ಪಕ್ಕದಲ್ಲಿ_ಕಾಲಮಾನ_ಮಹತ್ವ_ಮತ್ತು_ಅದರಲ್ಲಿನ_ಉಲ್ಲೇಖ_ಕನ್ನಡದಲ್ಲಿ_ಮಾಹಿತಿ_ಪಲಕ_ಇಡಬೇಕು.
#ಈ_ಶಿಲಾಶಾಸನದ_ಸಂರಕ್ಷಣೆಗೆ_ಹೆಚ್ಚಿನ_ಒತ್ತು_ನೀಡಬೇಕು
1) ಎಪಿಗ್ರಾಪಿಯ ಕ್ರ.ಸಂ. 107,ಕಾಲಮಾನ ಕ್ರಿ.ಶ.1507AD ಆನಂದಪುರಂನ ರಂಗನಾಥ ದೇವಸ್ಥಾನದ ಪ್ರಕಾರದಲ್ಲಿರುವ ಗರುಡ ಗಂಬದ ಕೆಳಗಿನ ಶಿಲಾಶಾಸನ.
ಈ ಗರುಡಗಂಭ 3.5 ಅಡಿ ಎತ್ತರ ಮತ್ತು 2 ಅಡಿ ಅಗಲ ಇದೆ, 18 ಸಾಲಿನಲ್ಲಿ ಅಕ್ಷರಗಳಿದೆ.
ಒಂದು ಕಾಲದಲ್ಲಿ ಶ್ರೀ ರಂಗನಾಥ ದೇವಾಲಯದ ಒಳ ಆವರಣದಲ್ಲಿ ದೇವಾಲಯದ ದ್ವಜ ಸ್ಥಂಭದ ಕೆಳಬಾಗದಲ್ಲಿದ್ದ ಗರುಡಗಂಭದಲ್ಲಿ ಗರುಡನ ಶಿಲ್ಪವು ಆಕರ್ಷವಾಗಿದ್ದು ಒಂದು ಕೈಯಲ್ಲಿ ಸರ್ಪವಿದೆ.
ಕಾಲ ಕಾಲಕ್ಕೆ ದೇವಾಲಯದ ನವೀಕರಣ ಕಾಲದಲ್ಲಿ ಸ್ಥಳ ಬದಲಾಗಿ ಈಗ ದೇವಸ್ಥಾನದ ಮು೦ಬಾಗದ ಗೋಡೆಯ ಎಡಭಾಗದಲ್ಲಿ ಸುರಕ್ಷಿತವಾಗಿ ರಕ್ಷಿಸಿಡಲಾಗಿದೆ.
ಕ್ರಿ.ಶ.1507 AD ಕಾಲ ಮಾನದ ಈ ಗರುಡ ಸ್ಥಂಭಕ್ಕೆ ಈಗ 515 ವರ್ಷಗಳಾಗಿದೆ.
515 ವರ್ಷಗಳ ಹಿಂದಿನ ಅಂದರೆ 5 ಶತಮಾನದ ಈ ಶಿಲಾ ಶಾಸನ ತುಂಬಾ ಮಹತ್ವದ್ದಾಗಿದೆ ಮತ್ತು ಮುಂದಿನ ದಿನದಲ್ಲಿ ಈ ಶಿಲಾ ಶಾಸನ ಅತ್ಯಂತ ಜಾಗೃತಿಯಿಂದ ಮುಂದಿನ ತಲೆಮಾರಿಗಾಗಿ ಸಂರಕ್ಷಿಸಬೇಕಾಗಿದೆ.
ಈ ಶಿಲಾ ಶಾಸನದ ಮಹತ್ವ, ಕಾಲ ಮಾನ ಮತ್ತು ಇದರಲ್ಲಿ ಉಲ್ಲೇಖಿಸಿರುವ ವಿಷಯ ಕನ್ನಡ ಬಾಷೆಯಲ್ಲಿ ಬರೆದ ಮಾಹಿತಿ ಪಲಕ ಈ ಶಿಲಾ ಶಾಸನದ ಪಕ್ಕದಲ್ಲಿ ಸ್ಥಾಪಿಸಿದರೆ ದೇವಾಲಯಕ್ಕೆ ಬರುವ ಭಕ್ತರಿಗೆ ಶಿಲಾಶಾಸನದ ಮಾಹಿತಿ ದೊರೆಯುತ್ತದೆ.
ಇದರಲ್ಲಿ ಕಾಲಮಾನ ದಾಖಲೆ ಉಲ್ಲೇಖದ ಮತ್ತು ದಾನ ನೀಡುವವರ ಬಗ್ಗೆ ಸ್ಥಳದ ಬಗ್ಗೆಯ ಮಾಹಿತಿಯ ಜೊತೆ ಉಲ್ಲೇಖಿಸಿರುವ ವಿಚಾರ
" ಬೆಯಕೊಪ್ಪ ಕಲ್ಲಪ್ಪ ನಾಯಕನ ಪುತ್ರ ಚಿಕ್ಕಣ್ಣ ನಾಯಕ ತನ್ನ ಮನೆ ವರ ದೇವರಾದ ಸ್ವಸ್ತಿಶ್ರೀ ಜಯಂತಿಪುರ ವರದಿಶ್ವರ ಶ್ರೀ ಮಹಾಲಕ್ಷ್ಮಿ - ಕುಚಕುಂಕುಮ ಲೋಲಾ .. ಕೋಯಿಪುರದ ತಿರುವೆಂಗಲನಾಥನ ಹರಿವಾಣ ನೈವೇದ್ಯಕ್ಕೆ ತಮ್ಮ ನಾಯಕ ತನಕೆ ಸಲ್ಲುವ ತಮ್ಮ ಹೊಸಗುಂದ ಸೀಮೆಯೊಳಗಿನ ಕೋಟಿ ಶೆಟ್ಟಿ ಕೊಪ್ಪ ..... ನೋಗೂಟಪುರವನ್ನು.. ಕಾಲ ಕಾಲಮ್ ಪ್ರತಿ ಸ್ವಾಮಿಯ ಅಂಗ - ರಂಗ-ಬೋಗಾಂಗ ನೈವೇಧ್ಯಕ್ಕೆ ಸಲಿಸಿ ಸ್ವಾಮಿಯ .... ವನು ಕೊಂಡು ಕೃತಾರ್ಥರ ಆಹುದೆಂದು ಬಿಟ್ಟ ಪುರ"
ಎಂದಿದೆ.
ಈ ಎರೆಡು ಗ್ರಾಮಗಳನ್ನು ದಾನವಾಗಿ ಹೊಸಗುಂದ ಸೀಮೆಯನ್ನು ಆಳುತ್ತಿದ್ದ ನಾಯಕರು ನೀಡಿದ ದಾನಪತ್ರವೇ ಈ ಶಿಲಾ ಶಾಸನ.
ಈ ಶಿಲಾಶಾಸನದಲ್ಲಿ ರಂಗನಾಥ ದೇವರ ಹೆಸರು ಆ ಕಾಲದಲ್ಲಿ ತಿರುವೆಂಗಲನಾಥ ಎಂದು ಈ ದೇವಾಲಯದ ಪ್ರದೇಶದ ಹೆಸರು ಕೊಯಿಪುರ ಅಂತಿದೆ.
ಹೊಸಗುಂದ ಸೀಮೆಯ ಆಳುತ್ತಿದ್ದ ನಾಯಕರು ದಾನವಾಗಿ ನೀಡಿದ ಕೋಟಿ ಶೆಟ್ಟಿ ಕೊಪ್ಪ ಮತ್ತು ನೋಗೂಟಪುರ ಯಾವುದೆಂಬುದು ಮುಂದಿನ ದಿನದಲ್ಲಿ ಸಂಶೋದಿಸಬೇಕು.
(ಮುಂದಿನ ಭಾಗ ಆನಂದಪುರಂ ಇತಿಹಾಸ 70ರಲ್ಲಿ ಆನಂದಪುರಂ ಖಾದರ್ ಬುಡನ್ ಸಾಬರಲ್ಲಿರುವ ತಾಮ್ರಪತ್ರದಲ್ಲಿ ಏನಿದೆ?)
Comments
Post a Comment