ಪ್ರಕಾಶ್ ಟ್ರಾವೆಲ್ಸ್ ಮಲೆನಾಡಿನಲ್ಲಿ ನೂರಾರು ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾವಿರಾರು ಜನರ ಊಟದ ತಟ್ಟೆಗೆ ಆದಾರವಾಗಿದ್ದ ಸಂಸ್ಥೆ, ಈ ಸಂಸ್ಥೆ ಈ ಮಟ್ಟಕ್ಕೆ ಕಟ್ಟಿದ್ದ ಕನಸುಗಾರ ಪ್ರಕಾಶ್ ದುಡುಕಿನಿಂದ ದುರಂತಕ್ಕೆ ಹೋಗದಿರಲಿ.
#ಕೊರಾನಾ_ಸೃಷ್ಟಿಸಿದ_ಆರ್ಥಿಕ_ಸಂಕಷ್ಟದಿಂದ_ಆಗುತ್ತಿರುವ_ಆತ್ಮಹತ್ಯೆಗಳು_ಲೆಕ್ಕವಿಲ್ಲದಷ್ಟು .
#ಇಪ್ಪತ್ತೆರೆಡು_ವರ್ಷದಲ್ಲಿ_ಸಾಗರ_ಕೇಂದ್ರವಾಗಿ_ಸಾರಿಗೆ_ಕ್ಷೇತ್ರದಲ್ಲಿ_ಎತ್ತರೆತ್ತರಕ್ಕೆ_ಏರಿದ್ದ_ಪ್ರಕಾಶ್_ಟ್ರಾವೆಲ್ಸ್
#ನೂರಾರು_ಜನರಿಗೆ_ಉದ್ಯೋಗ_ನೀಡಿದ_ಉದ್ಯಮಿ
#ಶುಕ್ರವಾರದಿಂದ_ನಾಪತ್ತೆ!?
2001 ರಿಂದ ಸಾಗರ ಮೂಲ ಕೇಂದ್ರವಾಗಿ ಪ್ರಾರಂಭವಾದ ಪ್ರಕಾಶ್ ಟ್ರಾವೆಲ್ಸ್ ಸಾರ್ವಜನಿಕ ಸಂಪರ್ಕ ಉದ್ಯಮದಲ್ಲಿ ಅಚ್ಚರಿಗೆ ಕಾರಣ ಆಗಿತ್ತು.
ಪ್ರಾರಂಭದಲ್ಲಿ ಪ್ರಕಾಶ್ ಮತ್ತು ಗಂಗರಾಜು ಸಹೋದರರು ಹಾಸನದಿಂದ ಉದ್ಯೋಗ ಹುಡುಕಿ ಬಂದ ಉತ್ಸಾಹಿ ಯುವಕ ಸಹೋದರರ ಜೊತೆ ಅವರ ಸೋದರ ಸಂಬಂದಿ ಅವರ ವಯೋಮಾನದವರೇ ಆದ ಅಣ್ಣಪ್ಪ ಕೂಡ ಸಾಥಿ ಅಗುತ್ತಾರೆ.
ಸಾಗರ -ಸೊರಬ-ಚಿಕ್ಕೆರೂರು ಮಾರ್ಗದ ಗುರುರೇಣುಕಾ ಬಸ್ ನಿಂದ ಪ್ರಾರಂಭ ಆದ ಇವರ ಜೀವನ ಪ್ರಯಾಣ 2020 - ಮಾರ್ಚ್ -24ರ ಸಂಜೆ ಪ್ರದಾನ ಮಂತ್ರಿಗಳು ದೇಶದಾದ್ಯಂತ ಪ್ರಾರಂಬಿಸಿದ ಲಾಕ್ ಡೌನ್ ವರೆಗೆ ವಿಜೃಂಬಿಸಿತು ಅರ್ದ ಶತಕದಷ್ಟು ಬಸ್ ಗಳು ಅದರಲ್ಲಿ ನೂರಾರು ಸಿಬ್ಬಂದಿ, ಪ್ರತಿ ಊರಲ್ಲಿ ಏಜೆಂಟರರು, ಪ್ರತಿನಿತ್ಯ ಸಾವಿರಾರು ಲೀಟರ್ ಡಿಸೇಲ್ ಖರೀದಿ ಇದರ ಮಧ್ಯೆ ಸಿದ್ದಾಪುರ - ಬೆಂಗಳೂರು, ಸೊರಬ-ಬೆಂಗಳೂರು, ಸಾಗರ - ಬೆಂಗಳೂರು ಹೈಟಿಕ್ ಸ್ಲೀಪರ್ ಬಸ್ ಗಳು, ಮದುವೆ - ಪ್ರವಾಸಕ್ಕಾಗಿ ಪ್ರತ್ಯೇಕ ಬಸ್ ಗಳು ಈ ರೀತಿ #ಪ್ರಕಾಶ್_ಟ್ರಾವೆಲ್ಸ್ ಪ್ರಭುದ್ದ ಮಾನಕ್ಕೆ ಬಂದಿತ್ತು.
ಮೂವರು ಯುವಕರ ಶ್ರಮ ಮಲೆನಾಡಿನ ಪ್ರದೇಶದಲ್ಲಿ ನೂರಾರು ವಾಹನ ಚಾಲಕರ, ನಿರ್ವಾಕರ, ಕ್ಲೀನರ್ ಗಳ, ಏಜೆಂಟರ, ಮೆಕ್ಯಾನಿಕರ್, ಟೈರ್, ಬಿಡಿ ಭಾಗ ಮಾರಾಟಗಾರರ ಮತ್ತು ಇಂದನ ಪೂರೈಕೆದಾರರಿಗೆ ಉದ್ಯೋಗ ವ್ಯವಹಾರಗಳನ್ನು ಸೃಷ್ಟಿಸಿತ್ತು.
ಕೊರಾನಾದ ಕರಿನೆರಳು ನಿಂತ ಕೊಟ್ಯಾಂತರ ಬೆಲೆಯ ಬಸ್ ಗಳನ್ನು ತುಕ್ಕು ಹಿಡಿಸಿತು ನಂತರ ಗುಜರಿಗೆ ಮಾರುವ೦ತ ಪರಿಸ್ಥಿತಿ ತಂದಿತು, ಮೊನ್ನೆ ಈ ರೀತಿ ನಿಂತ ಆರು ಬಸ್ ಗುಜರಿಗೆ ಮಾರಿ ಒಂದು ಬಸ್ಸಿನ ಸಾಲ ತೀರಿಸಿದರಂತೆ!!.
ವ್ಯವಹಾರ ಉತ್ತುಂಗದಲ್ಲಿದ್ದಾಗ ಇವರನ್ನು ಹಾಡಿ ಹೊಗಳಿ ಕೊಟ್ಯಾಂತರ ಲಾಭ ಮಾಡಿಕೊಂಡವರು ಇವರ ಕೆಲ ಸಾವಿರ - ಲಕ್ಷ ಬಾಕಿಗೆ ಇವರನ್ನು ಪೀಡಿಸಿದ್ದಾರೆ, ಜೀವ ಹಿಂಡಿದ್ದಾರೆ ಇದರಿಂದ ನೊಂದ , ತನ್ನ ಕನಸು ನನಸು ಮಾಡಿದ್ದ ಹಾಸನದ ಈ ಯುವಕನ ಸಾಹಸದ ಉದ್ದಿಮೆ ತನ್ನ 50 ದಾಟಿದ ವಯೋಮಾನದಲ್ಲಿ ಮಾನಸಿಕವಾಗಿ ತಡೆದುಕೊಳ್ಳುವ ಶಕ್ತಿ ನೀಡಲಿಲ್ಲವಾ?
ಎಸ್.ಎಂ.ಕೃಷ್ಣರ ಅಳಿಯ ಸಿದ್ದಾರ್ಥ ಮಂಗಳೂರಿನ ನೇತ್ರಾವತಿ ನದಿ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಂತೆ ಪ್ರಕಾಶ್ ದುಡುಕಿದರಾ? ಗೊತ್ತಿಲ್ಲ ಶುಕ್ರವಾರ ರಾತ್ರಿಯಿಂದ ಅವರ ಕಾರು ಹೊಸನಗರ ತಾಲ್ಲೂಕಿನ ಶರಾವತಿ ನದಿಯ ಪಟಗುಪ್ಪೆಯ ಸೇತುವೆ ಮದ್ಯದಲ್ಲಿ ನಿಂತಿದೆ ಅದರಲ್ಲಿ ಅವರ ಸೆಲ್ ಫೋನ್, ಚಪ್ಪಲಿ ಮತ್ತು ಕಾರ್ ಕೀ ಇದೆ.
ಕೆಟ್ಟ ಸುದ್ದಿ ಬರದಿರಲಿ, ಉದ್ದಿಮೆದಾರರು ನೂರಾರು ಕುಟುಂಬಕ್ಕೆ ಅನ್ನ ನೀಡಿರುತ್ತಾರೆ ಅವರ ಉದ್ಯಮದಿಂದ ಲಕ್ಷಾಂತರ - ಕೊಟ್ಯಾಂತರ ಲಾಭ ಪಡೆದವರು ಕೆಲವು ಸಾವಿರ ಬಾಕಿಗಾಗಿ ಉದ್ದಿಮೆದಾರರ ಜೀವ ಹಿಂಡುವ ಕೆಲಸದಿಂದ ಇಂತಹ ಘಟನೆಗಳಿಗೆ ಕಾರಣವಾಗುತ್ತಾರೆ.
Comments
Post a Comment