ಹೊಸನಗರದ ಮಾಜಿ ಶಾಸಕ ಸ್ವಾಮಿ ರಾವ್ ರಿಂದ ಸಾಗರ ರೈಲು ನಿಲ್ದಾಣಕ್ಕೆ ಡಾ.ರಾಮ ಮನೋಹರ ಲೋಹಿಯಾ ಹೆಸರು ನಾಮಕರಣಕ್ಕೆ ಅರ್ಜಿ ನೀಡಿ ಎರೆಡು ವರ್ಷ ಆಯಿತು.
ಬಿಜೆಪಿ ಗೆಲುವಿಗೆ ಶ್ರಮಿಸಿದ ಸ್ವಾಮಿ ರಾಯನ್ನ ಕಡೆಗಾಣಿಸಲಾಗಿದೆಯ?#
ಈವರೆಗೆ ಸಾಗರದ ರೈಲು ನಿಲ್ದಾಣಕ್ಕೆ ಡಾ.ರಾಮಮನೋಹರ ಲೋಹಿಯಾ ಎಂದು ಪುನರ್ ನಾಮಕರಣಕ್ಕೆ ಹಲವರು ಒತ್ತಾಯಿಸುತ್ತಿದ್ದರು ನಿನ್ನೆ (8- ಜನವರಿ -2020) ಶಿವಮೊಗ್ಗ ಜಿಲ್ಲೆಯ ಪ್ರಮುಖ ಬಿಜೆಪಿ ಮುಖಂಡ ಹೊಸನಗರದ ಮಾಜಿ ಶಾಸಕರಾದ ಸ್ವಾಮಿ ರಾಯರು ಸಂಸದ ರಾಘವೇ೦ದ್ರರಿಗೆ ಲಿಖಿತ ಮನವಿ ನೀಡಿ ಆಶ್ಚಯ೯ ಉoಟು ಮಾಡಿದ್ದಾರೆ.
ಕಾಗೋಡು ರೈತ ಹೋರಾಟ ಬೆಂಬಲಿಸಿ ಬಂದ ಖ್ಯಾತ ಸಮಾಜವಾದಿ ನಾಯಕ ಅವತ್ತಿನ ಸಂಸತ್ ನಲ್ಲಿ ಪ್ರದಾನಿ ನೆಹರೂರನ್ನು ಸೈದ್ದಾ೦ತಿಕವಾಗಿ ವಿರೋದಿಸುತ್ತಿದ್ದ ಡಾ.ರಾಮಮನೋಹರ ಲೋಹಿಯರನ್ನ ಸಾಗರದಲ್ಲಿನ ರೈಲು ನಿಲ್ದಾಣದಲ್ಲಿ ಬಂದಿಸಿದ್ದು ಜಾಗತಿಕ ಮಟ್ಟದ ಸುದ್ದಿ ಆಗಿತ್ತು ಅದರ ಪರಿಣಾಮವೇ ಮೊದಲ ಸಾವ೯ಜನಿಕ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದು ಬಂದವರು ಸಮಾಜವಾದಿ ಪಕ್ಷದ ಶಾಂತವೇರಿ ಗೋಪಾಲಗೌಡರು ಮುಂದೆ ಅವರ ಶಿಷ್ಯರಾದ ಸ್ವಾಮಿ ರಾವ್, ಕಾಗೋಡು, ಬಂಗಾರಪ್ಪ, ಪಟೇಲರು ರಾಜಕಾರಣದಲ್ಲಿ ಯಶಸ್ವಿಯಾಗಿದ್ದು ಇತಿಹಾಸ ಹಾಗಾಗಿ ಸಾಗರ ಜOಬಗಾರು ಎಂಬ ಸಾಗರ ರೈಲು ನಿಲ್ದಾಣದ ಹಳೆ ಹೆಸರು ಬದಲಿಸಿ ರಾಮ ಮನೋಹರ್ ಲೋಹಿಯ ರೈಲು ನಿಲ್ದಾಣ ಎಂದು ಮರುನಾಮಕರಣಕ್ಕೆ ಒತ್ತಾಯ.
ಆಗಿನ ಉಪ ಪ್ರದಾನಿ ಅಡ್ವಾನಿ, ರಕ್ಷಣಾ ಮಂತ್ರಿ ಜಾಜ್೯ ಪನಾ೯೦ಡೀಸ್, ರೈಲ್ವೆ ಮಂತ್ರಿ ನಿತೀಶ್ ಕುಮಾರ್, ಆಹಾರ ಸಚಿವ ಶ್ರೀನಿವಾಸ್ ಪ್ರಸಾದ್, ರಾಜ್ಯಸಭಾ ಸದಸ್ಯ ಜವರೇ ಗೌಡ, ಮಾಜಿ ಪ್ರಧಾನಿ ದೇವೇಗೌಡ ಹೀಗೆ ಅನೇಕರು ಬೆಂಬಲಿಸಿದ್ದರು.
ಈ ಬಗ್ಗೆ ಶಿವಮೊಗ್ಗದಿಂದ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪರ ನೇತೃತ್ವದಲ್ಲಿ ಸಾಹಿತಿ ಕೊಣ0ದೂರು ವೆಂಕಪ್ಪ ಗೌಡರು, ಮಾಜಿ ವಿದಾನ ಪರಿಷತ್ ಸದಸ್ಯರಾದ ಮಾದಪ್ಪರ ನಾಯಕತ್ವದಲ್ಲಿ ಅನೇಕ ಉತ್ಸಾಹಿ ಜನಪರ ಹೋರಾಟಗಾರರು ಅನೇಕ ಬಾರಿ ದೆಹಲಿ ಚಲೋ ಮಾಡಿದ್ದರು ಆದರೆ ಅಂತಿಮ ಹಂತದಲ್ಲಿ ರೈಲ್ವೆ ಇಲಾಖೆ ಘೋಷಣೆ ಮಾಡುವುದು ವಿಳOಬಗೊಳಿಸಿದೆ ಕಾರಣ ಸಮಾಜವಾದಿ ಲೋಹಿಯ ಹೆಸರು ಬೇಡ ಕೆಳದಿ ರಾಣಿ ಚೆನ್ನಮ್ಮ ಹೆಸರಿಡಿ ಎಂದು ಅಧಿಕಾರ ರೂಡ ಜನಪ್ರತಿನಿಧಿಗಳ ಹೊಸವರಸೆ ಪ್ರಾರ೦ಬಿಸಿದ್ದಾರೆ.
ಜಿಲ್ಲೆಯಲ್ಲಿ ಬಿಜೆಪಿಗೆ ಸೊರಬ / ಸಾಗರ / ತೀಥ೯ಹಳ್ಳಿಯಲ್ಲಿ ಸಂಪ್ರದಾಯಿಕ ಕಾಂಗ್ರೇಸ್ ಬೆಂಬಲಿತ ಈಡಿಗ ಸಮಾಜದ ಮತ ಸಿಗುವಂತೆ ಮಾಡಿರುವುದು ಸ್ವಾಮಿ ರಾವ್ ಶ್ರಮ ಆದರೆ ಅವರ ಶ್ರಮಕ್ಕೆ ಅವರಿಗೆ ಪಕ್ಷ ಸೂಕ್ತ ಸ್ಥಾನಮಾನ ಈವರೆಗೆ ನೀಡಿಲ್ಲ, ಅವರನ್ನ ವಿಧಾನ ಪರಿಷತ್ ಗೆ ಅಥವ ಯಾವುದಾದರೂ ನಿಗಮಕ್ಕೆ ಅಧ್ಯಕ್ಷರನ್ನಾಗಿಸ ಬಹುದಿತ್ತು.
ಹಾಗಾಗಿ ಜಿಲ್ಲೆಯ ಕಾಂಗ್ರೇಸ್ ಮತ್ತು ಜೆಡಿಎಸ್ ಮುಖಂಡರು ಸ್ವಾಮಿರಾವ್ ಗೆ ಬಿಜೆಪಿ ಮೂಲೆಗುಂಪು ಮಾಡಿದೆ ಅಂತ ಹೇಳುತ್ತಿದೆ.
ಏನೇ ಇರಲಿ ಸಂಸದರು ಇವರ ಮನವಿ ಪುರಸ್ಕರಿಸುತ್ತಾರಾ? ನಿರಾಕರಿಸುತ್ತಾರ? ಕಾದು ನೋಡೋಣ.
Comments
Post a Comment