#ಆನಂದಪುರಂ_ಸುತ್ತಮುತ್ತಲಿನಲ್ಲಿರುವ_ಶಿಲಾಶಾಸನ_ತಾಮ್ರಪತ್ರ
#ಸ್ಥಳಿಯ_ಇತಿಹಾಸಕ್ತರು_ಶಾಲಾ_ವಿದ್ಯಾರ್ಥಿಗಳು_ಗ್ರಾಮಪಂಚಾಯಿತಿಗಳು_ಸಂರಕ್ಷಿಸ_ಬಹುದಾದದ್ದು.
#ದಾಖಲಾಗದ_ಅನೇಕ_ಶಾಸನಗಳನ್ನು_ಗುರುತಿಸ_ಬೇಕಾಗಿದೆ.
#ಆನಂದಪುರಂ_ಇತಿಹಾಸ_ಹತ್ತನೇ_ಶತಮಾನದಿಂದ_ಶಿಲಾಶಾಸನಗಳಲ್ಲಿ_ದಾಖಲಾಗಿದೆ.
#ಬೆಂಜಮಿನ್_ಲೆವಿಸ್_ರೈಸ್_1902ರಲ್ಲಿ_ಪ್ರಕಟಿಸಿದ_ಎಪಿಗ್ರಾಪಿಯ_ಕರ್ನಾಟಕದಲ್ಲಿ_ಪ್ರಕಟವಾಗಿರುವ_ಶಾಸನಗಳು
#36ಶಿಲಾ_ಶಾಸನಗಳು_ಮತ್ತು_2_ತಾಮ್ರಪತ್ರಗಳು_ಯಾವವು?
#ಇವುಗಳ_ಸಂರಕ್ಷಣೆ_ಮತ್ತು_ಸಂಶೋದನೆ_ಆಗಬೇಕು.
#ಇದರಲ್ಲಿ_ದಾಖಲಾಗದ_ಇನ್ನೂ_ಅನೇಕ_ಶಾಸನಗಳು_ಇದೆ.
ಶಿಲಾ ಶಾಸನಗಳು ಮತ್ತು ತಾಮ್ರಪತ್ರಗಳು ಅಂದರೆ ಅದು ಲಿಖಿತ ರಾಜಾಜ್ಞೆ, ದಾನ ದತ್ತಿ ನೀಡಿದಾಗ ಇಂತಹ ರಾಜಾಜ್ಞೆ ಶಿಲೆಯಲ್ಲಿ ಕೆತ್ತಿ ಸಾವ೯ಜನಿಕರ ಮಾಹಿತಿಗಾಗಿ ಮುಖ್ಯ ಸ್ಥಳದಲ್ಲಿ ಭೂಮಿಯಲ್ಲಿ ನೆಡುತ್ತಿದ್ದರು.
ಖಾಸಾಗಿಯಾಗಿ ನೀಡುತ್ತಿದ್ದ ದಾನವನ್ನು ತಾಮ್ರ ಪತ್ರದಲ್ಲಿ ಬರೆಸಿ ಕೊಡುವ ಪದ್ದತಿ ರಾಜರುಗಳದ್ದು.
ಸಾವಿರಾರು ವರ್ಷದ ಇತಿಹಾಸದ ಕಥೆ ಹೇಳುವ ಈ ಕಲ್ಲುಗಳು ಮಾಹಿತಿಯ ಕೊರತೆಯಿಂದಲೋ ಅಥವ ನಮ್ಮ ಉದಾಸೀನದಿಂದಲೋ ಕಣ್ಮರೆ ಆಗುತ್ತಿದೆ ಹಾಳಾಗುತ್ತಿದೆ.
#ಆನಂದಪುರಂ_ಸುತ್ತ_ಮುತ್ತಲಿನ_ಶಿಲಾಶಾಸನಗಳು
1894-1905 ರಲ್ಲಿ ಮೈಸೂರು ಅರ್ಕಾಲಾಚಿಕಲ್ ಡಿಪಾರ್ಟ್ಮೆಂಟ್ ನಿರ್ದೇಶಕರಾಗಿದ್ದಾಗ ಪ್ರಕಟ ಮಾಡಿದ 12 ಸಂಪುಟಗಳ ಎಪಿಗ್ರಾಪಿಯ ಕರ್ನಾಟಕದಲ್ಲಿ ಆನಂದಪುರಂ ಸುತ್ತಲಿನ 36 ಶಿಲಾ ಶಾಸನಗಳು ಮತ್ತು 2 ತಾಮ್ರ ಶಾಸನಗಳು ದಾಖಲಾಗಿದೆ.
ಅವುಗಳು ಈ ರೀತಿ ಕ್ರಮವಾಗಿದೆ
1) ಎಪಿಗ್ರಾಪಿಯ ಕ್ರ.ಸಂ. 107,ಕಾಲಮಾನ ಕ್ರಿ.ಶ.1507AD ಆನಂದಪುರಂನ ರಂಗನಾಥ ದೇವಸ್ಥಾನದ ಪ್ರಕಾರದಲ್ಲಿರುವ ಗರುಡ ಗಂಬದ ಕೆಳಗಿನ ಶಿಲಾಶಾಸನ.
2). ಎಪಿಗ್ರಾಪಿಯಾ ಕ್ರ ಸಂ .108. ಕಾಲ ಮಾನ ಕ್ರಿ.ಶ. 1631AD.
ಆನಂದಪುರಂ ಖಾದರ್ ಬುಡನ್ ಸಾಬರಲ್ಲಿರುವ ತಾಮ್ರಪತ್ರ
3). ಎಪಿಗ್ರಾಪಿಯ ಕ್ರ.ಸ. 109.
ಕಾಲ ಮಾನ ಕ್ರಿ.ಶ. 1079AD.
4) . ಎಪಿಗ್ರಾಪಿಯ ಕ್ರ.ಸ. 109.
ಕಾಲ ಮಾನ ಕ್ರಿ.ಶ. 1042AD.
5) . ಎಪಿಗ್ರಾಫಿಯ ಕ್ರ.ಸಂ. 110
ಕಾಲ ಮಾನ ಕ್ರಿ.ಶ.1292AD.
ಚೆನ್ನಶೆಟ್ಟಿಕೊಪ್ಪದ ಕೆರೆ ಬಳಿ ಇರುವ ವೀರಕಲ್ಲು.
6) . ಎಪಿಗ್ರಾಪಿಯ ಕ್ರ.ಸಂ.111
ಕಾಲ ಮಾನ- ಕ್ರಿ.ಶ.1712AD.
ಹೊಸೂರು ಗ್ರಾಮದ ಹಳೆಪೈಕದವರ ಮನೆ ಹಿಂದಿನ ಶಿಲಾಶಾಸನ.
7) . ಎಪಿಗ್ರಾಫಿಯ ಕ್ರ.ಸಂ. 112
ಕಾಲಮಾನ ಕ್ರಿ.ಶ.1165AD.
ಹೊಸೂರು ಮಜರೆ ಬಸವ ನೆಲ್ಲೂರು ಈಶ್ವರ ದೇವಾಲಯದ ಎದುರು ನೆಟ್ಟಿರುವ 1ನೇ ವೀರ ಕಲ್ಲು.
8). ಎಫಿಗ್ರಾಪಿಯ ಕ್ರ.ಸಂ. 113.
ಕಾಲಮಾನ ಕ್ರಿ.ಶ.1165AD.
ಇದೇ ಸ್ಥಳದಲ್ಲಿ 2ನೇ ವೀರಕಲ್ಲು.
9). ಎಪಿಗ್ರಾಫಿಯ ಕ್ರ.ಸಂ. 114
ಕಾಲಮಾನ ಕ್ರಿ.ಶ.1166AD.
ಇದೇ ಸ್ಥಳದಲ್ಲಿ 3 ನೇ ವೀರ ಕಲ್ಲು.
10). ಎಪಿಗ್ರಾಫಿಯ ಕ್ರ.ಸ. 115,
ಕಾಲ ಮಾನ ಕ್ರಿ.ಶ.
ಆನಂದಪುರಂ ಹೋಬಳಿ ಚಿಪ್ಪಳಿ ಈಶ್ವರ ದೇವಸ್ಥಾನದ ಮುಂದಿನ ವೀರ ಕಲ್ಲು.
11). ಎಪಿಗ್ರಾಪಿಯ ಕ್ರ.ಸಂ. 116
ಕಾಲಮಾನ ಕ್ರಿ.ಶ.1170AD.
ಆನಂದಪುರಂ ಹೋಬಳಿ ತಂಗಳವಾಡಿ ಗ್ರಾಮದ ಬಾಗಿ ದೇವರ ಗುಡ್ಡದ ಬುಡದಲ್ಲಿ ಬಿದಿರ ಕಾಡಿನೊಳಗೆ ಪಾಳು ಬಿದ್ದ ಈಶ್ವರ ದೇವಾಲಯದ ಮಗ್ಗುಲಲ್ಲಿ ಬಿದ್ದಿರುವ ವೀರ ಕಲ್ಲು.
12) . ಎಪಿಗ್ರಾಪಿಯ ಕ್ರ.ಸಂ. 120.
ಕಾಲಮಾನ ಕ್ರಿ.ಶ.1063AD.
ಇದೇ ಗ್ರಾಮದ ಮಾಸ್ತಿಕಲ್ಲಿನಲ್ಲಿರುವ 1ನೇ ವೀರ ಕಲ್ಲು.
13). ಎಪಿಗ್ರಾಫಿಯ ಕ್ರ.ಸಂ. 121.
ಕಾಲಮಾನ ಕ್ರಿ.ಶ.1250AD.
ಇದೇ ಸ್ಥಳದಲ್ಲಿರುವ 2ನೇ ವೀರ ಕಲ್ಲು.
14). ಎಫಿಗ್ರಾಫಿಯಾ ಕ್ರ.ಸಂ. 122 .
ಕಾಲ ಮಾನ ಕ್ರಿ.ಶ.
ಇದೇ ಸ್ಥಳದಲ್ಲಿರುವ 3ನೇ ವೀರ ಕಲ್ಲು.
15). ಎಪಿಗ್ರಾಫಿಯ ಕ್ರ.ಸಂ. 123.
ಕಾಲ ಮಾನ ಕ್ರಿ.ಶ.1606AD.
ಇದೇ ಹೋಬಳಿಯ ಯಡೇಹಳ್ಳಿ ಗ್ರಾಮದ ಮಲ್ಲೇಕೊಪ್ಪದ ಪುಟ್ಟಪ್ಪನಲ್ಲಿರುವ ತಾಮ್ರದ ಶಾಸನ (ಹಾಲಿ ಶಾಂತಬೈಲು ಪಂಚಾಕ್ಷರಯ್ಯರ ಹತ್ತಿರ ಇದೆ).
16). ಎಪಿಗ್ರಾಪಿಯ ಕ್ರ.ಸಂ. 124.
ಕಾಲಮಾನ ಕ್ರಿ.ಶ.1215AD.
ಇದೇ ಹೋಬಳಿಯ ನಾಡ ಮಂಚಾಲೆ ಗ್ರಾಮದ ಸರ್ವೆ ನಂಬರ್ 39 ನೇ ಕಾನಿನಲ್ಲಿರುವ 1ನೇ ವೀರ ಕಲ್ಲು.
17). ಎಪಿಗ್ರಾಫಿಯ ಕ್ರ ಸಂ .125.
ಕಾಲಮಾನ ಕ್ರಿ.ಶ.1216AD.
ಇದೇ ಗ್ರಾಮದಲ್ಲಿರುವ 2 ನೇ ವೀರ ಕಲ್ಲು.
18). ಎಪಿಗ್ರಾಫಿಯ ಕ್ರ.ಸಂ. 126 .
ಕಾಲ ಮಾನ ಕ್ರಿ.ಶ.1226AD.
ಇದೇ ಗ್ರಾಮದಲ್ಲಿರುವ 3ನೇ ವೀರ ಕಲ್ಲು.
19). ಎಪಿಗ್ರಾಫಿಯ ಕ್ರ.ಸಂ. 127 .
ಕಾಲ ಮಾನ ಕ್ರಿ.ಶ.1245AD.
ಇದೇ ಗ್ರಾಮದಲ್ಲಿರುವ 4 ನೇ ವೀರ ಕಲ್ಲು.
20). ಎಪಿಗ್ರಾಫಿಯ ಕ್ರ.ಸಂ. 132 .
ಕಾಲ ಮಾನ ಕ್ರಿ.ಶ.1180AD.
ಇದೇ ಹೋಬಳಿ ಹೊಸಗುಂದದ ಈಶ್ವರ ದೇವಸ್ಥಾನದ ಬಳಿ ನೆಟ್ಟ 1 ನೇ ವೀರ ಕಲ್ಲು.
21). ಎಪಿಗ್ರಾಫಿಯಾ ಕ್ರ.ಸಂ. 133
ಕಾಲಮಾನ ಕ್ರಿ.ಶ.1218AD.
ಇದೇ ಸ್ಥಳದಲ್ಲಿರುವ 2ನೇ ಮತ್ತು 3 ನೇ ವೀರ ಕಲ್ಲು.
22) ಎಪಿಗ್ರಾಫಿಯ ಕ್ರ ಸಂ .135.
ಕಾಲಮಾನ ಕ್ರಿ.ಶ.1300AD.
ಇದೇ ಹೋಬಳಿಯ ಹೊಸಗುಂದ ಕಂಚಿ ಕಾಳಮ್ಮನ ಬನದಲ್ಲಿರುವ ಶಿಲಾ ಶಾಸನ.
23). ಎಫಿಗ್ರಾಪಿಯ ಕ್ರ.ಸಂ. 136.
ಕಾಲ ಮಾನ ಕ್ರಿ.ಶ.1220AD.
ಇದೇ ಗ್ರಾಮದ ಕಾನಿನಲ್ಲಿ ನಟ್ಟಿರುವ 1ನೇ ವೀರ ಕಲ್ಲು.
24). ಎಪಿಗ್ರಾಫಿಯ ಕ್ರ ಸಂ .137.
ಕಾಲ ಮಾನ ಕ್ರಿ.ಶ.1290AD.
ಇದೇ ಸ್ಥಳದಲ್ಲಿರುವ 2ನೇ ವೀರ ಕಲ್ಲು.
25). ಎಫಿಗ್ರಾಪಿಯ ಕ್ರ.ಸಂ 138.
ಕಾಲ ಮಾನ ಕ್ರಿ.ಶ.1269AD.
ಇದೇ ಸ್ಥಳದಲ್ಲಿರುವ ವೀರ ಕಲ್ಲು.
26). ಎಪಿಗ್ರಾಫಿಯ ಕ್ರ.ಸಂ. 139
ಕಾಲ ಮಾನ ಕ್ರಿ.ಶ.1264AD.
ಇದೇ ಸ್ಥಳದ 3 ನೇ ವೀರ ಕಲ್ಲು.
27). ಎಪಿಗ್ರಾಪಿಯ ಕ್ರ.ಸಂ. 140.
ಕಾಲ ಮಾನ ಕ್ರಿ.ಶ. 1265AD.
ಇದೇ ಸ್ಥಳದ 4ನೇ ವೀರ ಕಲ್ಲು.
28). ಎಪಿಗ್ರಾಪಿಯ ಕ್ರ.ಸಂ. 141.
ಕಾಲ ಮಾನ ಕ್ರಿ.ಶ.1229AD.
ಇದೇ ಸ್ಥಳದ 5 ನೇ ವೀರ ಕಲ್ಲು.
29). ಎಫಿಗ್ರಾಫಿಯ ಕ್ರ.ಸಂ. 142 .
ಕಾಲಮಾನ ಕ್ರಿ.ಶ.
ಇದೇ ಕಾನಿನಲ್ಲಿ ಮತ್ತೊಂದು ಸ್ಥಳದಲ್ಲಿ ನೆಟ್ಟ ವೀರ ಕಲ್ಲು.
30). ಎಪಿಗ್ರಾಫಿಯ ಕ್ರ.ಸಂ. 143.
ಕಾಲಮಾನ ಕ್ರಿ.ಶ.
ಇದೇ ಸ್ಥಳದಲ್ಲಿ 2ನೇ ವೀರ ಕಲ್ಲು (ಮೇಲ್ಬಾಗ ಒಡೆದು ಹೋಗಿದೆ).
31). ಎಪಿಗ್ರಾಪಿಯ ಕ್ರ .ಸಂ . 150.
ಕಾಲ ಮಾನ ಕ್ರಿ.ಶ.1255AD.
ಇದೇ ಸ್ಥಳದ 3 ನೇ ವೀರ ಕಲ್ಲು.
32). ಎಪಿಗ್ರಾಫಿಯ ಕ್ರ.ಸಂ.
ಕಾಲಮಾನ ಕ್ರಿ.ಶ.
ಇದೇ ಸ್ಥಳದಲ್ಲಿ 4 ರಿಂದ 10 ವೀರ ಕಲ್ಲಿದೆ.
33). ಎಫಿಗ್ರಾಫಿಯ ಕ್ರ.ಸಂ. 151 .
ಕಾಲ ಮಾನ ಕ್ರಿ.ಶ.
ಆನಂದಪುರಂ ಹೋಬಳಿ ಮಳಲಿ ಗ್ರಾಮದ ವಿನಾಯಕ ದೇವಸ್ಥಾನದ ಮುಂಭಾಗದ ಶಿಲಾಶಾಸನ.
#ಇವಿಷ್ಟು_ಹಾಲಿ_1902ರಲ್ಲಿ_ಮೈಸೂರು_ಆಕಾ೯ಲಾಜಿಕಲ್_ಡಿಪಾರ್ಟ್ಮೆಂಟ್_ಪ್ರಕಟಿಸಿದ_ಎಪಿಗ್ರಾಫಿಯಾ_ಕರ್ನಾಟಕದ (12 ಸಂಪುಟಗಳ) ಲ್ಲಿ ದಾಖಲಾದ ಶಾಸನಗಳು.
ಸ್ಥಳಿಯ ಗ್ರಾಮಸ್ಥರು, ಗ್ರಾಮ ಪಂಚಾಯತ್ ಗಳು ಮತ್ತು ಸಂಘ ಸಂಸ್ಥೆಗಳು ಈ ಶಿಲಾಶಾಸನಗಳನ್ನು ಸಂರಕ್ಷಿಸಬೇಕು ಮತ್ತು ಸ್ಥಳಿಯ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳಿಗೆ ಈ ಶಿಲಾಶಾಸನಗಳ ಮಾಹಿತಿ ನೀಡಿ ಸಂಶೋಧನೆಗೆ ಪ್ರೋತ್ಸಾಹಿಸಬೇಕು.
(ಮುಂದಿನ ಭಾಗದಲ್ಲಿ ಈ ಶಿಲಾಶಾಸನ ಮತ್ತು ತಾಮ್ರ ಶಾಸನದಲ್ಲಿ ಏನಿದೆ?)
Comments
Post a Comment