ನಮ್ಮ ಜಿಲ್ಲೆಯ ಹೆಮ್ಮೆಯ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಸೋತಾಗ, ಗೆದ್ದಾಗ ಮತ್ತು ಮಂತ್ರಿ ಆದಾಗಲೂ ಬದಲಾಗದ ಜನಾನುರಾಗಿ ನಡತೆ.
#ಕೋಟಾದ_ಕೊರಗರ_ಮೇಲಿನ_ಪೋಲಿಸ್_ದೌಜ೯ನ್ಯ
#ಅನಾಥ_ಆಶ್ರಮ_ನಡೆಸುವ_ಸ್ನೇಕ್_ಪ್ರಭಾಕರ್_ಅನುಭವ_ಏನು?
ನಮ್ಮ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರರಿಗೆ ಬೊಮ್ಮಾಯಿ ಸರ್ಕಾರದಲ್ಲಿ ಗೃಹ ಸಚಿವರ ಸ್ಥಾನಮಾನ ದೊರಕಿದೆ, ಇದು ಶಕ್ತಿಶಾಲಿ ಖಾತೆ ಮತ್ತು ತಂತಿ ಮೇಲಿನ ನಡೆ ಕೂಡ.
ಪ್ರಾರಂಭದಲ್ಲಿ ಮೈಸೂರಿನ ಅತ್ಯಾಚಾರದ ಘಟನೆಗೆ ಗೃಹ ಸಚಿವರ ಹೇಳಿಕೆಯನ್ನು ದೊಡ್ಡ ರೀತಿಯಲ್ಲಿ ಮಾದ್ಯಮಗಳಲ್ಲಿ ವಿರೋದ ವ್ಯಕ್ತ ಆಯಿತು.
ಇವರು ಶಾಸಕರಾಗಿದ್ದಾಗ ಹುಬ್ಬಳ್ಳಿ ಜೈಲಿನಿಂದ ರಿಲೀಸ್ ಆರ್ಡರ್ ಒಯ್ದು ತೀರ್ಥಹಳ್ಳಿಯ ಚಳವಳಿಗಾರರನ್ನು ಬಿಡಿಸಿಕೊಂಡು ಬರಲು ಹೋದಾಗ ಜೈಲರ್ ಲಂಚ ಶಾಸಕರಿಂದ ಕಕ್ಕಿಸಿದ ಉದಾಹರಣೆ ಗೃಹ ಸಚಿವರಾದಾಗ ನೆನಪು ಮಾಡಿಕೊಂಡಾಗ ಮಾದ್ಯಮದಲ್ಲಿ ಗೇಲಿ ಮಾಡಿದರು.
ಈ ಎರೆಡು ಘಟನೆ ಆರಗ ಜ್ಞಾನೇಂದ್ರ ಗೃಹ ಸಚಿವರಾದ ಮೇಲೆ ಬದಲಾದರೇನೋ? ಎಂಬ ಅನುಮಾನ ಮತ್ತು ಗೃಹ ಸಚಿವರ ಸ್ಥಾನ ನಿಭಾಯಿಸಲು ಅಸಾಧ್ಯ ಎಂಬಂತ ಮಾತುಗಳು ಅವರದೇ ಪಕ್ಷದವರ ಹೇಳಿಕೆಗಳಲ್ಲಿ ವ್ಯಕ್ತವಾಗಿತ್ತು.
ಅತ್ಯಂತ ಬಡತನದಿಂದ ಈ ಮಟ್ಟಕ್ಕೆ ಏರಿದ್ದರೂ ಉದ್ದೇಶ ಪೂರ್ವಕವಾಗಿ ಇವರದೇ ಸರ್ಕಾರ ಬಂದರೂ ಪ್ರತಿ ಬಾರಿ ಏನಾದರು ನೆಪ ಮುಂದೊಡ್ಡಿ ಇವರನ್ನು ಮಂತ್ರಿ ಸ್ಥಾನದಿಂದ ವಂಚಿಸುತ್ತಿದ್ದದ್ದು ಇವರ ಮೇಲೆ ಹೆಚ್ಚು ಅನುಕಂಪಕ್ಕೆ ಕಾರಣ ಆಗಿತ್ತು.
ಈ ಬಾರಿ ಇವರ ನಿರೀಕ್ಷೆ ಮೀರಿ ಪ್ರತಿಷ್ಟಿತ ಗೃಹ ಮಂತ್ರಿ ಸ್ಥಾನ ಸಿಕ್ಕಿದ್ದು ಶಿವಮೊಗ್ಗ ಜಿಲ್ಲೆಯೇ ಅಭಿಮಾನ ಪಡುವಂತಾಯಿತು ಆದರೆ ಜ್ಞಾನೇಂದ್ರ ಬದಲಾದರಾ? ಎಂಬ ಅನುಮಾನ ಜಿಲ್ಲೆಯಲ್ಲಿ ವ್ಯಕ್ತವಾಗಿದ್ದು ಸತ್ಯ.
ಇದರ ಮಧ್ಯ ಉಡುಪಿ ಜಿಲ್ಲೆಯ ಕೊರಗ ಸಮಾಜದ ಕುಟುಂಬದಲ್ಲಿ ಮದುವೆಗಾಗಿ ನಡೆದ ಮದರಂಗಿ ಕಾರ್ಯಕ್ರಮಲ್ಲಿ ಶಬ್ದ ಮಾಲಿನ್ಯದ ನೆಪದಲ್ಲಿ ಪೋಲಿಸರು ನಡೆಸಿದ ದೌರ್ಜನ್ಯ, ನಂತರ ಅದನ್ನು ಸಮರ್ಥಿಸಿಕೊಂಡ ಇಲಾಖೆಯ ಮೇಲಧಿಕಾರಿಗಳ ಬಹಿರಂಗ ಹೇಳಿಕೆ ಮತ್ತು ದೌರ್ಜನ್ಯಕ್ಕೆ ಒಳಗಾದವರ ಮೇಲೆ ಪೋಲಿಸ್ ಕೇಸ್ ದಾಖಲು ಆಗಿದ್ದು ಇಡೀ ರಾಜ್ಯ ಗೃಹ ಸಚಿವರ ಕಡೆ ನೋಡುವಂತೆ ಮಾಡಿತ್ತು.
ನಮ್ಮ ಜಿಲ್ಲೆಯ ಹೊಸನಗರ ಸಮೀಪದ ಜೇನಿ ಎಂಬಲ್ಲಿ ಪದ್ಮಶ್ರೀ ಅನಾಥಾಶ್ರಮ ನಡೆಸುವ ಸ್ನೇಕ್ ಪ್ರಭಾಕರ್ ಹತ್ತು ವರ್ಷದ ಹಿಂದೆ ಮಿಡಿ ನಾಗರ ಕಡಿತದಿಂದ ಸಾವು ಬದುಕಿನ ಮಧ್ಯ ಇದ್ದಾಗ ಆರಗ ಜ್ಞಾನೇಂದ್ರ ಮಾಜಿ ಶಾಸಕರಾಗಿದ್ದರೂ ಮಾಡಿದ ಸಹಾಯ ದೊಡ್ಡದು, ಆಶ್ರಮ ನಿರ್ಮಾಣಕ್ಕೂ ಅವರು ಮತ್ತು ಸೀತಾರಾಂ ಭಟ್ಟರು ಸೇರಿ ಸುಮಾರು ಎರೆಡು ಲಕ್ಷ ಹಣ ಸಂಗ್ರಹಿಸಿ ನೀಡಿದ್ದರಿಂದ ಈ ಬಾರಿಯ ಶಾಸಕ ಚುನಾವಣೆಯಲ್ಲಿ ಸಾಗರ ಕ್ಷೇತ್ರದಲ್ಲಿ ಕಾಂಗ್ರೇಸ್ ಬೆಂಬಲಿಗರಾದರೂ ಸ್ನೇಕ್ ಪ್ರಭಾಕರ್ ಮತ್ತು ಅವರ ತಂಡ ತೀರ್ಥಹಳ್ಳಿ ಕ್ಷೇತ್ರದಲ್ಲಿ ಆರಗ ಜ್ಞಾನೇಂದ್ರರ ಪರವಹಿಸಿದ್ದರು ಇದರಿಂದ ಅನೇಕ ಕಾಂಗ್ರೇಸ್ ಮುಖಂಡರು ಮುನಿಸಾದರು ಪ್ರಭಾಕರ್ ತನ್ನ ಜೀವ ಉಳಿಸಲು ಸಹಾಯ ಮಾಡಿದ ಋಣ ಇದೆ ಎಂದು ನೇರವಾಗಿ ಪ್ರಚಾರಕ್ಕೆ ಇಳಿದಿದ್ದರು.
ಮೊನ್ನೆ ಬೆಂಗಳೂರಲ್ಲಿ ಗೃಹ ಸಚಿವರ ಬೇಟಿಗೆ ತುಂಬಾ ಅನುಮಾನ ಪಟ್ಟು ಹೋಗುವ ಸಂದರ್ಭದಲ್ಲಿ ನನಗೆ ಪೋನ್ ಮಾಡಿದ್ದರು. ಅಧಿಕಾರ ಅನೇಕರನ್ನು ಬದಲಿಸಿದ ಅನುಭವ ಆಗಿದೆ ಮರಾಯರೆ ಇವತ್ತು ಆರಗ ಜ್ಞಾನೇಂದ್ರರ ಬೇಟಿ ಹೇಗಾಗುತ್ತೊ ಅಂದಿದ್ದರು.
ನಂತರ ಅವರ ಅನುಭವ ಕೇಳಿ
" ಇವರು ಹೋದಾಗ ಅಲ್ಲಿ ಇನ್ನೂರಕ್ಕೂ ಹೆಚ್ಚು ಬೇಟಿಗಾಗಿ ಬಂದವರಿದ್ದರಂತೆ, ಅಲ್ಲಿ ಇವರ ಹೆಸರು ಬರೆಸಿ ಕಾಯುತ್ತಿದ್ದ ರ೦ತೆ ಆಗ ಒಳಗಿನಿಂದ ಬಂದ ಪೋಲಿಸ್ ಅಧಿಕಾರಿ ಇಲ್ಲಿ ಆಶ್ರಮದ ಪ್ರಬಾಕರ್ ಯಾರು? ಅಂದಾಗ ಇವರು ಎದ್ದು ನಿಂತರಂತೆ, ಸಾಹೇಬರು ಕರೆಯುತ್ತಾರೆ ಅಂದಾಗ ಇವರಿಗೆ ಆಶ್ಚರ್ಯ, ಒಳಗೆ ಹೋದಾಗ ಇವರನ್ನು ಆಪ್ತರಾಗಿ ಕಂಡ ಗೃಹ ಸಚಿವರು ಡಿಸೆಂಬರ್ 31 ರ ರಾತ್ರಿ ಬೋಜನಕ್ಕೂ ಉಳಿಸಿ ಕೊಂಡಿದ್ದಾರೆ, ಮೀನು ಮಾಂಸದ ಭೂರಿ ಬೋಜನ ಏರ್ಪಡಿಸಿದ್ದಾರೆ ಆದರೆ ಸ್ನೇಕ್ ಪ್ರಭಾಕರ್ ಪರಿಶಿಷ್ಟ ಜಾತಿಯವರಾದರೂ ಅವರು ಸಸ್ಯಹಾರಿ ಅಂತ ತಿಳಿದು ನಿರಾಶರಾಗಿ ಅನ್ನ ತಿಳಿಸಾರಿನಲ್ಲಿ ಇವರನ್ನು ಸಂತೃಪ್ತಿ ಮಾಡಿದ ಬಗ್ಗೆ ಸ್ವತಃ ಬೇಸರ ಪಟ್ಟುಕೊಂಡರಂತೆ, ಸದ್ಯದಲ್ಲೇ ಇವರ ಆಶ್ರಮಕ್ಕೂ ಸ್ವತಃ ಬಂದು ಹೋಗುವುದಾಗಿ ತಿಳಿಸಿದರು ಅಂತ ಅವತ್ತಿನ ಗೃಹ ಸಚಿವರ ಜೊತೆಯ ಬೋಜನ ಕೂಟದ ಪೋಟೋ ವಾಟ್ಸಪ್ ಮಾಡಿದ್ದಾರೆ.
ನಾನು ಪೋನಾಯಿಸಿದಾಗ ನನ್ನಂತ ಅತ್ಯಂತ ಸಣ್ಣ ಮನುಷ್ಯ ಹಾವು ಹಿಡಿದು ಅನಾಥಶ್ರಮ ನಡೆಸುವವನಾದ ನನಗೆ ಗೃಹ ಸಚಿವರ ಈ ಅತಿಥ್ಯ ಮರೆಯಲುಂಟಾ? ಆರಗ ಜ್ಞಾನೇಂದ್ರ ಒಂದು ಕೂದಲ ಎಳೆ ಅಷ್ಟು ಬದಲಾಗಿಲ್ಲ ಅಂದರೆ ಮುಂದೆ ಮುಖ್ಯಮಂತ್ರಿ ಆದರೂ ಅವರು ಬದಲಾಗುವುದಿಲ್ಲ ಅಂತ ಹೆಮ್ಮೆಯಿಂದ ಹೇಳುತ್ತಿದ್ದರು.
ಉಡುಪಿ ಜಿಲ್ಲೆಯ ಕೋಟಾ ಊರಿನಲ್ಲಿ ಪೋಲಿಸರಿಂದ ದೌರ್ಜನ್ಯಕ್ಕೆ ಒಳಪಟ್ಟ ನೊಂದ ಕೊರಗರ ಮನೆಗೆ ಬೇಟಿ ನೀಡಿ ಇಲಾಖೆಯಿಂದ ಪರಿಹಾರ ನೀಡಿ ಅವರಿಗೆ ಸಾಂತ್ವನ ನೀಡಿ, ಪೋಲಿಸ್ ಇಲಾಖೆ ದುರುದ್ದೇಶದಿಂದ ಹಾಕಿದ ಕೇಸು ತೆಗೆಯುವುದಾಗಿ ಬಹಿರಂಗ ಹೇಳಿಕೆ ನೋಡಿದ ಮೇಲೆ ನನಗೂ ಅನ್ನಿಸಿದ್ದು ಆರಗ ಜ್ಞಾನೇಂದ್ರ ಅವರು ತಳಮರೆತಿಲ್ಲ ಅವರಿಗೆ ಅಧಿಕಾರ ಅಹಂಕಾರ ತರಲಿಲ್ಲ ಅಂತ.
ಗೃಹ ಸಚಿವರಾಗಿದ್ದ ಬೊಮ್ಮಾಯಿ ಮುಖ್ಯಮಂತ್ರಿ ಆದಂತೆ ಈಗಿನ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಮುಂದಿನ ಮುಖ್ಯಮಂತ್ರಿ ಆಗಲಿ ಅಂತ ಹಾರೈಸುತ್ತೇನೆ.
Comments
Post a Comment