ದೇಶಿ ಹೈ ಮಾಸ್ಟ್ ದೀಪ ಅಳವಡಿಸಿರುವ ಯಡೇಹಳ್ಳಿ ಗ್ರಾಮ ಪಂಚಾಯತಿಯ ಪ್ರಯೋಗಶೀಲತೆ ಎಲ್ಲಾ ಗ್ರಾಮ ಪಂಚಾಯಿತಿಗಳು ಅಳವಡಿಸಿ ಕೊಳ್ಳಬಹುದು.
#ಸ್ವದೇಶಿ_ಹೈಮಾಸ್ಟ್
#ಸ್ಥಳಿಯ_ಗ್ರಾಮಪಂಚಾಯತ್_ಯೋಚಿಸಬೇಕಾಗಿದೆ.
#ನಮ್ಮೂರ_ನಾಲ್ಕು_ರಸ್ತೆ_ಸೇರುವ_ಸ್ಥಳದಲ್ಲಿ_ಅಳವಡಿಕೆ.
#ಸ್ಥಳಿಯ_ಗ್ರಾಮಪಂಚಾಯತನ_ಉತ್ತಮ_ಕಾರ್ಯ.
#ಈ_ಅಂಬೇಡ್ಕರ್_ವೃತ್ತ_ನಿರ್ಮಾಣ_1997ರಲ್ಲಿ
#ಆಗ_ಅಧ್ಯಕ್ಷರಾಗಿದ್ದ_ಗಣಪತಿ_ಈಗ_ಪುನಃ_ಅಧ್ಯಕ್ಷರು
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿ ಕೇಂದ್ರ ಆನಂದಪುರಂಗೆ ಶಿವಮೊಗ್ಗ - ತೀರ್ಥಹಳ್ಳಿ - ಹೊಸನಗರ ಮತ್ತು ಶಿಕಾರಿಪುರದಿಂದ ಸಂಪರ್ಕ ರಸ್ತೆಗಳಿದೆ.
ಶಿವಮೊಗ್ಗ - ಹೊನ್ನಾವರ ಈಗ ರಾಷ್ಟ್ರೀಯ ಹೆದ್ದಾರಿ 206 ಆಗಿದೆ.
ಇದೇ ರೀತಿ ಹಾವೇರಿ ಬೈಂದೂರು ರಾಷ್ಟ್ರೀಯ ಹೆದ್ದಾರಿ ಆಗಿ ಶಿಕಾರಿಪುರ ಹೊಸನಗರ ಸಂಪರ್ಕದ ರಾ.ಹೆ. ಆನಂದಪುರಂನಲ್ಲಿ ಹಾದು ಹೋಗಿರುವ ಶಿವಮೊಗ್ಗ ಹೊನ್ನಾವರ ರಾ.ಹೆ.ಗೆ ಆನಂದಪುರಂ ಸಮೀಪದ ಯಡೇಹಳ್ಳಿ ವೃತ್ತದಲ್ಲಿ ಸೇರುತ್ತದೆ ಅಷ್ಟೆ ಅಲ್ಲ ಈ ನಾಲ್ಕು ರಸ್ತೆ ಮದ್ಯ ತೀರ್ಥಹಳ್ಳಿಯಿಂದ ಬರುವ ರಾಜ್ಯ ಹೆದ್ದಾರಿಯು ಸೇರುತ್ತದೆ.
10- ಡಿಸೆಂಬರ್ -1997ರಲ್ಲಿ ನಮ್ಮ ಯಡೇಹಳ್ಳಿಯ ವೃತ್ತ ನಿರ್ಮಿಸಿ ಕನ್ನಡ ದ್ವಜ ಸ್ಥಂಭದಲ್ಲಿ ನಿರಂತರ ಕನ್ನಡ ದ್ವಜ ಹಾರುವಂತೆ ಮಾಡಿ, ಈ ವೃತ್ತಕ್ಕೆ ಸಂವಿದಾನ ಶಿಲ್ಪಿ ಡಾ.ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಲು ಮುಖ್ಯಸ್ಥರಾಗಿದ್ದವರು ಆಗಿನ ಗ್ರಾಮ ಪಂಚಾಯತನ ಅಧ್ಯಕ್ಷರಾಗಿದ್ದವರು ಕುಂಬಾರ ಸಮಾಜದ ಶ್ರಮಜೀವಿ #ಇರುವಕ್ಕಿಗಣಪತಿ.
ಆನಂದಪುರಂ ನ ಕನ್ನಡ ಸಂಘದ ಸಹಕಾರದಿಂದ ನಿರಂತರ ಕನ್ನಡ ದ್ವಜಾರೋಹಣ ಖ್ಯಾತ ಪತ್ರಕರ್ತರಾದ #ಶೃಂಗೇಶರಿಂದ ನೆರವೇರಿಸಲಾಗಿತ್ತು.
ಅಂಬೇಡ್ಕರ್ ವೃತ್ತ ಉದ್ಘಾಟನೆ ಆಗಿನ ಮಲೆನಾಡು ಅಭಿವೃದ್ದಿ ಮಂಡಳಿ ಅಧ್ಯಕ್ಷರಾಗಿದ್ದ ತೀರ್ಥಹಳ್ಳಿ ಮೂಲದವರಾದ (ಕುವೆಂಪು ಸಂಬಂದಿಗಳು) #ಶ್ರೀಮತಿ_ಸ್ವರ್ಣ_ಪ್ರಭಾಕರ್ ನೆರವೇರಿಸಿದ್ದರು.
ಆಗ ನಾನು ಸ್ಥಳಿಯ ಜಿಲ್ಲಾ ಪಂಚಾಯತನ ಸದಸ್ಯ, ಯಡೇಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಗಣಪತಿ
ವಿದ್ಯಾವಂತರಲ್ಲ ಆದರೆ ಅತ್ಯುತ್ತಮ ಆಡಳಿತ ಮಾಡಿದ ಕೀರ್ತಿ ಪಡೆದರು ಸುಮಾರು 25 ವರ್ಷದ ನಂತರ ಪುನಃ ಯಡೇಹಳ್ಳಿ ಗ್ರಾಮ ಪಂಚಾಯತನ ಅಧ್ಯಕ್ಷರಾಗಿದ್ದಾರೆ, ಇವರಿಗೆ #ಗೇರುಬೀಸಿನಶಿವಾನಂದ ಮತ್ತು #ಗೇರುಬೀಸಿನನಟರಾಜ ಎಂಬಿಬ್ಬರು ಉತ್ಸಾಹಿ ಯುವ ಸದಸ್ಯರು ಜೊತೆಯಾಗಿದ್ದಾರೆ.
ಇವರೆಲ್ಲ ಸೇರಿ ಯಡೇಹಳ್ಳಿ ಅಂಬೇಡ್ಕರ್ ವೃತ್ತಕ್ಕೆ ಒಂದು ವಿಶೇಷ ಕಳೆ ಬರುವಂತ ಕೆಲಸ ಮಾಡಿದ್ದಾರೆ ಸ್ಥಳಿಯ ದೇಶಿ #ಹೈ_ಮಾಸ್ಟ್ ದೀಪ ಅಳವಡಿಸಿದ್ದಾರೆ ಇದನ್ನು ತಯಾರಿಸಿ ಅಳವಡಿಸಿದವರು ಆನಂದಪುರಂನ ಮಾರುತಿ ಇಂಡಸ್ಟ್ರೀಸ್ ಮಾಲಿಕ #ಪೂವಪ್ಪನವರು.
ಸಾಮಾನ್ಯವಾಗಿ ಹೈ ಮಾಸ್ಟ್ ದೀಪ ಸಂಸದರ ಶಾಸಕರ ಅನುದಾನದಲ್ಲಿ ನಿರ್ಮಿಸುತ್ತಾರಾದರು ಅದರ ಬಾಳಿಕೆ ಕೆಲವೇ ವರ್ಷ ಆದರೆ ಈ ದೇಶಿ ಹೈ ಮಾಸ್ಟ್ ದೀಪ ಮುಂದಿನ 30 ವರ್ಷಕ್ಕೂ ಬಾಳಿಕೆಗೆ ಖಾತ್ರಿ ಇದೆ ಮತ್ತು ಬೆಲೆಯೂ ಕಡಿಮೆ.
ಮುಂದಿನ ದಿನದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭ ಮಾಡಿದರೆ ಇದನ್ನು ಬಿಚ್ಚಿ ಮತ್ತೆ ಬೇರೆ ಸೂಕ್ತ ಸ್ಥಳದಲ್ಲಿ ಅಳವಡಿಸ ಬಹುದಾಗಿದೆ.
ಎಲ್ಲಾ ಗ್ರಾಮ ಪಂಚಾಯತ್ ಗಳು ಈ ನಿಟ್ಟಿನಲ್ಲಿ ತಮ್ಮ ತಮ್ಮ ಗ್ರಾಮಗಳಲ್ಲಿ ಸುಲಭವಾಗಿ ಕಡಿಮೆ ವೆಚ್ಚದಲ್ಲಿ ದೀರ್ಘ ಬಾಳಿಕೆಯ ಈ ಹೈ ಮಾಸ್ಟ್ ಬೀದಿ ದೀಪ ಅಳವಡಿಸಬಹುದಾಗಿದೆ.
Comments
Post a Comment