BLOG ARTICLES 956. ಆನಂದಪುರಂ ಹೊಂಬುಜ ರೆಸಿಡೆನ್ಸಿ ಲಾಡ್ಜ್ ನಲ್ಲಿ ಪ್ರಾಚೀನ ಭಾರತೀಯ ಆಯುರ್ವೇದ ಚಿಕಿತ್ಸೆ ಶಿರೋದಾರ ಚಿಕಿತ್ಸೆ ದಿನಾಂಕ 10- ಸೆಪ್ಟೆಂಬರ್ -2022 ಶನಿವಾರದಿಂದ ದನ್ವಂತರಿ ಹೋಮದೊಂದಿಗೆ ಪ್ರಾರಂಭವಾಗಲಿದೆ.
#ನಿಮ್ಮೆಲ್ಲರ_ಶುಭ_ಹಾರೈಕೆಗಳು_ಇರಲಿ. #ದಿನಾಂಕ_10_ಸೆಪ್ಟೆಂಬರ್_2022_ಶನಿವಾರ__ನಮ್ಮ_ಶಿರೋದಾರ_ಕೇಂದ್ರ_ಉದ್ಘಾಟನೆ. #ಭಾರತೀಯ_ಪ್ರಾಚೀನ_ಆಯುರ್ವೇದ_ಚಿಕಿತ್ಸೆ. ಶಿರೋದಾರ ಅಂದರೆ ಮನುಷ್ಯನ ಹಣೆಗೆ (ಮೂರನೆ ಕಣ್ಣು) ಕ್ಷೀರಾಬಲ ತೈಲದ ದಾರಣೆ (ನಿರ್ದಿಷ್ಟ ಪ್ರಮಾಣದಲ್ಲಿ ತೈಲ ಬಿಡುತ್ತಾರೆ) ಮಾಡುವುದು. ಇದು ಭಾರತೀಯ ಪ್ರಾಚೀನ ಆಯುರ್ವೇದ ಗ್ರಂಥ ಚರಕ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ನಿರ್ದಿಷ್ಟ ಅಳತೆ - ಆಕೃತಿಯ ಮತ್ತು ನಿರ್ದಿಷ್ಟ ಜಾತಿಯ ಮರದ ಟೇಬಲ್ (ಅದಕ್ಕೆ ದೋಣಿ ಎಂದು ಹೆಸರು) ಅನೇಕ ಪರಿಕರಗಳು ಬೇಕು. ಶಿರೋದಾರಕ್ಕೆ ಬಳಸುವ ತೈಲಗಳು ಲೀಟರ್ ಗೆ ಒಂದು ಸಾವಿರದಿಂದ ಹದಿನೈದು ಸಾವಿರದವರೆಗೆ ವಿಬಿನ್ನ ಆಯ್ಕೆಗಳಿದೆ. ಆಯುರ್ವೇದ ವೈದ್ಯರ ಶಿಪಾರಸ್ಸಿನಂತೆ ನಿರ್ದಿಷ್ಟ ಕ್ರಮದಲ್ಲಿ ಆಯುರ್ವೇದ ವೈದ್ಯರು ಶಿರೋದಾರ ಮಾಡುತ್ತಾರೆ. ಶಿರೋದಾರ ಏಕೆ ಮಾಡುತ್ತಾರೆಂದರೆ ಇದು ಮೆದುಳಿನ ನರ ಮಂಡಳದ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ, ಮನಸ್ಸಿನ ಸ್ಥಿತಿ ನಿಯಂತ್ರಿಸುತ್ತದೆ ಆದ್ದರಿಂದ ಶಿರೋದಾರ ಮನಸ್ಸು ಶಾಂತಗೊಳಿಸಿ ವಿಶ್ರಾಂತ ಸ್ಥಿತಿಗೆ ತಲುಪಿಸಲು ಭಾರತೀಯ ಆಯುರ್ವೇದದಲ್ಲಿ ಅತ್ಯುತ್ತಮ ಚಿಕಿತ್ಸೆ. ಶಿರೋದಾರ ಮತ್ತು ಇದಕ್ಕೆ ಬಳಸುವ ತೈಲವು ತಲೆ ಕೂದಲು ಮತ್ತು ನೆತ್ತಿಯನ್ನು ಪೋಷಿಸುತ್ತದೆ, ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ, ಆತ...