Skip to main content

Posts

Showing posts with the label Western coastal famous palm jaggery now very rarely available but local sugar cane jaggery selling as palm jaggery.

Blog number 1715. ಕರಾವಳಿಯ ಸ್ವಾದಿಷ್ಟ ವಾಲೆ ಬೆಲ್ಲದ ಪ್ಯಾಕಿನಲ್ಲಿ ಕಬ್ಬಿನ ಆಲೇಮನೆ ಬೆಲ್ಲ ಮಾರಾಟ ಮಾಡುವ ದುರಾಸೆಯ ವ್ಯಾಪಾರ.

#ತಾಳೆಮರದ_ನೀರಾದಿಂದ_ತಯಾರಾಗುವ_ಸ್ವಾದಿಷ್ಟ_ಬೆಲ್ಲ  #ಇದನ್ನು_ತಾಳೆಮರದ_ಗರಿಯಿಂದ_ಸುತ್ತುತ್ತಾರೆ #ಇದಕ್ಕೆ_ವಾಲೆ_ಬೆಲ್ಲ_ಎ೦ದು_ಕರೆಯುತ್ತಾರೆ #ಈಗ_ಕಬ್ಬಿನ_ಬೆಲ್ಲವನ್ನು_ವಾಲೆ_ಬೆಲ್ಲದ_ರೀತಿ_ಪ್ಯಾಕಿಂಗ್_ಮಾಡಿ_ಮಾರಾಟ_ಮಾಡುತ್ತಾರೆ. #ಒರಿಜನಲ್_ವಾಲೆ_ಬೆಲ್ಲದ_ಬೆಲೆಯಲ್ಲಿ_ಮಾರಾಟ. https://youtu.be/yqUH45_bTDE?feature=shared    ತಾಳೆ ಮರದಿಂದ ತೆಗೆದ ನೀರಾ ಕುದಿಸಿ ಅದರಿಂದ ತೆಗೆಯುವ ಬೆಲ್ಲ ತಾಳೆ ಮರದ ಗರಿಯಿಂದ ವೃತ್ತಾಕಾರವಾಗಿ ಅಚ್ಚು ಬೆಲ್ಲ ತಯಾರಿಸುತ್ತಾರೆ ಇದಕ್ಕೆ ವಾಲೆ ಬೆಲ್ಲ ಅಂತ ಹೆಸರು ಇಂತಹ ಹತ್ತಿಪ್ಪತ್ತು ಚಕ್ರಾಕಾರದ ಬೆಲ್ಲದ ಅಚ್ಚು ಒಂದರ ಮೇಲೆ ಒಂದು ಜೋಡಿಸಿ ಅದನ್ನು ತಾಳೆಗರಿಯ ಕೊಟ್ಟೆ (ಪೊಟ್ಟಣ) ಯಲ್ಲಿ ಕಟ್ಟಿ ಅಂಗಡಿಗಳಲ್ಲಿ ಮಾರಾಟ ಮಾಡುತ್ತಾರೆ.    ಈ ವಾಲೆ ಬೆಲ್ಲದ ಬಣ್ಣ ಕಪ್ಪು ಇದರ ರುಚಿ ಮತ್ತು ಘಮ ವಿಶಿಷ್ಟವಾಗಿರುತ್ತದೆ ಇತ್ತೀಚೆಗೆ ತಾಳೆ ಮರದ ನೀರಾ ತೆಗೆದು ಬೆಲ್ಲ ಮಾಡುವ ಕುಶಲ ಕರ್ಮಿಗಳು ತುಂಬಾ ಕಡಿಮೆ ಮತ್ತು ಈ ಬೆಲ್ಲದ ಉತ್ಪಾದನಾ ವೆಚ್ಚ ತುಂಬಾ ಹೆಚ್ಚಾದ್ದರಿಂದ ವಾಲೆ ಬೆಲ್ಲ ಕೂಡ ಅಪರೂಪವಾಗಿದೆ.    ಮೊನ್ನೆ ಕುಂದಾಪುರಕ್ಕೆ ಹೋಗಿದ್ದ ನನ್ನ ಅಣ್ಣನಿಗೆ ವಾಲೆ ಬೆಲ್ಲ ತರಲು ನೆನಪು ಮಾಡಿದ್ದೆ, ಒಂದು ದೊಡ್ಡ ಗಾತ್ರದ ತಾಳೆ ಮರದ ಗರಿಯಲ್ಲಿ ಮಜಬೂತಾಗಿ ಕಟ್ಟಿದ ವಾಲೆ ಬೆಲ್ಲದ ಕೊಟ್ಟೆ ತಂದು ಕೊಟ್ಟಿದ್ದರು.    ಇವತ್...