Skip to main content

Posts

Showing posts with the label China Gate at Jogfalls

4127.ಜೋಗ್_ಜಲಪಾತದ_ಹತ್ತಿರ_ಚೈನಾ_ಗೇಟ್?... ಇದು ಹೇಗೆ ಸಾಧ್ಯ ಎನ್ನುತ್ತೀರಾ.. ಹಾಗಾದರೆ ಈ ಲೇಖನ ಪೂರ್ಣ ಓದಿ.

ಜೋಗ್_ಜಲಪಾತದ_ಹತ್ತಿರ_ಚೈನಾ_ಗೇಟ್?...   ಇದು ಹೇಗೆ ಸಾಧ್ಯ ಎನ್ನುತ್ತೀರಾ.. ಹಾಗಾದರೆ ಈ ಲೇಖನ ಪೂರ್ಣ ಓದಿ.   ಶಿವಮೊಗ್ಗ ಮಾರ್ಗದಿಂದ ಜೋಗ್ ಫಾಲ್ಸ್ ನೋಡಲು ಬರುವ ಪ್ರವಾಸಿಗಳು ಸಾಗರದ ನಂತರ ತಾಳಗುಪ್ಪಗೆ ಹೋದರೆ ಅಲ್ಲಿಂದ ಜೋಗ್ ಜಲಪಾತಕ್ಕೆ ಎರೆಡು ಮಾರ್ಗಗಳಿದೆ ಒಂದು ಕಾರ್ಗಲ್ ಮೂಲಕ ಇನ್ನೊಂದು ಹೊನ್ನಾವರ ಮಾರ್ಗದಲ್ಲಿ ಸಾಗಿ ನೇರವಾಗಿ ಜೋಗ್ ಫಾಲ್ಸ್ ಗೆ ಹೋಗುವುದು.   ನೀವೇನಾದರು ತಾಳಗುಪ್ಪದಿಂದ ಕಾರ್ಗಲ್ ಮಾರ್ಗವಾಗಿ ಸಾಗಿದರೆ ಈ ಜೈನಾ ಗೇಟ್ ಮೂಲಕವೇ ಹೋಗುತ್ತೀರಿ.   ಪ್ರಾಜೆಕ್ಟ್ ಅಧಿಕೃತ ದಾಖಲೆಯಲ್ಲಿ ಈ ಹೆಸರು ಇಲ್ಲ ಆದರೆ ಜನರ ಬಾಯಲ್ಲಿ ಈ ಪ್ರದೇಶ ಚೈನಾ ಗೇಟ್ ಅಂತಾಗಿದೆ. ಇಲಾಖಾ ಉದ್ಯೋಗಿಗಳ ಪ್ರಕಾರ ಇಲ್ಲಿಂದ ಮಹಾತ್ಮಾಗಾಂಧಿ ಪವರ್ ಪ್ಲಾಂಟಿಗೆ ನೀರನ್ನು ಕಾಲುವೆಗೆ ಬಿಡುವ ಗೇಟ್ ಜೈನ್ ಪುಲ್ಲಿಯಿಂದ ಆಪರೇಟ್ ಆಗುವುದರಿಂದ #ಚೈನ್_ಗೇಟ್ ಎಂಬ ಹೆಸರೇ ಈಗಾ ಚೈನಾ ಗೇಟ್ ಆಗಿದೆ ಅಂತಾರೆ.  ಲಿಂಗನಮಕ್ಕಿ ಮೂಲ ನಿವಾಸಿಗಳ ಪ್ರಕಾರ #ಲಿಂಗನಮಕ್ಕಿ ಪ್ರಾಜೆಕ್ಟ್ ಕಾರ್ಮಿಕರಿಗೆ ಸೈನಸ್ ಗ್ಯಾಸ್ ಚೆಂಬರ್ ಮೂಲಕ ಪ್ರಾಜೆಕ್ಟ್ ಪ್ರದೇಶಕ್ಕೆ ಪ್ರವೇಶ ಇದ್ದಿದ್ದರಿಂದ ಈ ಹೆಸರು ಬಂದಿರಬಹುದು ಅನ್ನುತ್ತಾರೆ.      ಶರಾವತಿ ನದಿಯಿಂದ ವಿದ್ಯುತ್ ಉತ್ಪಾದನೆಗಾಗಿ ಮಡೇನೂರು ಅಥವ ಹಿರೇ ಭಾಸ್ಕರ ಡ್ಯಾಮ್ ನಿರ್ಮಾಣ ಮಾಡಿದಾಗ ಜೋಗದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಟರ್ಬೈನ್ಗಳನ್ನು ಅಳವಡಿಸಲ...