#ಅಂತರಾಷ್ಟ್ರೀಯ_ನಿದಿ_ಚೋರರ_ತಂಡದಿಂದ #ಕಾಳು_ಮೆಣಸಿನ_ರಾಣಿ__ಗೇರುಸೊಪ್ಪೆಯ_ಜೈನರಾಣಿ #ಚೆನ್ನಬೈರಾದೇವಿ_ಸಂಸ್ಥಾನದ_ಸ್ಮಾರಕ_ಭಗ್ನವಾಯಿತು 1941 ರಲ್ಲಿ SS ಗೇರುಸೊಪ್ಪೆ ಎಂಬ ಬ್ರಿಟೀಷರ ಹಡಗು ಚೆನ್ನಬೈರಾ ದೇವಿಯ ಆಸ್ಥಾನಕ್ಕೆ ಸೇರಿದ್ದ ಟನ್ ಗಟ್ಟಲೆ ಬೆಳ್ಳಿ ಬಾರ್ ಗಳನ್ನು ಒಯ್ಯುತ್ತಿದ್ದಾಗ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿನ ಸಬ್ ಮೆರೀನ್ ಉಡಾಯಿಸಿದ ಟಾರ್ಪೆಡೋ ಒಂದು ಈ ಹಡಗನ್ನು ಮುಳುಗಿಸಿತು. ಅನೇಕ ವರ್ಷಗಳ ನಂತರ 2012-13ರಲ್ಲಿ ಸಮುದ್ರದಲ್ಲಿ ಮುಳುಗಿದ ನಿಧಿಯನ್ನು ಸಂಶೋಧಿಸುವ ಅಮೆರಿಕದ ಸಂಸ್ಥೆ ಒಂದು ಈ ಮುಳುಗಿದ ಗೇರುಸೊಪ್ಪೆ ಹಡಗನ್ನು ಕಂಡುಹಿಡಿದು ಆ ಹಡಗಿನಲ್ಲಿ ರವಾನಿಸುತ್ತಿದ್ದ ಬೆಲೆಬಾಳುವ ಬೆಳ್ಳಿ ಬಾರ್ ಗಳನ್ನು ಆಳ ಸಮುದ್ರದಿಂದ ತೆಗೆಯಿತು. ಅದು ಯುರೋಪಿನಿಂದ ಕಾಳುಮೆಣಸು ಖರೀದಿಗಾಗಿ ವಿನಿಮಯ ಮಾಡಿಕೊಂಡ ಬೆಳ್ಳಿ ಬಾರ್ ಗಳಾಗಿದ್ದು ಅದು ರಾಣಿ ಚೆನ್ನಬೈರಾ ದೇವಿಯ ಸಂಸ್ಥಾನದ್ದಾಗಿತ್ತು. ಈ ಸುದ್ದಿ ಬ್ರಿಟಿಷರು ತಮ್ಮ ಆಡಳಿತಾವಧಿಯಲ್ಲಿ ರಾಣಿ ಚೆನ್ನಬೈರಾ ದೇವಿಯ ಗುಪ್ತ ನಿಧಿಗಳನ್ನು ವಶಪಡೆದದ್ದರು ಎಂಬ ಸುದ್ದಿಗೆ ಪೂರಕವಾಗಿದೆ. ಆ ನಂತರದಲ್ಲಿ ನಮ್ಮ ದೇಶ ಸ್ವಾತಂತ್ರವಾಯಿತು, ಆ ಕಾಲಮಾನದಲ್ಲಿ ಇಟಲಿಯ ಮಾಫಿಯಾ ಸಂಸ್ಥೆ ಇಲ್ಲಿನ ರಾಣಿ ಚೆನ್ನಬೈರಾದೇವಿಯ ಗುಪ್...