Skip to main content

Posts

Showing posts with the label After liquor consuming only devotees participate in God Rushyashrunga chariot

Blog number 1339. ಮಧ್ಯಪಾನ ಮಾಡಿಯೇ ಕಿಗ್ಗ ಋಷ್ಯಶೃಂಗ ದೇವರ ರಥ ಎಳೆಯಬೇಕೆಂಬ ನಂಬಿಕೆಯ ಆಚರಣೆ ಇಲ್ಲಿದೆ.

#ಕಿಗ್ಗಾ_ಶೃಂಗೇಶ್ವರ_ಜಾತ್ರೆ_ವಿಶೇಷ_ಗೊತ್ತಾ ? #ಶೂದ್ರರು_ಕುಡಿದು_ರಥ_ಎಳೆಯುವ_ಪದ್ಧತಿಗೆ_ಕಾರಣ ?   ಕಿಗ್ಗಾ ಶೃಂಗೇರಿ ಮತ್ತು ಸಿರಿಮನೆ ಜಲಪಾತದ ಮಧ್ಯದ ಸಣ್ಣ ಊರು, ಶೃಂಗೇರಿಯಿಂದ 9 ಕಿ.ಮಿ. ದೂರದಲ್ಲಿದೆ.   ಕಿಗ್ಗಾದ ಜಾತ್ರೆ ನಂತರ ಮಳೆ ಬಂದೇ ಬರುತ್ತದೆ, ಇಲ್ಲಿ ನರಸಿಂಹ ಪರ್ವತ ಇದೆ, ಇಲ್ಲಿನ ದೇವಾಲಯ 11ನೇ ಶತಮಾನದಲ್ಲಿ ನಿಮಾ೯ಣವಾದ 4 ಅಡಿ ಎತ್ತರದ ಶಿವಲಿಂಗ ಇದೆ.   ಋಷಿ ಶೃಂಗೇಶ್ವರರು ಜಿಂಕೆಯ ಕೊಂಬಿನಿಂದ ಜನಿಸಿದರೆಂಬ ಸ್ಥಳ ಪುರಾಣ ಇದೆ, ರಾಜ್ಯದಲ್ಲಿ ಬರಗಾಲ ಬಂದಾಗೆಲ್ಲ ಇಲ್ಲಿ ಪೂಜೆ ಸಲ್ಲಿಸಿದಾಗ ಭರಪೂರ ಮಳೆ ಆಗುತ್ತದೆ.   ಮೂರು ದಿನದ ಹಿಂದೆ ಕಿಗ್ಗಾ ರಥೋತ್ಸವ ಆಯಿತು ಹಗಲಿನ ರಥೋತ್ಸವ ಅರ್ಚಕರು ಮತ್ತು ಬ್ರಾಹ್ಮಣರು ನೆರವೇರಿಸುತ್ತಾರೆ ಸಂಜೆ ಶೂದ್ರರೇ ರಥ ಎಳೆಯುವ ಪದ್ಧತಿ ಇದೆ.   ಇಲ್ಲಿನ ನಂಬಿಕೆ ಒಂದು ಈಗಲೂ ಆಚರಣೆಯಲ್ಲಿದೆ ಅದೇನೆಂದರೆ ಶೂದ್ರ ಭಕ್ತರು ಮದ್ಯಪಾನ ಮಾಡಿಯೇ ರಥ ಎಳೆಯುವುದು!?     ಯಾವುದೋ ಕಾಲದಲ್ಲಿ ಶೂದ್ರರು ಭಕ್ತಿ ಪೂರ್ವಕವಾಗಿ ರಥ ಎಳೆಯಲು ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗದಿದ್ದಾಗ ಕಾಲಜ್ಞಾನಿಯಿಂದ ಮಧ್ಯಪಾನ ಮಾಂಸಹಾರ ಮಾಡಿ ರಥ ಎಳೆಯಲು ತಿಳಿಸಿದಂತೆ ಹೇಳಿಕೆ ಆದಾಗ ರಥ ಚಲಿಸಿದ್ದರಿಂದ ಈಗಲೂ ಈ ಪದ್ದತಿ ಚಾಲ್ತಿಯಲ್ಲಿದೆ.   ಸ್ಥಳಿಯ ಶೂದ್ರರಲ್ಲಿ ಈ ರಥೋತ್ಸವಕ್ಕಾಗಿ ದ್ರಾಕ್ಷಿಯಿಂದ ಮಾಡಿದ ವೈನ್ ಎಲ್ಲರ ಮನೆ...