ಹೋಳಿಗೆ ತುಪ್ಪದ ಲಾಜಿಕ್ ಶಾಂತವೇರಿ ಗೋಪಾಲಗೌಡರು ಗಮನಿಸಿದ್ದರು ಇದನ್ನು ಕಾಗೋಡು ತಿಮ್ಮಪ್ಪರಿಂದ ಕೇಳಿದ್ದು ನನಗೆ ಪ್ರತಿ ಹಬ್ಬದಲ್ಲಿ ನನ್ನ ಸಿಬ್ಬಂದಿ ಮತ್ತು ಗೆಳೆಯರಿಗೆ ಹೋಳಿಗೆ ತುಪ್ಪದ ಉಡುಗೊರೆಗೆ ಮತ್ತು ನಮ್ಮ ಊರ ರಥೋತ್ಸವದಲ್ಲಿ ಅನ್ನ ಸಂತಪ೯ಣೆಗೆ ಹೋಳಿಗೆ ತುಪ್ಪ ಬಡಿಸಲು ಪ್ರೇರಣೆ ಆಯಿತು
ನನಗೆ ಪ್ರತಿ ವಷ೯ ದೀಪಾವಳಿಯಲ್ಲಿ ನೆನಪಾಗುವ #ಕಾಗೋಡು_ತಿಮ್ಮಪ್ಪನವರು_ಪುನರುಚ್ಚರಿಸಿದ_ಶಾಂತವೇರಿ_ಗೋಪಾಲಗೌಡರು_ಹೇಳುತ್ತಿದ್ದ_ಹೋಳಿಗೆ_ಕಥೆ ಬಂಗಾರಪ್ಪನವರು ಜಾರಿಗೆ ತಂದ ಬಗರ್ ಹುಕುಂ ಮಂಜೂರು ಪತ್ರ ನನ್ನ ಗ್ರಾಮ ಪಂಚಾಯತ್ ವ್ಯಾಪ್ತಿಯ ಅನೇಕ ಹಳ್ಳಿಯಲ್ಲಿನ ಬಡ ರೈತರಿಗೆ ಭೂಮಾಲಿಕತ್ವ ತಂದ ಮೊದಲ ದೀಪಾವಳಿ ಆಗಿತ್ತು. ಹಕ್ಕು ಪತ್ರ ಸಿಗುವ ಸಂದಭ೯ದಲ್ಲಿ ರಾಜಕೀಯ ಸ್ಥಿತ್ಯಂತರದಲ್ಲಿ ಬಂಗಾರಪ್ಪರ ಪದಚ್ಯುತಿ ಆಗಿ ಮೊಯ್ಲಿ ಮುಖ್ಯಮಂತ್ರಿ ಮತ್ತು ಗೃಹ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕಾಗೋಡು ಮಂತ್ರಿ ಆಗಿದ್ದರು. ರಾಜ್ಯದಲ್ಲಿ ಮೊದಲ ಬಗರ್ ಹುಕುಂ ಪತ್ರಗಳು ನಮ್ಮ ಗ್ರಾಮ ಪಂಚಾಯಿತಿಯಲ್ಲಿ ವಿತರಿಸಿದ್ದು ಇದಕ್ಕೆ ನನ್ನ ಶ್ರಮ ಕಾಗೋಡರಿಗೆ ತುಂಬಾ ಸಂತೋಷ ಉಂಟು ಮಾಡಿತ್ತು. ಇದೇ ಸಂದರ್ಭದಲ್ಲಿ ಮಂತ್ರಿಗಳ ಜೊತೆ ನಾನು, ಬೀಮನೇರಿ ಶಿವಪ್ಪ ಮತ್ತು ತೀ.ನಾ. ಶ್ರೀನಿವಾಸ್ ಸಾಗರ ತಾಲ್ಲೂಕಿನ ಆವಿನಳ್ಳಿ ಹೋಬಳಿಯ ಪ್ರವಾಸದಲ್ಲಿ ಜೊತೆಗೆ ಇದ್ದೆವು, ದೀಪಾವಳಿಯ ಬೆಳಗಿನ ಉಪಹಾರ ಆವಿನಳ್ಳಿ ರೈಸ್ ಮಿಲ್ ಮಾಲಿಕರಾದ ಹೆಚ್.ಎಂ.ಬಸವರಾಜ್ ಗೌಡರ ಮನೆಯಲ್ಲಿ ಹೋಳಿಗೆ ಜೊತೆಗೆ ಉಪಹಾರ. ನಂತರದ ಸಭೆಯೊಂದರಲ್ಲಿ ಕಾಗೋಡು ನನ್ನ ಹೊಗಳಿದ್ದೇ ಹೊಗಳಿದ್ದು ಕಾರಣ ನನ್ನ ಗ್ರಾಮ ಪಂಚಾಯಿತಿಯಲ್ಲಿ ಯಶಸ್ವಿ ಆಗಿ ಬಗರ್ ಹುಕುಂ ಹಕ್ಕು ಪತ್ರ ವಿತರಿಸಿದ್ದಕ್ಕೆ...