#ನಮ್ಮ_ಜಿಲ್ಲೆ_ಶಿವಮೊಗ್ಗದಲ್ಲಿ_ಮತ್ತೆ_ಕ್ಯಾಸನೂರು_ಪಾರೆಸ್ಟ್_ಡಿಸೀಸ್ #ಹೊಸವರ್ಷದಲ್ಲಿ_ಮಂಗನ_ಕಾಯಿಲೆಗೆ_ಮೊದಲ_ಬಲಿ #ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲೂಕಿನ_ಅರಮನೆಕೊಪ್ಪ_ಗ್ರಾಮ_ಪಂಚಾಯತಿಯ #ಬಪ್ಪನುಮನೆ_ಗ್ರಾಮದ_18_ವರ್ಷದ_ಅನನ್ಯ. #ದಿನಾಂಕ_5_ಜನವರಿ_2019ರಂದು_ಅರಲಗೋಡಿನ_ಶ್ವೇತಾ. #ದಿನಾಂಕ_2_ಮೇ_2022ರಂದು_ಅರಲುಗೋಡಿನ_ಗ್ರಾಮ_ಪಂಚಾಯಿತಿ_ಸದಸ್ಯ #ರಾಮಸ್ವಾಮಿ_ಕರುಮನೆ_ಮತ್ತು_ಅನೇಕರು_ಜೀವ_ತ್ಯಾಗ_ಮಾಡಿದ್ದಾರೆ #ಮಂಗನ_ಕಾಯಿಲೆಗೆ_ವ್ಯಾಕ್ಸಿನ್_ಇದಿಯಾ? #ಅದು_ಪರಿಣಾಮಕಾರಿಯಾ? #ಪರಿಕ್ಷಾ_ಕೇಂದ್ರ_ಲ್ಯಾಬ್_ಆಗಿದೆಯಾ? 2024 ರ ಹೊಸ ವರ್ಷದ ಮೊದಲ ತಿಂಗಳಲ್ಲೇ ಮಂಗನಕಾಯಿಲೆ / ಕ್ಯಾಸನೂರು ಪಾರೆಸ್ಟ್ ಡಿಸೀಸ್ / ಕೆ.ಎಪ್.ಡಿ. ಎಂಬ ಕಾಯಿಲೆಗೆ ಮೊದಲ ಬಲಿ ಆಗಿರುವುದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಮನೆ ಕೊಪ್ಪ ಗ್ರಾಮ ಪಂಚಾಯಿತಿನ ಒಪ್ಪನು ಮನೆ ಗ್ರಾಮದ 18 ವರ್ಷದ ಅನನ್ಯ. 2019 ರ ಜನವರಿ 5ರಂದು ಸಾಗರ ತಾಲೂಕಿನ ಅರಲು ಗೋಡು ಗ್ರಾಮ ಪಂಚಾಯಿತಿ ವಿಶ್ವ ವಿಖ್ಯಾತ ಜೋಗ ಜಲಪಾತದಿಂದ ಕೇವಲ 5-6 ಕಿ.ಮೀ. ವ್ಯಾಪ್ತಿಯಲ್ಲಿದೆ ಅಲ್ಲಿನ ಕಾಲೇಜು ವಿದ್ಯಾರ್ಥಿನಿ ಶ್ವೇತ ಕಾಲೇಜಿನ ರಜಾ ದಿನದಲ್ಲಿ ತಮ್ಮ ಅಡಿಕೆ ತೋಟದಲ್ಲಿ ಬಿದ್ದ ಅಡಿಕೆ ಸಂಗ್ರಹಿಸುವಾಗ ಈ ಮಂಗನ ಕಾಯಿಲೆಗೆ ತುತ್ತಾಗಿದ್ದು ನಂತರ ಸುಮಾರು 25 ಕ್ಕೂ ಅಧಿಕ ಜನರು ಇದಕ್ಕೆ ಬಲಿಯಾದರು. 2022 ರಲ್ಲಿ ಇದೇ ಗ್ರಾಮ ಪಂಚಾಯಿತಿ ಸದ...