Blog number 832. ಗನ್ನಿ ಸಾಹೇಬರ ಹಜ್ ಯಾತ್ರೆ ಆಯೋಜಿಸಿದಾಗ ನಮ್ಮ ಊರಲ್ಲಿ ಒಂದು ತರ್ಕ ಪ್ರಾರಂಭ ಆಗಿತ್ತು ಹಿಂದೂ ದರ್ಮಿಯರ ಸಹಾಯದಲ್ಲಿ ಹೆಜ್ ಯಾತ್ರೆ ಹರಾಂ ಆಗುತ್ತಾ? ಎಂಬ ಪ್ರಶ್ನೆ. ಆ ಸಂದಭ೯ದಲ್ಲಿ ದೂರದ ಉತ್ತರ ಪ್ರದೇಶದಿಂದ ಮುಸ್ಲಿಂ ಪಂಡಿತರು ನೀಡಿದ ಉತ್ತರ ನನಗೂ ಮತ್ತು ಗನ್ನಿ ಸಾಬರಿಗೂ ನಿರಾಳವುಂಟು ಮಾಡಿತು.
#ಎಲ್ಲದರಲ್ಲೂ_ದಮ೯_ದಮ೯ದ_ಕಾದಾಟದ_ಸಂದಬ೯ದಲ್ಲಿ_ನನ್ನ_ಮತ್ತು_ಗನ್ನಿ_ಸಾಹೇಬರ_ಸಂಬಂದ_ನೆನಪಾಯಿತು #ಕಳೆದು_ಹೋದ_ಕಾಲ_ಬಂದೀತೆ? #ಗನ್ನಿ_ಸಾಹೇಬರ_ಮೆಕ್ಕಾ_ಯಾತ್ರೆ_ಹಿಂದೂ_ಆದ_ನಾನು_ಮಾಡಿಸಿದ್ದು. #ಇದಕ್ಕೆ_ಎರೆಡೂ_ದರ್ಮಿಯರ_ಕುಹಕ #ಉತ್ತರ_ಭಾರತದಿಂದ_ಬಂದ_ಮುಸ್ಲಿಂ_ಪಂಡಿತರು_ಈ_ಜಿಜ್ಞಾಸೆಗೆ_ನೀಡಿದ_ಉತ್ತರ. ಹಿಂದೂ ದಮ೯ದವನು ಮುಸ್ಲಿ೦ ಗೆಳೆಯರಿಗೆ ಮೆಕ್ಕಾ ಯಾತ್ರೆ ಮಾಡಿಸಬಹುದೆ? ಮುಸ್ಲಿಂ ಗೆಳೆಯ ಈ ರೀತಿ ಮೆಕ್ಕಾ ಯಾತ್ರೆ ಮಾಡಿದರೆ ಹರಾಂ ಅಂತೆ ಅಂತ ಒಂದು ಸುದ್ದಿ ನಮ್ಮ ಊರಲ್ಲಿ ಪ್ರಾರಂಭವಾಗಿತ್ತು. ಬಹುಶಃ ಇದು ಅಪರೂಪದ ಪ್ರಕರಣ ಆದ್ದರಿಂದ ಸ್ಥಳೀಯರಿಗೆ ಇದರ ಬಗ್ಗೆ ಸರಿಯಾದ ತಿಳುವಳಿಕೆ ಇರಲಿಲ್ಲ, ಜೊತೆಗೆ ಮತ್ಸರ, ಹೊಟ್ಟೆಕಿಚ್ಚು ಬೇರೆ ಸೇರಿದ್ದರಿಂದ ಮೆಕ್ಕಾ ಯಾತ್ರೆಗೆ ತಯಾರಿ ನಡೆಸಿದವರಿಗೆ ಒಂದು ರೀತಿ ಕಿರಿಕಿರಿ ಆದರೆ, ಮೆಕ್ಕಾ ಯಾತ್ರೆ ಮಾಡಿಸಲು ಹೊರಟ ಹಿಂದೂ ದಮಿ೯ಯನಿಗೆ ಹಿಂದಿನಿಂದ ಹೋಗಿ ಹೋಗಿ ಸಾಬರಿಗೆ ಮೆಕ್ಕಾ ಕಳಿಸಲು ಅವನಿಗೆ ಬುದ್ಧಿ ಇಲ್ಲ ಅಂತ ಕುಹಕ ಬೇರೆ. ಇದು ನಾನೂ ಮತ್ತು ನನ್ನ ಹಿರಿಯ ಮಿತ್ರರಾದ ಗನ್ನಿ ಸಾಹೇಬರು 2007 ರಲ್ಲಿ ಅನುಭವಿಸಿದ ಪ್ರಕರಣವಿದು, ಇದಕ್ಕೆ ಒಂದು ಸಕಾರಣ ಇತ್ತು ಮತ್ತು ನಮ್ಮುರ ದೇವಸ್ಥಾನದಲ್ಲಿ ನಾನು ಗನ್ನಿಸಾಬರಿಗೆ ಒಂದು ಮಾತು ಕೊಟ್ಟಿದ್ದೆ. 2006ರಲ್ಲಿ ಶ...