ಭಾಗ_18.
ಘಟ್ಟಕ್ಕೆ_ಕರಾವಳಿಗರ_ವಲಸೆ.
ಮುಂಬೈ_ಭೂಗತ_ಜಗತ್ತಿನಲ್ಲಿ_ಕರಾವಳಿ_ವಲಸಿಗರು...
ನನ್ನ ಒಂದು ಸಣ್ಣ ಲೇಖನ ಘಟ್ಟಕ್ಕೆ ವಲಸೆ ಬಂದ ಬಗ್ಗೆ ಪೇಸ್ ಬುಕ್ ನಲ್ಲಿ ಬರೆದದ್ದು ಇಷ್ಟು ದೀರ್ಘ ಲೇಖನ ಸರಣಿ ಆಗುತ್ತದೆಂದು ಅನ್ನಿಸಿರಲಿಲ್ಲ.
ನಾನು ಈ ರೀತಿ ಘಟ್ಟಕ್ಕೆ 1800 ರ ಅಂತ್ಯಕ್ಕೆ ವಲಸೆ ಬಂದು ಮಲೆನಾಡಿನಲ್ಲಿ ನೆಲೆಸಿದ ಕುಟುಂಬಕ್ಕೆ ಸೇರಿದವನು ಆದ್ದರಿಂದ ಇದನ್ನು ಬರೆಯಲು ಹೆಚ್ಚು ಆಸಕ್ತಿ ಆಯಿತು.
1850 ರಿಂದ 1950 ರ #ಋತುಮಾನದ_ವಲಸೆ ಅಂದರೆ ಕರಾವಳಿಯಲ್ಲಿ ಅವರ ಕೃಷಿ ಕೆಲಸ ಮುಗಿದ ನಂತರ ಪಶ್ಚಿಮ ಘಟ್ಟದ ಮೇಲಿನ ತೋಟಗಳ ಕೆಲಸಕ್ಕೆ ಹೋಗಿ ದುಡಿದು ಮತ್ತೆ ಮುಂಗಾರು ಪ್ರಾರಂಭ ಆದಾಗ ಕರಾವಳಿಗೆ ವಾಪಾಸಾಗುತ್ತಿದ್ದ ಕಾಲಮಾನದ ವಲಸೆ ಒಂದು ರೀತಿ ಆಗಿದ್ದರೆ ಅದಕ್ಕೂ ಹಿಂದಿನ ರಾಜರ ಕಾಲದಲ್ಲಿನ ವಿವಿದ ಬೇರೆ ಕಾರಣದ ವಲಸೆಗಳು, ಕಳೆದ ಶತಮಾನದ ವಿವಿದ ದಶಕದಲ್ಲಿ ಮುಂಬೈಗೆ ಉದ್ಯೋಗ ಅರಸಿ ಹೋದ ವಲಸೆಗಳೂ ವಿಶೇಷವೇ.
ಮುಂಬೈಗೆ ಕರಾವಳಿಗರ ವಲಸೆ ವಿಶೇಷವಾಗಿ ಕೇರಳ ಕರಾವಳಿಯಿಂದ ಮಹಾರಾಷ್ಟ್ರದ #ಕೊಂಕಣ್ (ರತ್ನಗಿರಿ ತನಕ) ವಲಸೆ ಹೋದವರು ಅನುಭವಿಸಿದ ಕಷ್ಟ ಕಾರ್ಪಣ್ಯಗಳು, ಅವಮಾನಗಳು ಭಾಷಾ ಚಳವಳಿ ಹೆಸರಲ್ಲಿ ಬೃಹದಾಕರ ತಳೆದು ನಂತರ ಅದಕ್ಕೆ ವಲಸಿಗರ ಸ್ವಾಭಿಮಾನದ ಪ್ರತಿಕೋದ ಮುಂಬೈ ಅಂಡರ್ ವರ್ಲ್ಡ್ ರೂಪ ತಳೆಯಿತು.
ಮುಂಬೈ ಭೂಗತ ಲೋಕದ ಇತಿಹಾಸವನ್ನು ಗಮನಿಸಿದರೆ ಅದರಲ್ಲಿ ಕರಾವಳಿ ಕರ್ನಾಟಕದ (ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ) ವಲಸಿಗರ ಪಾತ್ರ ಅತ್ಯಂತ ವಿಶಿಷ್ಟವಾದದ್ದು ಮತ್ತು ಕರಾಳವಾದದ್ದು.
1960 ರಿಂದ 2000ದ ದಶಕದವರೆಗೆ ಮುಂಬೈ ಮಹಾನಗರವನ್ನು ನಡುಗಿಸಿದ ಭೂಗತ ಜಗತ್ತಿನ ಕಥೆಗಳಲ್ಲಿ ಕರಾವಳಿಯ ಯುವಕರು ಸಾಮಾನ್ಯ ಹೋಟೆಲ್ ಕಾರ್ಮಿಕರಾಗಿ ಹೋಗಿ ನಂತರ ಡಾನ್‌ಗಳಾಗಿ, ಶಾರ್ಪ್ ಶೂಟರ್‌ಗಳಾಗಿ ಬೆಳೆದ ಇತಿಹಾಸವಿದೆ.
ಇದರ ಒಂದು ಸವಿವರವಾದ ಚಿತ್ರಣ ಇಲ್ಲಿದೆ,ವಲಸೆಯ ಅನಿವಾರ್ಯತೆ ಮತ್ತು ಕ್ರಿಮಿನಲ್ ಲೋಕದ ನಂಟಿನ ಚರಿತ್ರೆ ಇದೆ.
1950- ಮತ್ತು 1960 ದಶಕದಲ್ಲಿ ಕರಾವಳಿಯಲ್ಲಿ ತೀವ್ರ ಬಡತನವಿತ್ತು,ಹೊಟ್ಟೆಪಾಡಿಗಾಗಿ ಸಾವಿರಾರು ಯುವಕರು ಮುಂಬೈಗೆ ವಲಸೆ ಹೋಗಿ ಅಲ್ಲಿನ ಶೆಟ್ಟಿ ಹೋಟೆಲ್‌ಗಳು ಹಾಗೂ ಉಡುಪಿ ಕೆಫೆಗಳಲ್ಲಿ ಕೆಲಸಕ್ಕೆ ಸೇರಿಕೊಂಡರು.
ಮುಂಬೈನ ಸ್ಥಳೀಯ ದಾದಾಗಳು (ಸ್ಥಳೀಯ ಗೂಂಡಾಗಳು) ಕನ್ನಡಿಗರ ಹೋಟೆಲ್‌ಗಳಿಗೆ ಬಂದು ಗಲಾಟೆ ಮಾಡುವುದು, ಹಫ್ತಾ (ಹಣ) ವಸೂಲಿ ಮಾಡುವುದು ಸಾಮಾನ್ಯ ಕಷ್ಟವಾಗಿತ್ತು.
ಇದರಿಂದ ತಮ್ಮ ಹೋಟೆಲ್‌ಗಳನ್ನು ಮತ್ತು ಸಮುದಾಯವನ್ನು ರಕ್ಷಿಸಿಕೊಳ್ಳಲು ಕರಾವಳಿಯ ಯುವಕರೇ ಗುಂಪುಗಳನ್ನು ಕಟ್ಟಿಕೊಳ್ಳಲಾರಂಭಿಸಿದರು
ಇದು ಮುಂದೆ ಭೂಗತ ಲೋಕಕ್ಕೆ ದಾರಿಯಾಯಿತು.
ಮುಂಬೈ ಅಂಡರ್‌ವರ್ಲ್ಡ್ ಇತಿಹಾಸದಲ್ಲಿ ಕರಾವಳಿ ಮೂಲದ ಹಲವು ಹೆಸರುಗಳು ಇಂದಿಗೂ ಸದ್ದು ಮಾಡುತ್ತವೆ.
#ದಾವೂದ್_ಇಬ್ರಾಹಿಂ ಕೂಡ ಮಹಾರಾಷ್ಟ್ರದ ಕರಾವಳಿ ಕೊಂಕಣ್ ನಿಂದ ವಲಸೆ ಹೋದ ಕುಟುಂಬದವರು.
#ಹಾಜಿ_ಮಸ್ತಾನ್ (ಮಸ್ತಾನ್ ಹೈದರ್ ಮಿರ್ಜಾ) ಮೂಲತಃ ತಮಿಳುನಾಡಿನವನಾದರೂ, ಮುಂಬೈ ಡಾಕ್ಸ್‌ಗಳಲ್ಲಿ (ಬಂದರು) ಕೆಲಸ ಮಾಡುವಾಗ ಇವರಿಗೆ ಆಸರೆಯಾಗಿದ್ದು ಮತ್ತು ಈತನ ಬಲಗೈ ಬಂಟರಾಗಿದ್ದವರು ಕರಾವಳಿಯ ವಲಸಿಗರು.
#ವರದರಾಜನ್_ಮೊದಲಿಯಾರ್ (ವರದಾ ಭಾಯ್)ತಮಿಳುನಾಡು ಮೂಲದ ಇವರ ಸಾಮ್ರಾಜ್ಯದಲ್ಲಿ ಕರಾವಳಿಯ ಯುವಕರು ಭದ್ರಕೋಟೆಯಾಗಿದ್ದರು.
#ಶರದ್_ಶೆಟ್ಟಿ (ಅಣ್ಣಾ) ಕರಾವಳಿ ಮೂಲದ ಇವರು ದುಬೈ ಮತ್ತು ಮುಂಬೈನಲ್ಲಿ ದಾವೂದ್ ಇಬ್ರಾಹಿಂನ D-Company ಅತ್ಯಂತ ನಿಕಟವರ್ತಿ ಹಾಗೂ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಪ್ರಮುಖ ಸೂತ್ರಧಾರಿಯಾಗಿದ್ದರು.
#ಸದಾನಂದ_ಶೆಟ್ಟಿ (ಸಾದು ಶೆಟ್ಟಿ) ಮುಂಬೈನ ಕುಖ್ಯಾತ ಛೋಟಾ ರಾಜನ್ ಗ್ಯಾಂಗ್‌ನಲ್ಲಿದ್ದ ಇವರು ಮುಂಬೈ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗುವ ಮುನ್ನ ಭೂಗತ ಲೋಕದಲ್ಲಿ ಭೀತಿ ಸೃಷ್ಟಿಸಿದ್ದರು .
'ಶಾರ್ಪ್ ಶೂಟರ್'ಗಳಾಗಿ ಕರಾವಳಿಯ ಯುವಕರು 90ರ ದಶಕದಲ್ಲಿ ಮುಂಬೈ ಭೂಗತ ಲೋಕವು ಗ್ಯಾಂಗ್ ವಾರ್ ಮತ್ತು ಸುಲಿಗೆಯ ಉತ್ತುಂಗದಲ್ಲಿದ್ದರು ಆಗ ಕರಾವಳಿಯ ವಲಸಿಗ ಯುವಕರನ್ನು ದಾವೂದ್ ಇಬ್ರಾಹಿಂ ಮತ್ತು ಛೋಟಾ ರಾಜನ್ ತಮ್ಮ ವೈಯಕ್ತಿಕ ಸೈನಿಕರಂತೆ ಬಳಸಿಕೊಂಡರು ಇದಕ್ಕೆ ಪ್ರಮುಖ ಕಾರಣ ಕರಾವಳಿಯ ಯುವಕರಲ್ಲಿದ್ದ ನಿಷ್ಠೆ ಮತ್ತು ನಂಬಿಕೆ.
#ರವಿ_ಪೂಜಾರಿ ಉಡುಪಿ ಮೂಲದ ಇವರು ಮುಂಬೈನಲ್ಲಿ ಛೋಟಾ ರಾಜನ್ ಜೊತೆ ಗುರುತಿಸಿಕೊಂಡು ನಂತರ ತಮ್ಮದೇ ಆದ ಪ್ರತ್ಯೇಕ ಗ್ಯಾಂಗ್ ಕಟ್ಟಿದರು.
ಬಾಲಿವುಡ್ ನಟರು, ಬಿಲ್ಡರ್‌ಗಳು ಹಾಗೂ ಉದ್ಯಮಿಗಳಿಗೆ ಬೆದರಿಕೆ ಕರೆಗಳನ್ನು ಹಾಕಿ ಹಣ ವಸೂಲಿ ಮಾಡುತ್ತಿದ್ದ ಇವರನ್ನ ಇತ್ತೀಚಿನ ವರ್ಷಗಳಲ್ಲಿ ವಿದೇಶದಿಂದ ಭಾರತಕ್ಕೆ ಹಸ್ತಾಂತರಿಸಲಾಯಿತು.
#ಹೇಮಂತ್_ಪೂಜಾರಿ ಮತ್ತು #ಬಂಟಿ_ಪಾಂಡೆ ಇವರು ಮುಂಬೈನಲ್ಲಿ ಬಿಲ್ಡರ್‌ಗಳನ್ನು ಟಾರ್ಗೆಟ್ ಮಾಡಿ ಕೊಲೆ ಮತ್ತು ಸುಲಿಗೆ ಪ್ರಕರಣಗಳಲ್ಲಿ ಸಕ್ರಿಯರಾಗಿದ್ದ ಕುಖ್ಯಾತ ಶಾರ್ಪ್ ಶೂಟರ್‌ಗಳಾಗಿದ್ದರು.
ಬಾರ್ ಮತ್ತು ರೆಸ್ಟೋರೆಂಟ್' ಉದ್ಯಮದಲ್ಲಿನ ಕರಾವಳಿಗರ ಕರಾಳ ಮುಖವೂ ಇಲ್ಲಿ ಉಲ್ಲೇಖಿಸಲೇ ಬೇಕು.
ಕರಾವಳಿಗರು ಮುಂಬೈನಲ್ಲಿ ಹೋಟೆಲ್ ಉದ್ಯಮದಲ್ಲಿ ಯಶಸ್ವಿಯಾದಂತೆ 1980 ಮತ್ತು 1990ರ ದಶಕದಲ್ಲಿ ಮುಂಬೈನ ಡ್ಯಾನ್ಸ್ ಬಾರ್ ಮತ್ತು ನೈಟ್ ಕ್ಲಬ್‌ಗಳ ಉದ್ಯಮವೂ ಕರಾವಳಿಯ ಉದ್ಯಮಿಗಳ ಕೈಸೇರಿತು.
ಬ್ಲ್ಯಾಕ್ ಮನಿ ಮತ್ತು ಅಂಡರ್‌ವರ್ಲ್ಡ್ ಲಿಂಕ್ ಗೆ ಕಾರಣವಾದ ಈ ಡ್ಯಾನ್ಸ್ ಬಾರ್‌ಗಳು ಭೂಗತ ಲೋಕದ ಡಾನ್‌ಗಳು, ಶಾರ್ಪ್ ಶೂಟರ್‌ಗಳು ಭೇಟಿಯಾಗುವ ಮತ್ತು ಅಕ್ರಮ ಹಣವನ್ನು ಹೂಡಿಕೆ ಮಾಡುವ ತಾಣಗಳಾದವು.
ಅನೇಕ ಕರಾವಳಿ ಮೂಲದ ಬಾರ್ ಮಾಲೀಕರು ಅನಿವಾರ್ಯವಾಗಿ ಅಥವಾ ಆಸೆಗೆ ಬಿದ್ದು ಭೂಗತ ಲೋಕಕ್ಕೆ ಹಣಕಾಸಿನ ನೆರವು ನೀಡುತ್ತಿದ್ದರು, ಕೆಲವೊಮ್ಮೆ ಗ್ಯಾಂಗ್ ವಾರ್‌ಗಳಿಗೆ ಬಲಿಯಾಗುತ್ತಿದ್ದರು.
90 ರ ದಶಕದ ಕೊನೆಯಲ್ಲಿ ಮುಂಬೈ ಪೊಲೀಸರು ಭೂಗತ ಲೋಕವನ್ನು ಮುಗಿಸಲು '#ಎನ್‌ಕೌಂಟರ್_ಸ್ಪೆಷಲಿಸ್ಟ್' ಪಡೆಗಳನ್ನು ರಚಿಸಿದರು.
ವಿಶೇಷವೆಂದರೆ ಭೂಗತ ಲೋಕದಲ್ಲೂ ಕರಾವಳಿಯವರಿದ್ದರೆ ಅವರನ್ನು ಮಟ್ಟಹಾಕಿದ ಮುಂಬೈ ಪೊಲೀಸ್ ಪಡೆಯ ಪ್ರಮುಖ ಎನ್‌ಕೌಂಟರ್ ಸ್ಪೆಷಲಿಸ್ಟ್‌ಗಳೂ ಕರಾವಳಿ ಮೂಲದವರೇ ಆಗಿದ್ದರು! ಉದಾಹರಣೆಗೆ ಕುಖ್ಯಾತ ಪೊಲೀಸ್ ಅಧಿಕಾರಿ #ದಯಾ_ನಾಯಕ್ (ಮೂಲತಃ ಉಡುಪಿ ಜಿಲ್ಲೆಯ ಎಣ್ಣೆಹೊಳೆ) ಮುಂಬೈ ಅಂಡರ್‌ವರ್ಲ್ಡ್‌ನ 80ಕ್ಕೂ ಹೆಚ್ಚು ಅಪರಾಧಿಗಳನ್ನು ಎನ್‌ಕೌಂಟರ್ ಮಾಡಿ ಜಗತ್ಪ್ರಸಿದ್ಧರಾದರು.
ಇವರ ಬದುಕಿನ ಆಧಾರದ ಮೇಲೆ ಬಾಲಿವುಡ್‌ನಲ್ಲಿ ಸಿನಿಮಾಗಳೂ ಬಂದವು.
ಮುಂಬೈಗೆ ವಲಸೆ ಹೋದ ಶೇಕಡಾ 99ರಷ್ಟು ಕರಾವಳಿಗರು ಕಷ್ಟಪಟ್ಟು, ಪ್ರಾಮಾಣಿಕವಾಗಿ ದುಡಿದು ಹೋಟೆಲ್, ಬ್ಯಾಂಕಿಂಗ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದರು.
ಆದರೆ ಹೊಟ್ಟೆಪಾಡಿನ ಅನಿವಾರ್ಯತೆ, ಹಣದ ವ್ಯಾಮೋಹ ಮತ್ತು ಮುಂಬೈನ ಅಂದಿನ ಕರಾಳ ಪರಿಸ್ಥಿತಿಗೆ ಸಿಲುಕಿದ ಶೇಕಡಾ 1ರಷ್ಟು ಯುವಕರು ಹಾದಿ ತಪ್ಪಿ ಮುಂಬೈ ಭೂಗತ ಲೋಕದ ಕರಾಳ ಇತಿಹಾಸದ ಪುಟಗಳನ್ನು ಬರೆದರು.
#ಮುಂದಿನ_ಭಾಗದಲ್ಲಿ ಬಾಳಾ ಠಾಕ್ರೆ ಅವರ ಭಾಷಾ ಚಳವಳಿಗಳು ವಲಸಿಗರ ಮೇಲಿನ ಪ್ರಹಾರಗಳು ನೋಡಿ.
#immigration #coastal #westernghats #mumbai #mangalore #underworld #encounter #dayanyak
#Hafta #kundapura #DawoodIbrahim #hazimasthan #varadarajmodaliyar #sharathshetty
Comments
Post a Comment