Skip to main content

4175.ಭಾಗ_6_ಮಲೆನಾಡು_ಗಿಡ್ಡ_ತಳಿ_ಸಂರಕ್ಷಣೆಪಾದರ್_ಜೋಸ್_ಸಂದರ್ಶನ.ತುಮರಿಯ_ನಡುಗಡ್ಡೆಯ_ಸಾಹಸ.


ಭಾಗ_6_ಮಲೆನಾಡು_ಗಿಡ್ಡ_ತಳಿ_ಸಂರಕ್ಷಣೆ
ಪಾದರ್_ಜೋಸ್_ಸಂದರ್ಶನ.
ತುಮರಿಯ_ನಡುಗಡ್ಡೆಯ_ಸಾಹಸ.

 ಮಲೆನಾಡು ಗಿಡ್ಡ ಗೋವಿನ ಬಗ್ಗೆ ಆಸಕ್ತರಾದವರು ಈ ಸಂದರ್ಶನ ಪೂರ್ತಿ ನೋಡಿ ನಿಮ್ಮ ಆಸಕ್ತ ಗೆಳೆಯರಿಗೆ ಶೇರ್ ಮಾಡಿ.

ಪಾದರ್ ಜೋಸ್ ಹುಟ್ಟಿದ್ದು ಕೇರಳದಲ್ಲಿ, ಉನ್ನತ ಶಿಕ್ಷಣ ರೋಮ್ ನ ವ್ಯಾಟಿಕನ್ ನಗರದಲ್ಲಿ ಅಲ್ಲಿ ಅವರ ಮುಖ್ಯ ವಿಷಯ ಮಹಾತ್ಮಾ ಗಾಂಧಿ ಮತ್ತು ಕೃಷಿ ನಂತರ ಪೂರ್ಣ ಸೇವೆ ಕರ್ನಾಟಕದಲ್ಲಿ.

  ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂನ #ಮುಂಬಾಳಿನ_ಗೋಕುಲ್_ಪಾರಂ ಸ್ಥಾಪಿಸಿ ಅಲ್ಲಿ ಅವರು ಮಾಡಿದ ಸಮಾಜ ಮುಖಿ ಕೆಲಸ ಒಂದೇ ಎರಡೇ...

  ಇದರಲ್ಲಿ ಇವರ #ಮಲೆನಾಡು_ಗಿಡ್ಡ ತಳಿ ಸಂರಕ್ಷಣೆ ಕೆಲಸ ವಿಶೇಷವಾಗಿದ್ದು.

   ಶರಾವತಿ ನದಿಗೆ ಹಿರೇಬಾಸ್ಕರ ಮತ್ತು ಲಿಂಗನಮಕ್ಕಿಯಲ್ಲಿ ಅಣೆಕಟ್ಟು ನಿರ್ಮಿಸಿದ್ದರಿಂದ ತುಮರಿ ಭಾಗದಲ್ಲಿ ಅನೇಕ ನಡುಗಡ್ಡೆ ದ್ವೀಪಗಳಾಗಿದೆ.

    ಸ್ಥಳೀಯ ಮುಳುಗಡೆ ಸಂತ್ರಸ್ಥರು ಸ್ಥಳಾಂತರವಾಗುವಾಗ ಅವರ ಅನೇಕ ಜಾನುವಾರುಗಳು ಅಲ್ಲೇ ಉಳಿದು ಈ ದ್ವೀಪಗಳಲ್ಲಿ ನೆಲೆಸಿವೆ ಅವು ಒಂದು ರೀತಿ ಕಾಡಿನ ಪ್ರಾಣಿಗಳಂತೆ ಮನುಷ್ಯರಿಂದ ಅಂತರ ಕಾಪಾಡಿಕೊಂಡಿದೆ.

   ಈ ಮಲೆನಾಡು ಗಿಡ್ಡ ತಳಿ ಶುದ್ದ ಮಲೆನಾಡು ಗಿಡ್ಕದ ಜೀನ್ಸ್ ಆಗಿದೆ ಇದನ್ನು ಸಂರಕ್ಷಿಸಲು ಪಾದರ್ ಜೋಸ್ ಪ್ರಯತ್ನದಲ್ಲಿ ವಿಪಲರಾದ ಬಗ್ಗೆ ಈ ಸಂದರ್ಶನದಲ್ಲಿ ನೆನಪು ಮಾಡಿದ್ದಾರೆ.

  ಕರ್ನಾಟಕದ ಮಲೆನಾಡು ಭಾಗದ ವಿಶಿಷ್ಟ ದೇಸಿ ಹಸುವಿನ ತಳಿಯಾದ ಮಲೆನಾಡು ಗಿಡ್ಡದ ಜೀನ್‌ಗಳ (ತಳಿ ವೈವಿಧ್ಯತೆಯ) ಸಂರಕ್ಷಣೆ ಪರಿಸರ ಸಮತೋಲನ ಮತ್ತು ಸುಸ್ಥಿರ ಕೃಷಿಗೆ ಅತ್ಯಂತ ಮಹತ್ವದ್ದಾಗಿದೆ.

  ​ಮಲೆನಾಡು ಗಿಡ್ಡದ ಜೀನ್ಸ್ ಸಂರಕ್ಷಣೆಯ ಮಹತ್ವ
​ರೋಗನಿರೋಧಕ ಶಕ್ತಿ,ಈ ತಳಿಯು ಕಾಲುಬಾಯಿ ರೋಗ, ಉಣ್ಣೆ ರೋಗ ಹಾಗೂ ಇತರ ಉಷ್ಣವಲಯದ ರೋಗಗಳಿಗೆ ನೈಸರ್ಗಿಕ ಪ್ರತಿರೋಧ ಶಕ್ತಿ ಹೊಂದಿದೆ.

  ​ಹವಾಮಾನ ಸಹಿಷ್ಣುತೆ,ಪಶ್ಚಿಮ ಘಟ್ಟಗಳ ವಿಪರೀತ ಮಳೆ, ಆರ್ದ್ರತೆ ಮತ್ತು ಕಡಿದಾದ ಬೆಟ್ಟಗುಡ್ಡಗಳ ಪ್ರದೇಶಗಳಿಗೆ ಹೊಂದಿಕೊಳ್ಳುವ ಅಪರೂಪದ ತಳಿ ಗುಣಗಳನ್ನು ಹೊಂದಿದೆ.

  ​ಕಡಿಮೆ ಖರ್ಚಿನ ನಿರ್ವಹಣೆ, ಸಾಂಪ್ರದಾಯಿಕ ಮೇವು, ಒಣಹುಲ್ಲು ಮತ್ತು ಕಾಡಿನ ಹುಲ್ಲನ್ನು ತಿಂದು ಉತ್ತಮ ಗುಣಮಟ್ಟದ ಎ2 (A2) ಹಾಲು ನೀಡಬಲ್ಲ ಸಾಮರ್ಥ್ಯ.
​ನೈಸರ್ಗಿಕ ಕೃಷಿಗೆ ಪೂರಕ: ಈ ತಳಿಯ ಸಗಣಿ ಮತ್ತು ಗಂಜಲದಲ್ಲಿ ಜೈವಿಕ ಸೂಕ್ಷ್ಮಜೀವಿಗಳು ಸಮೃದ್ಧವಾಗಿದ್ದು, ಜೀವಾಮೃತ ಮತ್ತು ಸಾವಯವ ಕೃಷಿಗೆ ಅತ್ಯುತ್ತಮ.

  ​ತಳಿ ಸಂರಕ್ಷಣೆಯ ಪ್ರಮುಖ ವಿಧಾನಗಳು ​ತಳಿ ಶುದ್ಧತೆ ಕಾಪಾಡುವುದು (In-situ Conservation)
​ಅಡ್ಡತಳಿ (ಕ್ರಾಸ್ ಬ್ರೀಡಿಂಗ್) ನಿಯಂತ್ರಣ,ಜರ್ಸಿ ಅಥವಾ ಎಚ್.ಎಫ್ ಮುಂತಾದ ವಿದೇಶಿ ತಳಿಗಳೊಂದಿಗೆ ಮಿಶ್ರತಳಿ ಮಾಡುವುದನ್ನು ತಪ್ಪಿಸಿ, ಶುದ್ಧ ಮಲೆನಾಡು ಗಿಡ್ಡ ಹೋರಿಗಳಿಂದಲೇ ಗರ್ಭಧಾರಣೆ ಮಾಡಿಸುವುದು.

  ​ಆಯ್ದ ಸಂತಾನೋತ್ಪತ್ತಿ (Selective Breeding), ಅತ್ಯುತ್ತಮ ತಳಿ ಲಕ್ಷಣಗಳಿರುವ ಗಿಡ್ಡ ಹೋರಿ ಮತ್ತು ಹಸುಗಳನ್ನು ಗುರುತಿಸಿ ಸಂತತಿ ಮುಂದುವರಿಸುವುದು.

​ವೈಜ್ಞಾನಿಕ ಜೀನ್ ಬ್ಯಾಂಕಿಂಗ್ (Ex-situ Conservation)
​ವೀರ್ಯಾಣು ಮತ್ತು ಭ್ರೂಣ ಸಂಗ್ರಹ (Cryopreservation), ಶುದ್ಧ ತಳಿಯ ಮಲೆನಾಡು ಗಿಡ್ಡ ಹೋರಿಗಳ ವೀರ್ಯಾಣು (semen) ಮತ್ತು ಭ್ರೂಣಗಳನ್ನು ತೀಕ್ಷ್ಣ ಶೀತಾಗಾರಗಳಲ್ಲಿ (Liquid Nitrogen) ಸಂರಕ್ಷಿಸಿಡುವುದು.

  ​ಡಿಎನ್‌ಎ ಪ್ರೊಫೈಲಿಂಗ್, ತಳಿಯ ಜೀನ್ ನಕ್ಷೆ ಸಿದ್ಧಪಡಿಸಿ, ಅದರ ವಿಶಿಷ್ಟ ರೋಗನಿರೋಧಕ ಮತ್ತು ಹಾಲಿನ ಗುಣಮಟ್ಟದ ಜೀನ್‌ಗಳನ್ನು ದಾಖಲಿಸುವುದು.
​ರೈತರಿಗೆ ಪ್ರೋತ್ಸಾಹ ಮತ್ತು ಜಾಗೃತಿ ​ಈ ಹಸುಗಳನ್ನು ಸಾಕುವ ರೈತರಿಗೆ ಸ್ಥಳೀಯ ಪಶುಸಂಗೋಪನಾ ಇಲಾಖೆ ಹಾಗೂ ಸಂಶೋಧನಾ ಕೇಂದ್ರಗಳಿಂದ ಪ್ರೋತ್ಸಾಹಧನ ಮತ್ತು ತಾಂತ್ರಿಕ ನೆರವು ನೀಡುವುದು.

  ​ಎ2 ಹಾಲು, ತುಪ್ಪ ಹಾಗೂ ಗೋ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಮತ್ತು ಬೆಂಬಲ ಬೆಲೆ ಒದಗಿಸುವುದು.

  ​ಮಲೆನಾಡು ಗಿಡ್ಡದ ಜೀನ್ ಸಂರಕ್ಷಣೆಯು ಸ್ಥಳೀಯ ಜೀವವೈವಿಧ್ಯವನ್ನು ಉಳಿಸುವುದರ ಜೊತೆಗೆ ಭವಿಷ್ಯದ ಹವಾಮಾನ ಬದಲಾವಣೆಗಳನ್ನು ಎದುರಿಸಲು ಪ್ರಬಲ ಜೈವಿಕ ಸಂಪನ್ಮೂಲವಾಗಿದೆ.

   ಈ ಸಂದರ್ಶನ ನೋಡಿದವರು ನಿಮ್ಮ ಅಭಿಪ್ರಾಯ ದಾಖಲಿಸಲು ಮರೆಯಬೇಡಿ.

#veternery #tumari #josfather #gokulfarm #mumbalu #anandapuram #sagar #shivamogga #kerala #cristianchurch

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...