ಪಂಚಮುಖಿ ಗಾಯಿತ್ರಿ ಗಣಪತಿ ಆಂಜನೇಯ ಕ್ಷೇತ್ರ ಮರೀಲು ಪುತ್ತೂರಿನ ದೇವಾಲಯ ನಿಮಿ೯ಸಿರುವ ಖ್ಯಾತ ಜೋತಿಷಿ ದೇವರ ಆರಾದಕ ನರಸಿಂಹ ಶಾಸ್ತ್ರೀ ದಂಪತಿಗಳು ನನ್ನ ಇವತ್ತಿನ ಅತಿಥಿಗಳು (11- ನವೆಂಬರ್ -2020)
ಇವತ್ತಿನ ನನ್ನ ಅತಿಥಿಗಳು ಖ್ಯಾತ ಜೋತಿಷಿ ಯಕ್ಷಗಾನ ಕಲಾವಿದರಾದ ಪುತ್ತೂರು ನರಸಿಂಹ ಶಾಸ್ತ್ರೀಗಳು. ಪುತ್ತೂರಿನ ಪಂಚಮುಖಿ ಗಾಯಿತ್ರಿ ಗಣಪತಿ ಆಂಜನೇಯ ಕ್ಷೇತ್ರ ಮರೀಲು ದೇವಾಲಯ ಇವರದ್ದೇ, ಜೋತಿಷಿಗಳೂ, ಯಕ್ಷಗಾನ, ತಾಳಮದ್ದಲೆಗಳಲ್ಲಿ ಇವರ ಇಂಪಾದ ದ್ವನಿಯ ಭಾಗವತಿಕೆ ಕೂಡ ಹೆಚ್ಚು ಪ್ರಸಿದ್ದಿ ಪಡೆದಿದೆ. ನ್ಯಾಯಕ್ಕಾಗಿ ಯಾರನ್ನು ಎದುರಿಸುವ ದೈಯ೯ತೋರುವ ಇವರು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದರಲ್ಲೂ ಮುಂದು. ಓದುವ ಮತ್ತು ಬರೆಯುವ ಹವ್ಯಾಸದ ನರಸಿಂಹ ಶಾಸ್ತ್ರೀಗಳು ಎರಡು ವರ್ಷದ ಹಿಂದೆ ಈ ಮಾಗ೯ದಲ್ಲಿ ಬಂದಿದ್ದಾಗ ಬೇಟಿ ಆಗಿದ್ದರು. ಇವತ್ತು ನರಸಿಂಹ ಶಾಸ್ತ್ರೀ ದಂಪತಿಗಳು ಈ ಮಾರ್ಗದಲ್ಲಿ ಬಂದಾಗ ನನ್ನ ಹೊಸ ಕಛೇರಿಗೆ ಬೇಟಿ ನೀಡಿದ್ದರು. ನನ್ನ ನೂತನ ಉದ್ಯಮಕ್ಕೆ ಶುಭ ಹಾರೈಸಿದ ಜೋತಿಷಿ ಮತ್ತು ದೇವರ ಆರಾದಕರಾದ ಪುತ್ತೂರು ನರಸಿಂಹ ಶಾಸ್ತ್ರೀ ದಂಪತಿಗಳಿಗೆ ಗೌರವಿಸಿ ನಾನು ಬರೆದ ಬೆಸ್ತರ ರಾಣಿ ಚಂಪಕಾ ಪುಸ್ತಕ ಸಮಪ೯ಣೆ ಮಾಡಿದೆ.