Skip to main content

Posts

Showing posts with the label KELADI Ithihasa samrajya maretha Besthara Rani Champaka now translating to English

Blog number 907. ಕೆಳದಿ ಇತಿಹಾಸ ಸಾಮ್ರಾಜ್ಯ ಮರೆತ ಬೆಸ್ತರರಾಣಿ ಚಂಪಕಾ ಕಾದಂಬರಿ ಉಂಟು ಮಾಡಿದ ಸಂಚಲನೆ ನನ್ನ ನಿರೀಕ್ಷೆ ಮೀರಿದ್ದು ಈಗ ಈ ಕಾದಂಬರಿ ಇಂಗ್ಲೀಷ್ ಗೆ ಬಾಷಾಂತರ ಆಗುತ್ತದೆ.

#Manu_H_S ಬೆಂಗಳೂರಿನ ವಠಾರದ ಮನೆ ಎದುರಿಗೆ ರಂಗೋಲಿ ಬಿಡಿಸಿದ ಪೋಸ್ಟ್ ನೋಡಿ ನನ್ನ ಕಾದಂಬರಿಯ ರಂಗೋಲಿ ಪುನಃ ಇಲ್ಲಿ. ಬೆಸ್ತರ ರಾಣಿ ಚಂಪಕಾ ಎಂಬ ನನ್ನ ಕಾದಂಬರಿ ರಂಗೋಲಿ ಪ್ರವೀಣೆ ಚಂಪಕ ಮತ್ತು ಕೆಳದಿ ರಾಜ ವೆಂಕಟಪ್ಪ ನಾಯಕರ ದುರಂತ ಪ್ರೇಮ ಕಥೆ ಈ ಕಾದಂಬರಿಯಲ್ಲಿನ ಒಂದು ಅದ್ಯಾಯ ರಂಗೋಲಿ ಬಗ್ಗೆ January 16, 2021 #ರOಗೋಲಿ_ಏನಿದರ_ಮಹತ್ವ?  ನಾನು ಬರೆದಿರುವ ಬೆಸ್ತರ ರಾಣಿ ಚಂಪಕಾ ಪುಸ್ತಕದಲ್ಲಿ ಚಂಪಕಾ ರಂಗೋಲಿ ಪ್ರವೀಣೆ, ರಾಜ ವೆಂಕಟಪ್ಪ ನಾಯಕರು ಅವಳು ಬಿಡಿಸುವ ರಂಗೋಲಿ ನೋಡಿಯೇ ಅವಳ ಮೇಲೆ ವ್ಯಾಮೋಹಗೊ೦ಡು ವಿವಾಹ ಆಗುತ್ತಾರೆ. #ಈ_ಕಾದಂಬರಿಯಲ್ಲಿ_ರಂಗೋಲಿ_ಬಗ್ಗೆ_ಒಂದು_ಅಧ್ಯಾಯದಲ್ಲಿ .....   "ಚಂಪಕಾಳ ರಂಗೋಲಿಯಲ್ಲಿ ಅದೆಂತಹ ಆಕಷ೯ಣೆ ಇದೆ"  ರಂಗೋಲಿಯ ಬಗ್ಗೆ ಆಸ್ಥಾನದ ಪಂಡಿತರ ಹತ್ತಿರ ಒಮ್ಮೆ ಚಚಿ೯ಸಿದಾಗ ಅವರು ಹೇಳಿದ್ದು ಅರುಣೋದಯದಲ್ಲಿ ಲಲನೆಯರು ತಮ್ಮ ಮನೆಯಂಗಳದಲ್ಲಿ ವಿವಿದ ರೀತಿಯ ರಂಗೋಲಿಯನ್ನ ರಚಿಸುವುದು ಭಾರತೀಯ ಸಂಸ್ಕೃತಿಯ ಒಂದು ಪ್ರಾಚೀನ ಸಂಪ್ರದಾಯವಾಗಿದೆ.ರಂಗೋಲಿಯು ಶಿಲ್ಪ ಕಲೆಗೂ ಆದಾರವಾಗಿತ್ತೆ೦ದು ತಿಳಿದು ಬಂದಿದೆ, ದೇವಾಲಯಗಳಲ್ಲಿ ದಾಮಿ೯ಕ ವಿಧಿ ವಿಧಾನಗಳಲ್ಲಿ ರಂಗೋಲಿ ಬಿಡಿಸುತ್ತಾರೆ.ಇದರಲ್ಲಿ ನಾನಾ ರೀತಿಯ ಕೋನಗಳು, ಆಕೃತಿಗಳು, ಆಯತಗಳು, ಮಂಡಲಗಳು ಇದೆ. ಸಮೂಹ ಚುಕ್ಕಿಗಳನ್ನ ಹಾಕಿ ಅದಕ್ಕೆ ರೇಖೆಗಳನ್ನ ಕೂಡಿಸಿ ಪ್ರಮಾಣಬದ್ಧವಾದ ರಂಗೋಲಿ ಹಾಕಿದರೆ ಮಾತ್ರ ರಂಗೋಲಿ ಸುಂದರವಾಗುತ...