Blog number 907. ಕೆಳದಿ ಇತಿಹಾಸ ಸಾಮ್ರಾಜ್ಯ ಮರೆತ ಬೆಸ್ತರರಾಣಿ ಚಂಪಕಾ ಕಾದಂಬರಿ ಉಂಟು ಮಾಡಿದ ಸಂಚಲನೆ ನನ್ನ ನಿರೀಕ್ಷೆ ಮೀರಿದ್ದು ಈಗ ಈ ಕಾದಂಬರಿ ಇಂಗ್ಲೀಷ್ ಗೆ ಬಾಷಾಂತರ ಆಗುತ್ತದೆ.
ಬೆಸ್ತರ ರಾಣಿ ಚಂಪಕಾ ಎಂಬ ನನ್ನ ಕಾದಂಬರಿ ರಂಗೋಲಿ ಪ್ರವೀಣೆ ಚಂಪಕ ಮತ್ತು ಕೆಳದಿ ರಾಜ ವೆಂಕಟಪ್ಪ ನಾಯಕರ ದುರಂತ ಪ್ರೇಮ ಕಥೆ ಈ ಕಾದಂಬರಿಯಲ್ಲಿನ ಒಂದು ಅದ್ಯಾಯ ರಂಗೋಲಿ ಬಗ್ಗೆ
January 16, 2021
#ರOಗೋಲಿ_ಏನಿದರ_ಮಹತ್ವ?
ನಾನು ಬರೆದಿರುವ ಬೆಸ್ತರ ರಾಣಿ ಚಂಪಕಾ ಪುಸ್ತಕದಲ್ಲಿ ಚಂಪಕಾ ರಂಗೋಲಿ ಪ್ರವೀಣೆ, ರಾಜ ವೆಂಕಟಪ್ಪ ನಾಯಕರು ಅವಳು ಬಿಡಿಸುವ ರಂಗೋಲಿ ನೋಡಿಯೇ ಅವಳ ಮೇಲೆ ವ್ಯಾಮೋಹಗೊ೦ಡು ವಿವಾಹ ಆಗುತ್ತಾರೆ.
#ಈ_ಕಾದಂಬರಿಯಲ್ಲಿ_ರಂಗೋಲಿ_ಬಗ್ಗೆ_ಒಂದು_ಅಧ್ಯಾಯದಲ್ಲಿ .....
"ಚಂಪಕಾಳ ರಂಗೋಲಿಯಲ್ಲಿ ಅದೆಂತಹ ಆಕಷ೯ಣೆ ಇದೆ"
ರಂಗೋಲಿಯ ಬಗ್ಗೆ ಆಸ್ಥಾನದ ಪಂಡಿತರ ಹತ್ತಿರ ಒಮ್ಮೆ ಚಚಿ೯ಸಿದಾಗ ಅವರು ಹೇಳಿದ್ದು ಅರುಣೋದಯದಲ್ಲಿ ಲಲನೆಯರು ತಮ್ಮ ಮನೆಯಂಗಳದಲ್ಲಿ ವಿವಿದ ರೀತಿಯ ರಂಗೋಲಿಯನ್ನ ರಚಿಸುವುದು ಭಾರತೀಯ ಸಂಸ್ಕೃತಿಯ ಒಂದು ಪ್ರಾಚೀನ ಸಂಪ್ರದಾಯವಾಗಿದೆ.ರಂಗೋಲಿಯು ಶಿಲ್ಪ ಕಲೆಗೂ ಆದಾರವಾಗಿತ್ತೆ೦ದು ತಿಳಿದು ಬಂದಿದೆ, ದೇವಾಲಯಗಳಲ್ಲಿ ದಾಮಿ೯ಕ ವಿಧಿ ವಿಧಾನಗಳಲ್ಲಿ ರಂಗೋಲಿ ಬಿಡಿಸುತ್ತಾರೆ.ಇದರಲ್ಲಿ ನಾನಾ ರೀತಿಯ ಕೋನಗಳು, ಆಕೃತಿಗಳು, ಆಯತಗಳು, ಮಂಡಲಗಳು ಇದೆ. ಸಮೂಹ ಚುಕ್ಕಿಗಳನ್ನ ಹಾಕಿ ಅದಕ್ಕೆ ರೇಖೆಗಳನ್ನ ಕೂಡಿಸಿ ಪ್ರಮಾಣಬದ್ಧವಾದ ರಂಗೋಲಿ ಹಾಕಿದರೆ ಮಾತ್ರ ರಂಗೋಲಿ ಸುಂದರವಾಗುತ್ತದೆ. ರಂಗೋಲಿಯಲ್ಲಿ ಆಧಿಕೃತ ಅಳತೆಗಳಿದೆ, ಈ ಕಲೆಯ ಪ್ರಾಚೀನತೆ ನಿಖರವಾಗಿ ತಿಳಿದಿಲ್ಲ, ವಿನ್ಯಾಸಗಳಂತೂ ಲೆಖ್ಖಕ್ಕೆ ಸಿಗುವುದಿಲ್ಲ.
ರಂಗೋಲಿಯು ದೇವರನ್ನ ಒಲಿಸಿಕೊಳ್ಳುವ ಒಂದು ಆರಾದನಾ ಸಂಪ್ರದಾಯವೂ ಆಗಿದೆ, ಬಣ್ಣ ಬಣ್ಣದ ಹಿಟ್ಟುಗಳಿ೦ದ, ಕಲ್ಲಿನ ಪುಡಿಗಳಿಂದ ರಂಗೋಲಿಯನ್ನ ರಂಗು ರOಗಾಗಿಸುವ ಕಲೆ ಹೆಣ್ಣು ಮಕ್ಕಳು ಕಲಿತಿದ್ದಾರೆ, ಇದಕ್ಕೆ ಗೋದಿ, ಜವೆಗೋದಿ, ಅಕ್ಕಿ ಹಿಟ್ಟು, ಕುಂಕುಮ, ಅರಿಶಿಣ ಪುಡಿ, ಶಿಲಾ ಚುಣಾ೯ ಮತ್ತು ನವರತ್ನಪುಡಿಯನ್ನ ತುಂಬಿಸುವುದು ಒಂದು ಕಲೆ. ಹೋಮ ಹವನದಲ್ಲಿ ಮದುವೆಯ ಹಸೆಮಣೆಯಲ್ಲಿ ದೇವರ ಮಂಟಪಗಳಲ್ಲಿ ಪುರೋಹಿತರು ರಂಗೋಲಿ ಬಿಡಿಸುತ್ತಾರೆ, ತಾಂತ್ರಿಕ ಪೂಜೆಯಲ್ಲಿ ಮಂಡಲಗಳನ್ನು ರಂಗೋಲಿಯಲ್ಲೇ ಬಿಡಿಸಲೇ ಬೇಕು. ಎಲ್ಲರೂ ರಂಗೋಲಿಯಲ್ಲಿ ಪರಿಣಿತರಾಗಲು ಸಾಧ್ಯವಿಲ್ಲ. ರಂಗೋಲಿ ಬಿಡಿಸುವುದರಲ್ಲಿ ತಾಳ್ಮೆ ಇರಬೇಕು, ದೂರಾಲೋಚನೆ ಇರಬೇಕು, ಕಲ್ಪನೆ ಇರಬೇಕು, ಚುರುಕುತನ ಇರಬೇಕು ಹಾಗಿದ್ದರೆ ಮಾತ್ರ ಜನಾಕಷ೯ಕ ರಂಗೋಲಿ ರಚಿಸಲು ಸಾಧ್ಯ.ಹುಟ್ಟಿನಿಂದಲೇ ಈ ಚಾಕಚಕ್ಯತೆಯನ್ನ ಕೆಲವರು ತನ್ನ ಹಿಂದಿನ ಜನ್ಮದ ಫಲವಾಗಿ ಪಡೆದಿರುತ್ತಾರೆ.
ನಿದಿ೯ಷ್ಟವಾದ ಆಳತೆಯ ಸ್ಪಷ್ಟವಾದ ಗೆರೆಗಳು ಹೊಂದಿರುವ ರಂಗೋಲಿಗೆ ಸೂಕ್ತ ಬಣ್ಣ ತುಂಬುವುದು ಕಲಾಕಾರಿಕೆ, ತಂತ್ರ ವಿದ್ಯೆಯಲ್ಲಿ ಇಂತಹ ರಂಗೋಲಿಗಳು ಸಾಧಕರ ಮನೋಸ್ಥಿಮಿತ ಉ೦ಟು ಮಾಡುತ್ತದೆ, ಅವರನ್ನ ಸಮಾದಿ ಸ್ಥಿತಿಗೂ ಒಯ್ಯುತ್ತದೆ, ತಂತ್ರ ವಿದ್ಯೆಯಿಂದ ಸಾದನೆ ಮಾಡಬೇಕಾದರೆ ಮಂಡಲಗಳು, ರಂಗೋಲಿಗಳು ಬಹುಮುಖ್ಯ.
ಸುOದರವಾದ ಸಮಯೋಚಿತವಾದ ರಂಗೋಲಿಯಿಂದ ದೇವರು ಒಲಿಯಲೇ ಬೇಕು ಹಾಗಾಗಿ ರಂಗೋಲಿ ಎಂದರೆ ಅದು ಸಣ್ಣ ಚಿತ್ರವಲ್ಲ ಎಂತಹದೊ ಒಂದು ರೇಖೆಯಲ್ಲ ಯಾವುದೋ ಒಂದು ಪುಡಿಯಲ್ಲ ಇದಕ್ಕೆ ಪ್ರಾಚಿನತೆ ಸ್ಪಶ೯ವಿದೆ, ದೈವ ಶಕ್ತಿಯ ಬಲವಿದೆ, ತಂತ್ರ ವಿದ್ಯೆಯ ಒಲವಿದೆ, ಸಂಸ್ಕೃತಿಯ ಹಿನ್ನೆಲೆಯಿದೆ, ದಾಮಿ೯ಕ ಭಾವನೆಯ ಸೆಳಕಿದೆ, ಸೌ೦ದಯ೯ದ ತಳುಕಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಹಾಗಾಗಿ ಸುಂದರವಾದ ರಂಗೋಲಿ ಬಿಡಿಸುವ ಚಂಪಕಾಳ ಮೇಲೆ ರಾಜರ ವ್ಯಾಮೋಹವೂ ಇಮ್ಮಡಿಯಾಯಿತು, ಚಂಪಕಾ ನನ್ನವಳಾಗಿರಬೇಕು ಎಂಬ ಭಾವನೆ ರಾಜರಲ್ಲಿ ಉ೦ಟಾಯಿತು.
ಹಾಗಾಗಿ ಚಂಪಕಾಳ ಬೇಟಿ ಮಾಡುವ ಗುರು ಪೂಣಿ೯ಮೆ ಎ೦ಬ ಪವಿತ್ರ ದಿನಕ್ಕಾಗಿ ರಾಜರು ಚಡಪಡಿಸಲು ಶುರು ಮಾಡಿದರು.
ಈ ಕಾದಂಬರಿ ಇಷ್ಟು ಪ್ರಸಿದ್ಧಿ ಆಗುತ್ತದೆ,ಚರ್ಚೆ ವಿಮರ್ಶೆ ಆಗುತ್ತದೆ ಅಂತ ತಿಳಿದಿರಲಿಲ್ಲ ಈ ಪುಸ್ತಕದಲ್ಲಿ ಮೊದಲ ಪುಟದಲ್ಲೇ ಚಾಪಿಸಿದ್ದೆ "ನನ್ನ ಊರಿನ ಇತಿಹಾಸದ ಈ ಕಥೆ ಜನಪದದಲ್ಲಿಯೂ ಇದೆ ಇದನ್ನು ಮುಂದಿನ ದಿನದಲ್ಲಿ ಇತಿಹಾಸ ಆಸಕ್ತರ ಗಮನ ಸೆಳೆದು ಸಂಶೋದನೆಗಳು ಆದರೆ ಮತ್ತು ಈ ಪ್ರೇಮ ಸೌದದ ಸ್ಮಾರಕ ಅಭಿವೃದ್ಧಿ ಆದರೆ ಅದಕ್ಕಿಂತ ಸಂತೋಷ ನನಗೆ ಬೇರಿಲ್ಲ" ಅಂತ ಅದರಂತೆ ಅಭಿವೃದ್ದಿ ಒಂದು ಹಂತದಲ್ಲಿ ಆಗಿದೆ ಮುಂದಿನ ಅಭಿವೃದ್ಧಿಗೆ ಪೈಪೋಟಿಯೂ ಶುರುವಾಗಿದೆ, ಕೆಲವರು ಸಂಶೋದನೆ ಕೆಲಸ ಪ್ರಾರಂಬಿಸಿದ್ದಾರೆ.
ಇನ್ನೊಂದು ಸಂತೋಷ ಎಂದರೆ ನನ್ನ ಈ ಮೊದಲ ಕಾದಂಬರಿ ಇಂಗ್ಲೀಷ್ ಗೆ ಭಾಷಾಂತರ ಆಗುತ್ತಿದೆ.
ಸಾಗರದ ರವೀಂದ್ರ ಪುಸ್ತಕಾಲಯ, ಶ್ರೀ ಟ್ರೀಡರ್ಸ್, ಶಿವಮೊಗ್ಗದ ಡಯಾನ ಬುಕ್ ಹೌಸ್, ಬೆಂಗಳೂರಿನ ಕೆಂಪೆಗೌಡ ರಸ್ತೆಯ ನವಕರ್ನಾಟಕ ಪ್ರಕಾಶನದಲ್ಲಿ ಲಭ್ಯವಿದೆ ಜೊತೆಗೆ ನನ್ನ ಎರಡನೆ ಪುಸ್ತಕ ಸಣ್ಣ ಕಥಾ ಸಂಕಲನ "ಬಿಲಾಲಿ ಬಿಲ್ಲಿ ಅಭ್ಯಂಜನ" ಕೂಡ ಲಭ್ಯವಿದೆ.
ನನ್ನ ವಾಟ್ಸಪ್ ನಂಬರ್ 9449253788 ಗೆ ವಿಳಾಸ ವಾಟ್ಸಪ್ ಮಾಡಿದರೆ ಅಂಚೆಯಲ್ಲಿ ಪುಸ್ತಕ ತಲುಪಿಸುತ್ತೇನೆ.
Comments
Post a Comment