Skip to main content

Blog number 921. ನಶ್ಯ ಎಂಬ ಹೊಗೆರಹಿತ ತಂಬಾಕಿನ ವಿಶ್ವದ ಕಥೆಗಳು, ವಷ೯ದಲ್ಲಿ ಎರಡು ಬಾರಿ ನಾನು ನಶ್ಯ ಬಳಸಲು ಕಾರಣ.

#ಮೂಗಿದ್ದವರಿಗೆ_ಮಾತ್ರ_ಶೀಥ

#ನಶ್ಯದ_ಕಥೆಗಳು

#ಸ್ತ್ರೀ_ಪುರುಷರೂ_ಸಮಾನ

#ಅರ್ಚಕರಿಗೆ_ದೇವಸ್ಥಾನದ_ಒಳಗೆ_ನಶ್ಯ_ನಿಷೇದವಿಲ್ಲ.

#ನನ್ನ_ನಶ್ಯದ_ಜುಗಲ್_ಬಂದಿ_ಕೇಳಿ.

#ಹದಿನೇಳನೇ_ಶತಮಾನದಲ್ಲಿ_ಚರ್ಚಿನಲ್ಲಿ_ನಶ್ಯಾ_ನಿಷೇದವಿತ್ತು.

  ಮೂಗಿದ್ದವರಿಗೆ ಮಾತ್ರ ಶೀಥ ಅಂದಾಗ ನಾವು ಮೂಗು ಮುರಿಯುವಂತಿಲ್ಲ ಯಾಕೆಂದರೆ ಎಲ್ಲರಿಗೂ ಮೂಗಿದೆ!.
  ವರ್ಷಕ್ಕೆರೆಡು ಸಾರಿ ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ನನಗೆ ತಂಡಿ ಶೀಥ ಆಗಿ ಮೂಗು ಕಟ್ಟುತ್ತದೆ, ಕೆಮ್ಮು, ಜ್ವರ ಕೂಡ ಆಗ ವೈದ್ಯರ ಮಾತ್ರೆ, ಶಿವಮೊಗ್ಗದ ದನ್ವಂತರಿ ಶಾಪಿನಿಂದ ಶ್ವಾಷಾಮೃತ ಸಿರಪ್, ಅಂಗಡಿಯಿಂದ ವಿಕ್ಸ್ ಮತ್ತು ವಿಶೇಷವಾಗಿ ತರಿಸುವುದು ನಶ್ಯ ಪುಡಿ.
  ತಂಡಿ ಶೀಥದ ಕನಿಷ್ಟ 7 ರಿಂದ 10 ದಿನದಲ್ಲಿ ನನಗೆ ಹೆಚ್ಚು ರಿಲೀಪ್ ಸಿಗುವುದು ಈ ನಶ್ಯ ಪುಡಿ ಎ೦ಬ ತಂಬಾಕು ರಹಿತ ಹೊಗೆಸೊಪ್ಪು ಪುಡಿಯಲ್ಲಿ.
  ನಾವು ಸಣ್ಣವರಿದ್ದಾಗ ನಮ್ಮ ಮನೆ ಸುತ್ತಲಿನ ನನ್ನ ತಾಯಿಯ ಗೆಳತಿಯರಾದ ಬಾಯಮ್ಮ೦ದಿರು ಮತ್ತು ಬೂಬಮ್ಮ೦ದಿರು ಎಲ್ಲರೂ ನಶ್ಯ ಪ್ರಿಯರು ನಮ್ಮಮ್ಮನ ಪ್ರೀತಿಯ ಸಣ್ಣ ಮಗನಾದ ನನ್ನನ್ನು ಎತ್ತಾಡುವವರೇ ಅವರೆಲ್ಲ ಹಾಗಾಗಿ ನನಗೆ ನಶ್ಯ ಬಾಲ್ಯದಿಂದಲೇ ಸುಪರಿಚಿತ.
  ಆಗ ಉತ್ಕೃಷ್ಟ ನಶ್ಯ ಪುಡಿಗಳು ಕಾರ್ಕಳದಲ್ಲಿ ತಯಾರಾಗುತ್ತಿತ್ತು ಅಲ್ಲಿಂದ ತಂದು ಮಾರಾಟ ಮಾಡುವ ಅಂಗಡಿಗಳಲ್ಲಿ ನಶ್ಯ ತೂಕ ತೊಲದಲ್ಲಿ ತೂಕಾ ಮಾಡುವ ಬಂಗಾರ ಅಳತೆ ಮಾಡುವಂತ ಸಣ್ಣ ತಕ್ಕಡಿಗಳು ಇರುತ್ತಿತ್ತು.
   70 ರ ದಶಕದಲ್ಲಿ ಆನಂದಪುರಂನ ನಶ್ಯ ಪ್ರಿಯರ ಪೆವರಿಟ್ ಅಂಗಡಿ ಕೇರಳದ ಕಾಸರಗೋಡು ಮೂಲದ ಜಲಕೃಷ್ಣಣ್ಣರ #ಕೃಷ್ಣಾ_ಸ್ಟೋರ್ ಮಾತ್ರ ಆಗಿತ್ತು, ಅವರ ಸಂಬಂದಿ ಕೊರಗಣ್ಣ ನಶ್ಯ ತೂಕ ಮಾಡಿ ಆಗಿನ ಸಿಗರೇಟು ಪ್ಯಾಕಿನ ಒಳಗಿನ ಬೆಳ್ಳಿಯಂತ ಹೊಳೆಯುವ ಬ್ಯಾಗಡಿಯ ಪೇಪರ್ ನಲ್ಲಿ ಹಾಕಿ ಪೊಟ್ಟಣ ಕಟ್ಟಿ ಬಿಳಿದಾರದಲ್ಲಿ ಕಟ್ಟಿ ಬಂಗಾರದಂತ ನಶ್ಯ ಪುಡಿ ಆರೋಮ ಗಾಳಿಯಲ್ಲಿ ಕರಗದಂತೆ ಜೋಪಾನ ಮಾಡುತ್ತಿದ್ದರು, ಅಂಗಡಿ ಮಾಲಿಕರೂ ನಶ್ಯ ಪ್ರಿಯರಾದ್ಧರಿಂದ ಈ ಅಂಗಡಿ ನಶ್ಯ ಸ್ಥಳಿಯ ನಶ್ಯ ಪ್ರಿಯರ ಅಂಗಡಿ ಆಗಿತ್ತು.
   ಆಗಿನ ಸ್ಥಳಿಯ ಪ್ರಸಿದ್ಧ ಶ್ಯಾನುಬೋಗರಾಗಿದ್ದ ನಮ್ಮ ಊರಿನ ಪ್ರಖ್ಯಾತ ಬುದ್ದಿವಂತರೆಂದು ಹೆಸರುಗಳಿಸಿದ್ದ ಗುಂಡಾಜೋಯಿಸರು ನಶ್ಯಾ ಬಳಸುವ ಪ್ರತಿಷ್ಟಿತರಾಗಿದ್ದರು, ಅವರ ಬೆಳ್ಳಿಯ ನಶ್ಯ ಕರಿಡಿಗೆ ಅವರ ಜುಬ್ಬದ ಸೈಡಿನ ಜೇಬಿಂದ ತೆಗೆದು ಅದರ ಮುಚ್ಚುಳದ ಮೇಲೆ ತೋರು ಬೆರಳಿಂದ ಸಣ್ಣಗೆ ಪ್ರೀತಿಯಿ೦ದ ತಟ್ಟುತ್ತಿದ್ದರು ನಂತರ ಗಂಬೀರವಾಗಿ ಮುಚ್ಚುಳ ತೆಗೆದು, ತಮ್ಮ ಹೆಬ್ಬೆರಳು ಮತ್ತು ಮಧ್ಯ ಬೆರಳು ಬಳಸಿ ಅವರ ಬ್ರಾಂಡಿನ ನಶ್ಯ ಪುಡಿಯ ಚಿಟಿಕೆ ಹೂವಿನಂತೆ ಎತ್ತಿ ಅವರ ಮೂಗಿನ ಹೊಳ್ಳೆಗೆ ಏರಿಸಿ ನಿದಾನ ಉಸಿರೆಳೆದು ಗಂಬೀರವಾಗಿ ಸುತ್ತಲೂ ನೋಡಿ ಇದಕ್ಕಾಗಿಯೇ ಮೀಸಲಿಟ್ಟ ಬಟ್ಟೆಯಿಂದ ಕೈ ಬೆರಳು,ಮೂಗು ಒರೆಸಿ ನಶ್ಯ ಕರಡಿ ಜೇಬಿಗೆ ಸುರಕ್ಷಿತವಾಗಿ ಸೇರಿಸಿದ ಮೇಲೆಯೇ ಅವರ ಘನ ಗಾಂಬೀಯ೯ ಮುಖದಲ್ಲಿ ನಗು ಲಾಸ್ಯವಾಡುತ್ತಿತ್ತು.
  ಉತ್ತರ ಮತ್ತು ದಕ್ಷಿಣ ಅಮೇರಿಕಾದ ಮೂಲ ನಿವಾಸಿಗಳಾದ ಇಂಡಿಯನ್ನರು ಈ ನಶ್ಯ ಪುಡಿ ಬಳಸುವ ಮೂಲ ಅನ್ನಲಾಗುತ್ತದೆ.
  1493ರಲ್ಲಿ ಕೊಲಂಬಸ್ ಎರಡನೆ ಸಮುದ್ರಯಾನದಲ್ಲಿ ಲೆಸ್ಸರ್ ಆಂಟಲೀಸ್ ನ ಟೈನೋ ಮತ್ತು ಕ್ಯಾರೀಜ್ ಜನರ ನಶ್ಯ ಬಳಕೆ ಬಗ್ಗೆ ಮೊದಲಿಗೆ ದಾಖಲಿಸಿದ್ದಾರೆ.
  17ನೇ ಶತಮಾನದಲ್ಲಿ ಪೋಪ್ ಅರ್ಬನ್ VIII ಚರ್ಚನಲ್ಲಿ ನಶ್ಯ ಬಳಕೆ ನಿಷೇದಿಸುತ್ತಾರೆ.
  18ನೇ ಶತಮಾನದಲ್ಲಿನ ಪೋಪ್ ಬೆನಡಿಕ್ಟ್ XIII ಈ ನಿಷೇದ ತೆರವು ಮಾಡುತ್ತಾರೆ ಇದಕ್ಕೆ ಕಾರಣ ಸ್ವತಃ ಬೆನಡಿಕ್ಟ್ XIII ಸ್ವತಃ ನಶ್ಯ ಪ್ರಿಯರು.
  ನಶ್ಯ ಸೇವನೆ ಸಮಾಜದ ಪ್ರತಿಷ್ಟಿತರ ಮತ್ತು ಗಣ್ಯರ ಹವ್ಯಾಸ ಎಂಬತ್ತಾಗಿರಲು ಕಾರಣ ಇದು ಹೊಗೆ ರಹಿತ ತಂಬಾಕು ಆಗಿತ್ತು ಮತ್ತು ವಿದೇಶದಲ್ಲಿ ಪುರಷರಲ್ಲಿ ಇದರ ಬಳಕೆ ಹೆಚ್ಚು.
  ವಿದೇಶದಲ್ಲಿ 31% ನಶ್ಯ ಪ್ರಿಯರಂತೆ, ಶೇಕಡಾ 75% ರಷ್ಟು ಪುಟ್ ಬಾಲ್ ಆಟಗಾರರು ಈಗಲೂ ನಶ್ಯ ಜಗಿಯುತ್ತಾರಂತೆ ಅಂದರೆ ಹಲ್ಲಿನ ಒಸಡುಗಳಿಗೆ ತಿಕ್ಕುತ್ತಾರೆ ಇದರಿಂದ ಬಾಯಿಯಲ್ಲಿ ಹೆಚ್ಚು ಲಾಲಾರಸ ಉತ್ಪಾದನೆಯಿಂದ ಅವರಿಗೆ ಆಟದಲ್ಲಿ ಹೆಚ್ಚಿನ ಉತ್ಸಾಹ ದೊರೆಯುತ್ತದೆಂಬ ನಂಬಿಕೆ ಇದೆ.
  16ನೇ ಶತಮಾನದ ಮದ್ಯದಲ್ಲಿ ಲಿಸ್ಬನ್ ದೇಶದ ಪ್ರೆಂಚ್ ರಾಯಬಾರಿ ಜೀನ್ ನಿಕೋಟ್ ನಶ್ಯ ತಲೆನೋವು, ಶೀಥಕ್ಕೆ ರಾಮಬಾಣ ಎಂಬ ಹೇಳಿಕೆ ಯುರೋಪಿನಲ್ಲಿ ನಶ್ಯ ಬಳಕೆ ಹೆಚ್ಚಲು ಕಾರಣ ಎನ್ನುತ್ತಾರೆ.
  ತಂಬಾಕು ಸೊಪ್ಪು ಕೊಳೆ ಬರೆಸಿ ಒಣಗಿಸಿ ಪುಡಿ ಮಾಡಿ ವಿವಿದ ಸುವಾಸನೆ ಸೇರಿಸಿ ಆಕರ್ಷಕ ಡಬ್ಬಿಗಳಲ್ಲಿ ಗಾಳಿಯಾಡದಂತೆ ಪ್ಯಾಕ್ ಮಾಡಿ ಮಾರಾಟ ಮಾಡುತ್ತಾರೆ, ನಶ್ಯಯದಲ್ಲಿ ನಿಕೋಟಿನ್ ಇರುವುದರಿಂದ ಇದರ ದೀರ್ಘಾವದಿ ಬಳಕೆಯಿಂದ ಇದು ಹೃದಯ ಮತ್ತು ರಕ್ತನಾಳದಲ್ಲಿ ಹಾಗು ನರ ಸಂಬಂದಿ ಕಾಯಿಲೆಗೆ ಕಾರಣ ಆಗುತ್ತದೆಂಬ ಸಂಶೋದನೆಗಳಿದ್ದರೂ ದೂಮಪಾನದಷ್ಟು ದುಷ್ಪರಿಣಾಮ ಇಲ್ಲ.
  ರಿಗ್ ಗಳಲ್ಲಿ ದೂಮಪಾನ ಮಾಡುವುದು (ಬೆಂಕಿಯ ಕಿಡಿಯಿಂದ ಪೆಟ್ರೋಲ್ ದಹಿಸುವುದರಿಂದ) ನಿಶೇದ ವಿರುವುದರಿಂದ ಅಲ್ಲಿ ನಶ್ಯ ಬಳಕೆ ಜಾಸ್ತಿ.
   ದೇವಾಲಯಗಳ ಅರ್ಚಕರು ದೇವಾಲಯದ ಒಳಗೆ ನಶ್ಯ ಬಳಸುವುದಕ್ಕೆ ಯಾವುದೇ ತಡೆ ಇಲ್ಲ.
  ಕನ್ನಡದ ಪ್ರಖ್ಯಾತ ಸಾಹಿತಿ ಕಿರಂ ನಾಗರಾಜ್ ಮತ್ತು ಹನಿಗವನಗಳ ದುಂಡಿರಾಜರೂ ನಶ್ಯ ಪ್ರಿಯರೇ.
   ನಮ್ಮ ಹಳ್ಳಿಗಳಲ್ಲಿ, ಕರಾವಳಿಗಳಲ್ಲಿ ಮಹಿಳೆಯರು ಹೆಚ್ಚು ನಶ್ಯ ಬಳಸುತ್ತಾರೆ, ಈಗಿನ ಗುಟ್ಕಾ ಕಾಲದಲ್ಲಿ ನಶ್ಯ ಬಳಕೆ ಮತ್ತು ಮಾರಾಟ ಕಡಿಮೆ ಅನ್ನಿಸುತ್ತದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...