Blog number 912. ಆನಂದಪುರಂ ಇತಿಹಾಸ - 76. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಒಂದು ಕಾಲದ ಕುಗ್ರಾಮ ಹೆಗ್ಗೋಡಿನಲ್ಲಿ ನೀನಾಸಂ, ಶಿವರಾಂ ಕಾರಂತ ರಂಗಮಂದಿರ, ಅಕ್ಷರ ಪ್ರಕಾಶನ ಸ್ಥಾಪಿಸಿ ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದ, ಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ ಕೆ.ವಿ.ಸುಬ್ಬಣ್ಣ ರಂಗಮಂದಿರ ಆನಂದಪುರಂ ಹೋಬಳಿ ಆಚಾಪುರ ಗ್ರಾಮ ಪಂಚಾಯತ್ ಮುರುಘಾಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿಮಿ೯ಸಿದ ನನ್ನ ಸಾರ್ಥಕತೆಯ ಸವಿ ನೆನಪು
#ಆನಂದಪುರಂನ_ಮುರುಘಾಮಠದ_ಸರ್ಕಾರಿ_ಶಾಲಾವರಣದಲ್ಲಿ_ಕೆ_ವಿ_ಸುಬ್ಬಣ್ಣ_ರಂಗಮಂದಿರ,
#ಏಷ್ಯಾದ_ನೊಬೆಲ್_ಪ್ರಶಸ್ತಿ_ಎನ್ನುವ_ಮ್ಯಾಗ್ಸೆಸ್ಸೆ_ಪ್ರಶಸ್ತಿ_ಪಡೆದ_ಮೊದಲ_ಕನ್ನಡಿಗ
#ಕಾಳಿದಾಸ_ಸಮ್ಮಾನ_ಕೇಂದ್ರ_ಸಾಹಿತ್ಯಅಕಾಡೆಮಿ_ಪ್ರಶಸ್ತಿ_ಸಂಗೀತ_ನಾಟಕ_ಅಕಾಡೆಮಿ_ಪ್ರಶಸ್ತಿ_ಪಡೆದ_ಸಾಗರ_ತಾಲ್ಲೂಕಿನ_ಹೆಮ್ಮೆ.
#ಪದ್ಮಶ್ರೀ_ಪ್ರಶಸ್ತಿ_ಸ್ವೀಕರಿಸದ_ಸಜ್ಜನ_ಕೆ_ವಿ_ಸುಬ್ಬಣ್ಣ.
#ನೀನಾಸಂ_ಎಂಬ_ಸಂಸ್ಥೆ_ಸಂಸ್ಥಾಪಕ
#ಜುಲೈ_16_ಕೆವಿ_ಸುಬ್ಬಣ್ಣರ_17ನೇ_ಪುಣ್ಯಸ್ಮರಣೆ.
ಕುಂಟಗೋಡು ವಿಭೂತಿ ಸುಬ್ಬಣ್ಣ ಅಂದರೆ ಕೆ.ವಿ.ಸುಬ್ಬಣ್ಣ ಸಾಹಿತ್ಯ - ನಾಟಕ - ಪ್ರಕಾಶನ - ಸಮಾಜ ಸೇವೆಯಲ್ಲಿ ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೆಗ್ಗೋಡಿನ ನೀನಾಸಂ ಸಂಸ್ಥಾಪಕರು.
ಇವರದ್ದೆ ಅಕ್ಷರ ಪ್ರಕಾಶನ ಕನ್ನಡದ ಆಯ್ದ ಪುಸ್ತಕ ಪರಿಚಯ ಮಾಡುವಂತ ಪ್ರತಿಷ್ಟಿತ ಸಂಸ್ಥೆ 1957 ರಲ್ಲಿ ಪ್ರಾರಂಭ ಆಗಿ 500 ಕ್ಕೂ ಹೆಚ್ಚು ಪುಸ್ತಕ ಮುದ್ರಿಸಿದೆ.
ಸ್ವತಃ ಸುಬ್ಬಣ್ಣರ 20ಕ್ಕೂ ಹೆಚ್ಚಿನ ಕೃತಿ ಬಿಡುಗಡೆ ಆಗಿದೆ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಇವರ ಕವಿರಾಜ ಮಾರ್ಗ ಮತ್ತು ಕನ್ನಡ ಭಾಷೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ (2003ರಲ್ಲಿ ) ಮತ್ತು 2001-2002 ರಲ್ಲಿ ಕಾಳಿದಾಸ ಸಮ್ಮಾನ ಪ್ರಶಸ್ತಿ, 1991ರಲ್ಲಿ ಏಷ್ಯಾದ ನೋಬೆಲ್ ಪ್ರಶಸ್ತಿ ಎಂದೇ ಕರೆಯುವ ಪಿಲಿಪೈನ್ ಸರ್ಕಾರ ನೀಡುವ ಪ್ರತಿಷ್ಟಿತ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರು ನಮ್ಮ ಸುಬ್ಬಣ್ಣ.
ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ಸಾಗರ ತಾಲ್ಲೂಕಿನ ವ್ಯಕ್ತಿ ಇವರು ಆದರೆ ಇವರು ಪದ್ಮಶ್ರೀ ನಿರಾಕರಿಸಿದರು.
1932 ರ ಪೆಬ್ರುವರಿ 20 ರಲ್ಲಿ ಸಾಗರ ತಾಲ್ಲೂಕಿನ ಹೆಗ್ಗೋಡು ಸಮೀಪದ ಮುಂಡಿಗೆಸರದಲ್ಲಿ ಕೆ.ವಿ.ರಾಮಪ್ಪ ಮತ್ತು ಸಾವಿತ್ರಮ್ಮ ದಂಪತಿಯ ಮಗನಾಗಿ ಹುಟ್ಟಿದ ಕೆ.ವಿ ಸುಬ್ಬಣ್ಣರ ಮನೆತನದ ಹೆಸರು ವಿಭೂತಿ ಇವರ ಪತ್ನಿ ಶೈಲಜ ಹಾಗೂ ಪುತ್ರ ಕೆ.ವಿ.ಅಕ್ಷರ.
ಗುಟ್ಕಾ ಕ್ಯಾನ್ಸರ್ ಗೆ ಕಾರಣ ಅಂತ ಗುಟ್ಕಾ ರದ್ದತಿಗೆ ಬಹಿರಂಗ ಹೇಳಿಕೆ ನೀಡಿದ ಮಲೆನಾಡ ಅಡಿಕೆ ಬೆಳೆಗಾರ ಕೆ.ವಿ.ಸುಬ್ಬಣ್ಣ.
ನೇರ ನಡೆ ನುಡಿಯ ಇವರು 1949 ರಲ್ಲಿ ಕುಗ್ರಾಮವಾದ ಹೆಗ್ಗೋಡಿನಲ್ಲಿ ನೀನಾಸಂ ಅಂದರೆ ನೀಲಕಂಠ ನಾಟಕ ಸಂಘ ಸ್ಥಾಪನೆ ಮಾಡುತ್ತಾರೆ, ಹೆಗ್ಗೋಡಿನಲ್ಲಿ ಪ್ರಖ್ಯಾತ ಸಾಹಿತಿ ಶಿವರಾಂ ಕಾರಂತ ರಂಗ ಮಂದಿರ ಸ್ಥಾಪಿಸಿದರು.
ಇಂತಹ ನನ್ನ ಸಾಗರ ತಾಲ್ಲೂಕಿನ ಪ್ರಮುಖ ವ್ಯಕ್ತಿಯಾದ ಕೆ.ವಿ.ಸುಬ್ಬಣ್ಣರ ಹೆಸರಲ್ಲಿ ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಆನಂದಪುರಂ ಹೋಬಳಿಯ ಆಚಾಪುರ ಗ್ರಾಮ ಪಂಚಾಯತನ ಮುರುಘಾಮಠದ ಸರ್ಕಾರಿ ಮಾದ್ಯಮಿಕ ಶಾಲೆಯ ಆವರಣದಲ್ಲಿ ರಂಗಮಂದಿರ ನಿರ್ಮಿಸಿದ್ದೆ.
ಇದರ ಬಗ್ಗೆ ವಿವರಿಸಲು ಹೆಗ್ಗೋಡಿನ ಸುಬ್ಬಣ್ಣರ ಮನೆಗೆ ಹೋದಾಗ ಪ್ರಾರಂಭದಲ್ಲಿ ತನ್ನ ಹೆಸರು ಇಡುವ ಬಗ್ಗೆ ಒಪ್ಪಿಗೆ ಇಲ್ಲ ಅಂದಾಗ ನಾನು "ನೀವು ಹೆಗ್ಗೋಡಿನಲ್ಲಿ ಶಿವರಾಂ ಕಾರಂತರ ಹೆಸರಿನಲ್ಲಿ ರಂಗ ಮಂದಿರ ನಾಮಕರಣಕ್ಕೆ ನೀವು ಶಿವರಾಂ ಕಾರಂತರ ಜೊತೆ ಸಂವಾದ ಮಾಡಿದ ಘಟನೆ ನಿಮ್ಮ ಪುಸ್ತಕದಲ್ಲಿ ಓದಿದೆ" ಅಂದಾಗ ಅವರು ನನ್ನ ಪುಸ್ತಕ ಓದಿನ ಹವ್ಯಾಸ ಅಭಿನಂದಿಸಿದರು.
ನಿಮ್ಮಂತಹ ಸಾದಕರು ಮುಂದಿನ ತಲೆಮಾರಿಗೆ ನೆನಪಿನಲ್ಲಿರಲು ನನ್ನ ಸಣ್ಣ ಪ್ರಯತ್ನಕ್ಕೆ ನೀವು ಒಪ್ಪಬೇಕೆಂದು ಅವರನ್ನು ಒಪ್ಪಿಸಿ ಅವರಿಂದ ಲಿಖಿತ ಅನುಮತಿ ಪತ್ರ ಪಡೆದೆ ಆದರೆ ಅವರ ಹೆಸರಿನ ರಂಗ ಮಂದಿರ ಉದ್ಘಾಟಿಸಲು ಅವರು ಮುಜುಗರದಿಂದ ಒಪ್ಪಲಿಲ್ಲ, ನಾವೆಲ್ಲ ಸೇರಿ ಅವತ್ತು ಈ ಶಾಲೆಯ ಶಿಕ್ಷಕರಾಗಿದ್ದ ಇವತ್ತಿನ ಸಾಗರ ತಾಲ್ಲೂಕಿನ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ. ಸ್ಟಾಮಿ, ಮುಖ್ಯ ಶಿಕ್ಷಕರಾದ ಗಂಗಾದರ್, ಗ್ರಾಮ ಪಂಚಾಯತ್ ಅಧ್ಯಕ್ಷ ಸಣ್ಣೀರಪ್ಪ, ಉಪಾದ್ಯಕ್ಷ ನಜೀರ್ ಖಾನ್ ಸಮ್ಮುಖದಲ್ಲಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶೇಖರ್ ಪೂಜಾರಿ ಅಧ್ಯಕ್ಷತೆಯಲ್ಲಿ ಮುರುಘರಾಜ ಮಠದ ಸ್ವಾಮೀಜಿಯವರಿಂದ ಉದ್ಘಾಟಿಸಿದೆವು.
16- ಜುಲೈ -2005 ರಲ್ಲಿ ಇಹಲೋಕ ತ್ಯಜಿಸಿದ ಕೆ.ವಿ.ಸುಬ್ಬಣ್ಣರ 17 ನೇ ಪುಣ್ಯ ತಿಥಿ ಮುಂದಿನ ಶನಿವಾರ ಹೆಗ್ಗೋಡಿನಲ್ಲಿ ಹಮ್ಮಿಕೊಂಡಿದ್ದಾರೆ, ದಿ.ಶಂಕರ್ ನಾಗ್ ದರ್ಮ ಪತ್ನಿ ಆರುಂದತಿ ನಾಗ್ ಉಪನ್ಯಾಸ ಮತ್ತು ಅವತ್ತು ಸಂಜೆ 7ಕ್ಕೆ ನಾಟಕ ಪ್ರದರ್ಶನ ಇದೆ ಎಂದು ನೀನಾಸಂ ಪ್ರಾಂಶುಪಾಲ ಗಣೇಶ್ ಹೆಗ್ಗೋಡು ಅವರ ಪೋಸ್ಟ್ ನೋಡಿದ ಮೇಲೆ ನೆನಪಾಯಿತು.
Comments
Post a Comment