Blog number 921. ಪೂರ್ಣಚಂದ್ರ ತೇಜಸ್ವಿಯವರ ಕಥೆಗಳ ಪಾತ್ರವೇ ಆಗಿದ್ದ ಅವರ ಆಪ್ತ ಬಿರಿಯಾನಿ ಕೆರಿಯಪ್ಪನವರಿಗೆ ಶ್ರದ್ಧಾಂಜಲಿಗಳು
#ಮೂಡಿಗೆರೆಯ_ಗೋಣಿಬೀಡಿನ_ನಿಡುಗೋಡಿನ_ಬಿಯಾ೯ನಿ_ಕೆರಿಯಪ್ಪ_ಮರೆಯಲುಂಟೆ.
#ತೇಜಸ್ವಿ_ಕಥೆಗಳ_ಬಿರಿಯಾನಿ_ಕೆರಿಯಪ್ಪ_ಇನ್ನಿಲ್ಲ.
#ತೇಜಸ್ವಿಯವರ_ಕಥೆಗಳಲ್ಲಿ_ಸದಾ_ನೆನಪಿನಲ್ಲಿ_ಉಳಿಯುವ_ಬಿರಿಯಾನಿ_ಕೆರಿಯಪ್ಪ.
#ಕಥೆಗಾರನ_ನಿಜಜೀವನದ_ಜೀವಂತ_ಪಾತ್ರಗಳು.
ಪೂರ್ಣಚಂದ್ರ ತೇಜಸ್ವಿಯವರ ಅಪ್ತ ಬಿರಿಯಾನಿ ಪ್ರವೀಣ ಬಿರಿಯಾನಿ ಕೆರಿಯಪ್ಪ, ತೇಜಸ್ವಿಯವರ ಕಾವಾ೯ಲೋ ಜನಪ್ರಿಯ ಕಾದಂಬರಿಯಲ್ಲಿ ಬಿರಿಯಾನಿ ಕೆರಿಯಪ್ಪರ ಪಾತ್ರ ಮತ್ತು ಸಂಬಾಷಣೆ ಈ ಕಾದಂಬರಿ ಓದಿದ್ದವರಾರು ಬಿರಿಯಾನಿ ಕೆರಿಯಪ್ಪರನ್ನು ಮರೆಯಲಾರದಂತೆ ತೇಜಸ್ವಿಯವರು ದಾಖಲಿಸಿದ್ದಾರೆ.
ಅನೇಕರು ಬಿಯಾ೯ನಿ ಕೆರಿಯಪ್ಪರನ್ನು ಸಂದರ್ಶಿಸಿ ಬರೆದ ಲೇಖನಗಳು, ಸಾಕ್ಷಾ ಚಿತ್ರಗಳೂ ಬಂದಿದೆ ಅದರಲ್ಲಿ ಕೆರಿಯಪ್ಪ ತೇಜಸ್ವಿ ಅವರ ಮದುವೆಗೆ ಬಿರಿಯಾನಿ ಮಾಡಿದ ಅನುಭವ ಹೇಳಿಕೊಂಡಿದ್ದಾರೆ ಬಹುಶಃ ಕಾದಂಬರಿಯ ಕಥಾ ಪಾತ್ರವೊಂದು ಇಷ್ಟು ಜನಪ್ರಿಯ ಆಗಿರುವುದು ಈ ಬಿರಿಯಾನಿ ಕೆರಿಯಪ್ಪರ ವಿಚಾರದಲ್ಲಿ ಮಾತ್ರ.
ಪ್ರಸಾದ ರಕ್ಷಿದಿಯವರು ಬಿರಿಯಾನಿ ಕೆರಿಯಪ್ಪನವರ ಬಗ್ಗೆ ಬರೆದ ಬ್ಲಾಗ್ ಓದಲು ಈ ಲಿಂಕ್ ಕ್ಲಿಕ್ ಮಾಡ
https://avadhimag.in/%e0%b2%a4%e0%
ತೇಜಸ್ಟಿಯವರೂ ಇಲ್ಲ ಅವರ ಶ್ರೀಮತಿ ರಾಜೇಶ್ವರಿಯವರೂ ಇಲ್ಲ ಇವತ್ತು ಬಿರಿಯಾನಿ ಕೆರಿಯಪ್ಪ ಕೂಡ ಇಹಲೋಕ ತ್ಯಜಿಸಿದ್ದಾರೆ ಆದರೆ ಪೂರ್ಣಚಂದ್ರ ತೇಜಸ್ವಿಯವರ ಕಥೆ ಕಾದಂಬರಿಗಳಿಂದ ಇವರೆಲ್ಲ ಕನ್ನಡ ಸಾಹಿತ್ಯಾಭಿಮಾನಿಗಳ ಹೃದಯದಲ್ಲಿ ಜೀವಂತ ಇದ್ದಾರೆ.
Comments
Post a Comment