#ಬ್ಲಾಸ್ಟ್_ಬೂದಿಯಲ್ಲಿ_ಮೃತ_ದೇಹ_ಒಂದು_ವರ್ಷದ_ಹಿಂದಿನ_ಶಿವಮೊಗ್ಗದ_ದುರಂತ ಸುರಕ್ಷತೆಯ ಎಲ್ಲಾ ಮಾನದಂಡಗಳನ್ನು ಗಣಿ ಮತ್ತು ಕ್ರಷರ್ ಮಾಲಿಕರು ತಪ್ಪದೇ ಅನುಸರಿಸುವ ನೈತಿಕತೆ ಕೂಡ ಕಾನೂನಿಗಿಂತ ಅವಶ್ಯ ಎಂಬ ಸ್ವಯಂ ಜಾಗೃತಿ ಕೂಡ ಅನಿವಾಯ೯. #ಶಿವಮೊಗ್ಗ_ಹುಣಸೋಡು_ಬ್ಲಾಸ್ಟ್_ವಾಸ್ತವಗಳು #ಅದಿಕೃತ_ಅನದಿಕೃತ_ಕಲ್ಲುಗಣಿ_ಸಕಾ೯ರ_ರಾಜಕೀಯ_ಪ್ರಭಾವ_ಅವಘಡ_ಪ್ರದಾನಿ_ಮೋದಿ_ಹೇಳಿಕೆ #ರಾಹುಲ್_ಗಾಂದಿ_ಸಂತಾಪ_ಮಾಜಿ_ಮುಖ್ಯಮಂತ್ರಿ_ಸಿದ್ದರಾಮಯ್ಯ_ಖಂಡನೆ_ಮುಖ್ಯಮಂತ್ರಿ_ಯಡೂರಪ್ಪ_ಸ್ಥಳಕ್ಕೆ ಹೀಗೆ ಗುರುವಾರ ರಾತ್ರಿ 10 ರಿಂದ 10- 20 PM (ದಿನಾಂಕ 21- ಜನವರಿ 2021) ಕೇವಲ 20 ನಿಮಿಷ ಅವಧಿಯಲ್ಲಿ ಆಗಿರುವ ಘೋರ ದುರಂತದ ಸ್ಪೋಟದಿಂದ ಈ ಕ್ಷಣದವರೆಗೂ ಈ ಘಟನೆ ಬಗ್ಗೆ ಅನೇಕ ವರದಿ ವಿಶ್ಲೇಷಣೆಗಳು ಬರುತ್ತಲೇ ಇದೆ. ಆಗಿರುವ ಅನಾಹುತ, ನಷ್ಟ, ಜೀವಹಾನಿಗೆ ಪರಿಹಾರ ಏನು? ಕಾರಣರಾರು? ಶಿಕ್ಷೆ ಏನು? ಎನ್ನುವ ಚಚೆ೯ ಬದಿಗಿಟ್ಟು ಇಡೀ ಪ್ರಕರಣ ನೋಡುವ ಅನಿವಾಯ೯ತೆ ಇದೆ. ಗ್ರೌಂಡ್ ರಿಯಾಲಿಟಿ ವರದಿ,ಘಟನೆ ಸಮೀಪದ ವಾಸಿ ಆಗಿರುವ ಬರಹಗಾರರಾದ ರಾಜೇಂದ್ರ ಬುರುಡಿಗಟ್ಟೆ ಅವರ ಲೇಖನದಿಂದ ಪೇಸ್ ಬುಕ್ ಓದುಗರಿಗೆ ಗೊತ್ತಾಯಿತು. ಘಟನೆ ಸ್ಥಳದಿಂದ 3 ಕೀ ಮಿ ದೂರದ ಅಬ್ಬಲಗೆರೆ SR ಪೆಟ್ರೋಲ್ ಪಂಪ್ ಮಾಲಿಕರಾದ ನಿವೃತ್ತ ಕೃಷಿ ಬ್ಯಾಂಕ್ ನ ಜಿಲ್ಲಾ ವ್ಯವಸ್ಥಾಪಕರಾದ ಹಂದಿಗೋಳ್ ಸಾಹೇಬರು...