Blog number 1766. ಅವಸಾನದ ಅಂಚಿನಲ್ಲಿದೆ ಮಲೆನಾಡು ಗಿಡ್ಡ ಗೋತಳಿ, ದೇಶಿ ತಳಿ ಜಾನುವಾರು ಸಂರಕ್ಷಣೆ ಯೋಜನೆಯು ಸಾದಿಸಿದ್ದೇನು? ಬ್ಯಾಂಕುಗಳ ಅಸಹಕಾರ ಸರಿಯಾದೀತೆ?
#ಮಲೆನಾಡು_ಗಿಡ್ಡ_ದನದ_ತುಪ್ಪಕ್ಕೆ_ಬಾರೀ_ಬೆಲೆ_ಬಂದಿದೆ #ಮಲೆನಾಡು_ಗಿಡ್ಡ_ದನದ_ಹಾಲಿನ_A2_ಸೋಪಿಗೆ_ಬಾರೀ_ಬೇಡಿಕೆ #ಮಲೆನಾಡು_ಗಿಡ್ಡದ_ಸಗಣಿ_ಮೂತ್ರಕ್ಕೂ_ಬೇಡಿಕೆ #ಮೃತ_ಮಲೆನಾಡು_ಗಿಡ್ದದಿಂದ_ಗೊಬ್ಬರ_ಕೂಡ #ಮಲೆನಾಡು_ಗಿಡ್ದ_ಇದ್ದರೂ_ಸಾವಿರ_ಸತ್ತರೂ_ಸಾವಿರ_ಎಂಬ_ಗಾದೆ_ಮಾತು. #ಹೀಗಿದ್ದೂ #ಮಲೆನಾಡು_ಗಿಡ್ಡ_ತಳಿ_ಉಳಿದೀತೆ? #ಮಲೆನಾಡು_ಗಿಡ್ಡ_ತಳಿ_ಅವಸಾನದ_ಅಂಚನಲ್ಲಿದೆ. #ದೇಶಿತಳಿ_ಜಾನುವಾರು_ಸಂರಕ್ಷಣೆಗೆ_ಸರ್ಕಾರದ_ದೊಡ್ಡ_ದೊಡ್ಡ_ಘೋಷಣೆ #ಆದರೆ_ಬ್ಯಾಂಕುಗಳು_ಮಲೆನಾಡು_ಗಿಡ್ಡಕ್ಕೆ_ಸಾಲ_ನೀಡುವುದಿಲ್ಲ. ನಮ್ಮ ಬಾಲ್ಯದಲ್ಲಿ ನಮ್ಮ ಕೊಟ್ಟೆಗೆ ತುಂಬಾ ಮಲೆನಾಡು ಗಿಡ್ದ ಜಾನುವಾರುಗಳೇ ತುಂಬಿತ್ತು ಅದರಲ್ಲಿ ಗಿಡ್ಡಿ ಎಂಬ ದನ ತುಂಬಾ ಸಾದು ಅದರ ಎದುರು ಕುಳಿತರೆ ನಮ್ಮ ತಲೆ ನೆಕ್ಕಲು ಪ್ರಾರಂಬಿಸಿ ಕೆಚ್ಚಲಿನಲ್ಲಿ ಹಾಲು ಸುರಿಸುತ್ತಿತ್ತು ಇದರ ಸ್ವಭಾವಕ್ಕೆ ವಿರುದ್ದವಾದ ಬೋಳಿ ಎಂಬ ತುಡುಗಿನ ದನವೂ ಇತ್ತು, ಬೋಳಿ ಅಂತ ಹೆಸರು ಬರಲು ಕಾರಣ ಅದಕ್ಕೆ ಮುರುಟಿಕೊಂಡ ಚಿಕ್ಕ ಕೋಡುಗಳು. ಆಗೆಲ್ಲ ಈಗಿನ ಕಾಲದಂತ ಬೇಲಿಗಳು ಅಪರೂಪ ರೈತರು ಕಾಡಿನಿಂದ ಮರದ ಗೂಟ, ಬಳ್ಳಿ, ಪರಗಿ ಹಣ್ಣಿನ ಮುಳ್ಳು , ಬಿದಿರು ಮುಳ್ಳು ಸಂಗ್ರಹಿಸಿ ಎತ್ತಿನ ಗಾಡಿಯಲ್ಲಿ ತಂದು ಪ್ರತಿ ವರ್ಷ ಬೇಲಿ ಕಟ್ಟುತ್ತಿದ್ದರು ಅಂತಹ ಬೇಲಿ ಹಾರಿ ನಮ್ಮ ಬೋಳಿ ದನ ಪಸಲು ತಿನ್ನುತ್ತಿತ್ತು, ಏನೇ ಮಾಡಿದರೂ ಅದನ್ನು ಹಿಡಿಯಲು ಸಾಧ್ಯವೇ ಆಗುತ್ತಿರಲಿಲ್ಲ. ...