ದುಬಾರೆ_ಆನೆ_ದುರಂತ ತಮಿಳುನಾಡಿನ ಪ್ರವಾಸಿ ಮಹಿಳೆ ಮತ್ತು ಮಾರ್ತಾಂಡ ಎಂಬ ದಂತಗಳಿಲ್ಲದ ಗಂಡಾನೆ ಮೃತರಾಗಿದ್ದಾರೆ. ಕೋರೆ ಇಲ್ಲದ ಗಂಡಾನೆಗಳನ್ನ ಹೆಣ್ಣಾನೆಗಳು ಇಷ್ಟಪಡುವುದಿಲ್ಲ ಇದರಿಂದ ಕೋರೆ ಇರುವ ಆನೆಗಳಿಗೂ ಮತ್ತು ಕೋರೆ ಇಲ್ಲದ ಮಖ್ನಾ ಆನೆಗಳಿಗೂ ಕಾಳಗ ನಡೆಯುತ್ತಿರುತ್ತದೆ. ಪ್ರವಾಸಿಗಳು ಬೇಸಿಗೆ ರಜೆಯಲ್ಲಿ ಆನೆ ಕ್ಯಾಂಪ್ ಗಳಿಗೆ ಹೋಗುತ್ತಾರೆ, ಸಾಮಾನ್ಯವಾಗಿ ಆನೆ ಕ್ಯಾಂಪ್ ಗಳು ಹರಿಯುವ ನದಿ ನೀರಿನ ಪ್ರದೇಶವಾಗಿರುತ್ತದೆ. ಅಲ್ಲಿ ರಾತ್ರಿ ಹೊತ್ತು ಕಾಡಿನಲ್ಲಿರುವ ಸಾಕಿದ ಆನೆಗಳನ್ನ ಬೆಳಿಗ್ಗೆ ಆಹಾರಕ್ಕಾಗಿ ಮತ್ತು ಸ್ನಾನಕ್ಕಾಗಿ ಆನೆ ಕ್ಯಾಂಪಿಗೆ ಮಾವುತರು ಕರೆ ತರುತ್ತಾರೆ ಆಗ ಪ್ರವಾಸಿಗಳಿಗೆ ಪ್ರವೇಶ ಶುಲ್ಕ ಪಡೆದು ಆನೆಗಳ ಸ್ನಾನ ಮಾಡಿಸುವ ಸ್ಥಳದಲ್ಲಿ ಪ್ರವಾಸಿಗಳನ್ನು ಬಿಡುತ್ತಾರೆ, ಪ್ರವಾಸಿಗಳು ಆನೆಯ ಜೊತೆ ನಿರಾಟ ಆಡುವ ಸೆಲ್ಫಿ ವಿಡಿಯೋ ಮಾಡಿಕೊಳ್ಳುತ್ತಾರೆ ಇದರಿಂದ ಹೆಚ್ಚು ಪ್ರವಾಸೋದ್ಯಮದ ಆಕರ್ಷಣೆ ಆನೆ ಕ್ಯಾಂಪ್ ಗಳಾಗಿದೆ. ಇದೇ ರೀತಿ ಶಿವಮೊಗ್ಗ ಜಿಲ್ಲೆಯ #ಸಕ್ರೆಬೈಲು ಇದೆ, ಕೊಡಗಿನ #ದುಬಾರೆಯಲ್ಲಿ ದಂತವಿಲ್ಲದ #ಮಖ್ನಾ ಆನೆ ಮಾರ್ತಾಂಡ ನೀರಾಟದಲ್ಲಿದ್ದಾಗ ಅದರ ಮೇಲೆ ಕಂಜನ್ ಎಂಬ ದಸರಾ ಉತ್ಸವದಲ್ಲಿ ಭಾಗವಹಿಸುವ ಆನೆ ದಿಡೀರ್ ಆಗಿ ಮಾವುತನ ನಿಯಂತ್ರಣ ಮೀರಿ ದಾಳಿ ಮಾಡಿದೆ. ಇದರಿಂದ ಆಯತಪ್ಪಿ ಮರ್ತಾಂಡ ಆನೆ ಬಿದ್ದಿದ್ದು ಪ್ರವಾಸಿ ಮಹಿಳ...